ETV Bharat / city

ಇಂದು ಮತ್ತಷ್ಟು ಇಳಿಕೆ ಕಂಡ ಸೋಂಕಿತರ ಸಂಖ್ಯೆ.. ಕರುನಾಡಿನಲ್ಲಿ ಇನ್ನೆರಡು ವಾರದಲ್ಲಿ 3ನೇ ಅಲೆ ಮುಕ್ತಾಯ!

author img

By

Published : Feb 8, 2022, 8:15 PM IST

karnataka-covid-report
karnataka-covid-report

ಜನವರಿ 23ರ ವೇಳೆಗೆ ಕೋವಿಡ್ ಕೇಸ್ ಹೆಚ್ಚಳವಾಗಬಹುದು ಅಂತಾ ತಜ್ಞ ವೈದ್ಯರು ಹೇಳಿದರು. ತಜ್ಞರ ಮಾತಿನಂತೆ ಜನವರಿ ತಿಂಗಳಲ್ಲಿ ಅತಿ ಹೆಚ್ಚು ಕೋವಿಡ್ ಕೇಸ್​ಗಳು ದಾಖಲು ಆಗಿದ್ದವು. ಇತ್ತ ಏರಿಕೆ ಬೆನ್ನಲ್ಲೇ ಕಠಿಣ ನಿಯಮಗಳನ್ನು ಸರ್ಕಾರ ಜಾರಿ ಮಾಡಿತ್ತು..

ಬೆಂಗಳೂರು : ರಾಜ್ಯದಲ್ಲಿ ದಿನ ಕಳೆದಂತೆ ಮೂರನೇ ಅಲೆ ಪ್ರಭಾವ ಕಡಿಮೆ ಆಗ್ತಿದೆ‌. ಕರುನಾಡಿನಲ್ಲಿ ಇನ್ನೆರಡು ವಾರದಲ್ಲಿ ಮೂರನೇ ಅಲೆ ಮುಕ್ತಾಯವಾಗುವ ಎಲ್ಲ ಲಕ್ಷಣಗಳು ಕಂಡು ಬರ್ತಿದ್ದು, ಇಂದು ಮತ್ತಷ್ಟು ಪಾಸಿಟಿವ್ ದರ ಇಳಿಕೆ‌ ಕಂಡಿದೆ.

88,797 ಮಂದಿಗೆ ಕೋವಿಡ್ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ 4,452 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,06,761 ಏರಿಕೆ ಆಗಿದ್ದು, ಪಾಸಿಟಿವ್ ದರವೂ ಶೇ.5.01 ರಷ್ಟಿದೆ. ಇತ್ತ 19,067 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 37,94,866 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ಸಕ್ರಿಯ ಪ್ರಕರಣಗಳು 72,414 ರಷ್ಟಿವೆ. ‌ಸೋಂಕಿಗೆ 51 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,447ಕ್ಕೆ ಏರಿಕೆ ಕಂಡಿದೆ. ಡೆತ್ ರೇಟ್ ಶೇ.1.14 ರಷ್ಟಿದೆ. ಇನ್ನು ವಿಮಾನ‌ ನಿಲ್ದಾಣದಲ್ಲಿ 1014 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 335 ವಿದೇಶಿಗರು ಹೈರಿಸ್ಕ್ ದೇಶದಿಂದ ಆಗಮಿಸಿದ್ದಾರೆ.

ಬೆಂಗಳೂರಿನಲ್ಲಿ 2,139 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,62,315 ಕ್ಕೆ ಏರಿದೆ. 8604 ಜನ ಡಿಸ್ಚಾರ್ಜ್ ಆಗಿದ್ದು, 17,16,457 ಮಂದಿ ಗುಣಮುಖರಾಗಿದ್ದಾರೆ. 17 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,708ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 29,149 ರಷ್ಟಿವೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್:
ಅಲ್ಪಾ - 156
ಬೇಟಾ - 08
ಡೆಲ್ಟಾ ಸಬ್ ಲೈನ್ ಏಜ್ - 4431
ಇತರೆ - 286
ಒಮಿಕ್ರಾನ್ - 1115

ಮೂರನೇ ಅಲೆ ಮುಕ್ತಾಯ : ಇನ್ನೆರಡು ವಾರಗಳಲ್ಲಿ ಮೂರನೇ ಅಲೆ ಮುಕ್ತಾಯವಾಗುವ ಮುನ್ಸೂಚನೆ ಸಿಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಕೋವಿಡ್ ಕೇಸ್​​ಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಕಳೆದ 10 ದಿನಗಳಿಂದ ಕೊರೊನಾ ಪ್ರಕರಣಗಳು ಇಳಿಮುಖವಾಗ್ತಿವೆ.

