ETV Bharat / city

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು

author img

By

Published : Aug 9, 2022, 9:47 AM IST

Updated : Aug 9, 2022, 9:58 AM IST

Praveen Nettaru
ಪ್ರವೀಣ್ ನೆಟ್ಟಾರು

Praveen Nettaru murder case: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಜೊತೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ(ದಕ್ಷಿಣ ಕನ್ನಡ): ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಇತೀಚೆಗೆ ಬಂಧಿತರಾಗಿರುವ ಸುಳ್ಯ ನಾವೂರು ನಿವಾಸಿ ಆಬಿದ್‌ ಮತ್ತು ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ್‌ನನ್ನು ನಿನ್ನೆ(ಸೋಮವಾರ) ಪುತ್ತೂರು ಡಿವೈಎಸ್​ಪಿ ಗಾನಾ.ಪಿ ಕುಮಾರ್ ನೇತೃತ್ವದ ಪೊಲೀಸ್‌ ತಂಡ ಸುಳ್ಯದ ಆಲೆಟ್ಟಿ ನಗರ ಕ್ರಾಸ್‌ನಲ್ಲಿರುವ ಎಸ್‌ಡಿಪಿಐ ಕಚೇರಿಗೆ ಕರೆ ತಂದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಸ್ಥಳ ತನಿಖೆಯ ವೇಳೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಾತ್ರವಲ್ಲದೇ ಇವರನ್ನು ಸುಳ್ಯ ಮತ್ತು ಬೆಳ್ಳಾರೆಯ ವಿವಿಧ ಸ್ಥಳಗಳಗೆ ಕರೆತಂದು ಮಹಜರು ಪ್ರಕ್ರಿಯೆ ನಡೆಸಲಾಯಿತು.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳಿಬ್ಬರು ಸುಳ್ಯದ ಕಚೇರಿಯಿಂದಲೇ ಪ್ರವೀಣ್‌ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು ಎನ್ನಲಾಗಿದೆ. ಇವರು ಹತ್ಯೆಯ ಸಂಚು ಕೂಡ ರೂಪಿಸಿದ್ದರು ಎನ್ನುವ ಅನುಮಾನದ ನಡುವೆ ಈ ಮಹಜರು ಪ್ರಕ್ರಿಯೆ ಮಹತ್ವ ಪಡೆದಿದೆ. ಈಗಾಗಲೇ ಪ್ರವೀಣ್‌ ಹತ್ಯೆ ನಡೆಸಿ ಪರಾರಿ ಆಗಿರುವ ಪ್ರಮುಖ ಹಂತಕರ ಜತೆಗೆ ಈ ಇಬ್ಬರು ನಿರಂತರ ನಿಕಟ ಸಂಪರ್ಕದಲ್ಲಿರುವುದು ಕೂಡ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಎಲ್ಲ ಕೋನಗಳಿಂದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಮಂಗಳೂರಿನವರಿಂದಲೇ ಪ್ರವೀಣ್ ನೆಟ್ಟಾರು ಕೊಲೆ: ಗೃಹ ಸಚಿವ ಆರಗ ಜ್ಞಾನೇಂದ್ರ

Last Updated :Aug 9, 2022, 9:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.