ETV Bharat / city

ವಿಜಯ್ ಪ್ರಕಾಶ್ ಗಾಯನಕ್ಕೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು.. ಮಂಗ್ಲಿ ಹಾಡು ಕೇಳಲು ನೂಕು ನುಗ್ಗಲು!

author img

By

Published : Oct 4, 2021, 5:27 PM IST

Updated : Oct 4, 2021, 8:48 PM IST

ವಿಜಯ್ ಪ್ರಕಾಶ್ ಗಾಯನಕ್ಕೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು
ವಿಜಯ್ ಪ್ರಕಾಶ್ ಗಾಯನಕ್ಕೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು

ವಿಜಯ ಪ್ರಕಾಶ್ ವೇದಿಕೆ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ತರವಲ್ಲ ತಗಿ ನಿನ್ನ ತಂಬೂರಿ, ಜೈ ಹೋ ಸೇರಿದಂತೆ ಇನ್ನಿತರ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಹೊಸಪೇಟೆ (ವಿಜಯನಗರ): ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಜಯ ಪ್ರಕಾಶ್ ಗಾಯನಕ್ಕೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮ:ವಿಜಯ್ ಪ್ರಕಾಶ್ ಗಾಯನ

ವಿಜಯ ಪ್ರಕಾಶ್ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ತರವಲ್ಲ ತಂಗಿ ನಿನ್ನ ತಂಬೂರಿ, ಜೈ ಹೋ ಸೇರಿದಂತೆ ಇನ್ನಿತರ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಸುಮಾರು ಅರ್ಧ ಗಂಟೆ ಕಾಲ ಸಂಗೀತ ರಸದೌತಣವನ್ನು ಅಭಿಮಾನಿಗಳಿಗೆ ಉಣಬಡಿಸಿದರು.

ಗಾಯಕಿ ಮಂಗ್ಲಿ ಹಾಡು ಆಲಿಸಲು ನೂಕು ನುಗ್ಗಲು:

ವಿಜಯನಗರ ಜಿಲ್ಲಾ ಸಮಾರೋಪ ಕಾರ್ಯಕ್ರಮದಲ್ಲಿ ನಿನ್ನೆ (ಭಾನುವಾರ) ಗಾಯಕಿ ಮಂಗ್ಲಿ ಅವರ ಗಾಯನವನ್ನು ಕೇಳಲು ಜನರು ಮುಗಿಬಿದ್ದರು. ಪ್ರೇಕ್ಷಕರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಬೀಸಿದರು. ತೆಲುಗು ಭಾಷೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸಿರುವ ಕಣ್ಣೆ ಅಂದಿರಿಂದಿ ಹಾಡಿಗೆ ಪಡ್ಡೆ ಹೈಕ್ಳು ಫುಲ್ ಪಿಧಾ ಆದರು.

ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮ: ಮಂಗ್ಲಿ ಗಾಯನ ನ

ಇದೇ ಸಂದರ್ಭದಲ್ಲಿ ಪ್ರೇಕ್ಷಕರು ಗಣ್ಯರ ಗ್ಯಾಲರಿಗೆ ನುಗ್ಗಲು ಪ್ರಯತ್ನಿಸಿದರು. ಅಲ್ಲದೇ, ಎಲ್​​ಇಡಿ ಪರದೆ ಮೇಲೆ ನಿಂತುಕೊಂಡರು. ಇದನ್ನು ಕಂಡ ಸಚಿವ ಆನಂದ ಸಿಂಗ್, ಪ್ರೇಕ್ಷಕರು ಸಹಕರಿಸಬೇಕು. ಅಲ್ಲದೇ, ಪೊಲೀಸರು ಪರಿಸ್ಥಿತಿಯನ್ನು ಹತೋಟೆಗೆ ತರಬೇಕು ಎಂದು ಸೂಚಿಸಿದರು. ಬಳಿಕ ಪೊಲೀಸರು ಲಾಠಿ ಮೂಲಕ ಪ್ರೇಕ್ಷಕರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.‌

Last Updated :Oct 4, 2021, 8:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.