ETV Bharat / city

ಕೊರೊನಾ ಸೋಂಕಿತರ ಚಿಕಿತ್ಸೆಗೆ ಧಾರವಾಡ ಜಿಲ್ಲಾಡಳಿತದಿಂದ ಪ್ರತ್ಯೇಕ 10 ಆ್ಯಂಬ್ಯುಲೆನ್ಸ್

author img

By

Published : Apr 24, 2021, 3:19 PM IST

Updated : Apr 24, 2021, 5:09 PM IST

ambulance
ambulance

ಧಾರವಾಡ ಜಿಲ್ಲಾಡಳಿತ 10ಕ್ಕೂ ಹೆಚ್ಚು ಆ್ಯಂಬ್ಯುಲೆನ್ಸ್ ವಾಹನಗಳನ್ನು ಸೇವೆಗೆ ಸಿದ್ಧಪಡಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಸಿರು ನಿಶಾನೆ ತೋರಿಸುವ‌ ಮೂಲಕ ಚಾಲನೆ ನೀಡಿದರು.

ಹುಬ್ಬಳ್ಳಿ: ಜಗತ್ತನ್ನೇ ತಲ್ಲಣಗೊಳಿಸಿದ ಕಿಲ್ಲರ್ ಕೊರೊನಾ‌ ವೈರಸ್ ವಿರುದ್ಧದ ಹೋರಾಟದಲ್ಲಿ ಧಾರವಾಡ ಜಿಲ್ಲಾಡಳಿತ ಸಾಕಷ್ಟು ಶ್ರಮ ವಹಿಸುತ್ತಿದೆ. ಈಗ ಆ್ಯಂಬ್ಯುಲೆನ್ಸ್ ಸೇವೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಅಧುನಿಕ ತಂತ್ರಾಂಶದಲ್ಲಿ ಹೊಸ ನಿರ್ಧಾರ ಕೈಗೊಂಡಿದೆ. ಹಾಗಿದ್ದರೆ ಈ ಸೇವೆಯಲ್ಲಿ ಏನೆಲ್ಲಾ ಇದೆ ಎಂಬುವುದನ್ನು ತೋರಿಸ್ತೀವಿ ನೋಡಿ.

ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ‌ ವೈರಸ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳನ್ನು ಆ್ಯಂಬ್ಯುಲೆನ್ಸ್ ಸೇವೆಗೆ ಜಿಲ್ಲಾಡಳಿತ ಸಿದ್ಧಪಡಿಸಿದೆ. ಟೆಂಪೋ ಟ್ರಾವೆಲರ್​ಗಳನ್ನು ಆ್ಯಂಬ್ಯುಲೆನ್ಸ್ ಆಗಿ ಪರಿವರ್ತನೆ ಮಾಡಿದ್ದು, ಸೋಂಕಿತರಿಗೆ ತಕ್ಷಣ ಆಸ್ಪತ್ರೆಗೆ ಸಾಗಿಸಲು ವಿನೂತನ ಪ್ರಯತ್ನ ಕೈಗೊಂಡಿದೆ. ಅಲ್ಲದೆ ಜಿಲ್ಲಾಡಳಿತ ಎಲ್ಲಾ ರೀತಿಯಿಂದಲೂ ಸನ್ನದ್ಧವಾಗಿದ್ದು, ಪ್ರತಿಯೊಂದು ಆ್ಯಂಬ್ಯುಲೆನ್ಸ್​ನಲ್ಲಿ ಆಕ್ಸಿಜನ್ ಕಿಟ್, ನುರಿತ ಸ್ಟಾಫ್ ನರ್ಸ್ ಹಾಗೂ ಜಿ.ಪಿ.ಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರಿಂದ ಸೋಂಕಿತರಿಗೆ ತಕ್ಷಣವೇ ಚಿಕಿತ್ಸೆಗೆ ಒಳಪಡಿಸಲು ಇದು ಸಹಾಯಕವಾಗಲಿದೆ.

ಧಾರವಾಡ ಜಿಲ್ಲಾಡಳಿತದಿಂದ ಪ್ರತ್ಯೇಕ 10 ಆ್ಯಂಬ್ಯುಲೆನ್ಸ್

ಇನ್ನು ಜಿಲ್ಲಾಡಳಿತ 10ಕ್ಕೂ ಹೆಚ್ಚು ಆ್ಯಂಬ್ಯುಲೆನ್ಸ್ ವಾಹನಗಳನ್ನು ಸೇವೆಗೆ ಸಿದ್ಧಪಡಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಸಿರು ನಿಶಾನೆ ತೋರಿಸುವ‌ ಮೂಲಕ ಚಾಲನೆ ನೀಡಿದರು. ಈಗಾಗಲೇ ಜಿಲ್ಲೆಯಲ್ಲಿ 40 ಆ್ಯಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಈಗ ಸೋಂಕಿತರನ್ನು ಪ್ರತ್ಯೇಕವಾಗಿ ಕರೆತರಲು 10 ಖಾಸಗಿ ಆ್ಯಂಬ್ಯುಲೆನ್ಸ್​ಗಳನ್ನು ಸೇವೆಗೆ ಒಳಪಡಿಸಲಾಗಿದೆ.

ಜಿಲ್ಲಾಡಳಿತದ ಈ ನಿರ್ಧಾರ ಸಾಕಷ್ಟು ಅನುಕೂಲವಾಗಲಿದ್ದು, ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರು ಅಭಿನಂದನೆ ಸಲ್ಲಿಸಿದರು.

Last Updated :Apr 24, 2021, 5:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.