ಜನವರಿ 23ರ ವೇಳೆಗೆ ಕೋವಿಡ್ ಕೇಸ್ ಹೆಚ್ಚಳವಾಗಬಹುದು ಅಂತಾ ತಜ್ಞ ವೈದ್ಯರು ಹೇಳಿದರು. ತಜ್ಞರ ಮಾತಿನಂತೆ ಜನವರಿ ತಿಂಗಳಲ್ಲಿ ಅತಿ ಹೆಚ್ಚು ಕೋವಿಡ್ ಕೇಸ್​ಗಳು ದಾಖಲು ಆಗಿದ್ದವು. ಇತ್ತ ಏರಿಕೆ ಬೆನ್ನಲ್ಲೇ ಕಠಿಣ ನಿಯಮಗಳನ್ನು ಸರ್ಕಾರ ಜಾರಿ ಮಾಡಿತ್ತು.

ಕೇಸ್ ಇಳಿಕೆ ಬೆನ್ನಲ್ಲೇ ಎಲ್ಲಾ ನಿರ್ಬಂಧಗಳನ್ನ ಸಡಲಿಕೆ ಕೂಡ ಮಾಡಿತ್ತು.‌ ಸಡಿಲಿಕೆ ಬಳಿಕವೂ ಕೇಸ್ ಕಡಿಮೆ ಬರ್ತಿದ್ದು, ಇನ್ನೆರಡು ವಾರಗಳಲ್ಲಿ ಮೂರನೇ ಅಲೆ ಮುಕ್ತಾಯ ಎಂಬ ಅಭಿಪ್ರಾಯ ಕೇಳಿ ಬರ್ತಿದೆ.‌ ದೆಹಲಿ, ಮುಂಬೈನಲ್ಲೂ ಮೂರನೇ ಅಲೆ 3 ವಾರಗಳಲ್ಲಿ ಇಳಿಕೆ ಕಂಡಿದ್ದು, ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಮೂರನೇ ಅಲೆ ಮುಗಿಯುವ ಲಕ್ಷಣ ಗೋಚರವಾಗಿದೆ.‌

ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ರಾಜ್ಯದಲ್ಲಿ ಕಳೆದ 10 ದಿನಗಳಿಂದ ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿವೆ. ಇನ್ನೆರಡು ವಾರಗಳಲ್ಲಿ ಮೂರನೇ ಅಲೆ ಮುಗಿಯುವ ಲಕ್ಷಣಗಳು ಕಾಣಿಸ್ತಿದೆ. ಆದರೆ, ಈ ಸಮಯದಲ್ಲಿ ಜನರು ಮೈ ಮರೆಯಬಾರದು. ಕೋವಿಡ್ ಮಾರ್ಗವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಕಡ್ಡಾಯವಾಗಿ ಪಾಲಿಸಬೇಕು. ಸದ್ಯಕ್ಕೆ ಮತ್ತೊಂದು ಅಲೆ ಅಪ್ಪಳಿಸುವ ಸಾಧ್ಯತೆ ಕಮ್ಮಿ. ಆದರೆ, ಮತ್ತೊಂದು ಅಲೆ ಬರೋದಿಲ್ಲ ಎಂದು ಹೇಳಲಾಗುವುದಿಲ್ಲ. ಜನರು ಲಸಿಕೆ ಪಡೆದು ಸುರಕ್ಷಿತವಾಗಿರಬೇಕು ಅಂತಾ ಹೇಳಿದರು.

(ಇದನ್ನೂ ಓದಿ: ಹಿಜಾಬ್ ವಿವಾದ: ನ್ಯಾಯಾಲಯಕ್ಕೆ ಸಂವಿಧಾನವೇ ಭಗವದ್ಗೀತೆ ಎಂದು ಕೋರ್ಟ್​.. ವಕೀಲರ ವಾದ - ಪ್ರತಿವಾದಗಳು ಹೀಗಿದ್ದವು!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.