ETV Bharat / city

ಕಬ್ಬಿನ ಬಿಲ್ ನಿಗದಿ ಮಾಡಿದ ಬೆಳಗಾವಿ ಜಿಲ್ಲಾಡಳಿತ: ರೈತರ ಹೋರಾಟಕ್ಕೆ ಸಿಕ್ಕಿತು ಬೆಲೆ

author img

By

Published : Oct 24, 2020, 9:43 PM IST

Updated : Oct 24, 2020, 10:16 PM IST

'ಈಟಿವಿ ಭಾರತ ಕಬ್ಬಿನ ಬಿಲ್ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸಿ: ರೈತರ ಆಗ್ರಹ' ಎಂಬ ಶೀರ್ಷಿಕೆ ಅಡಿ ಸುದ್ದಿ ಬಿತ್ತರಿಸಿತ್ತು. ರಾಜ್ಯ ಸರ್ಕಾರದ ಆದೇಶದಂತೆ ಕಬ್ಬಿನ ಎಫ್​ಆರ್​ಪಿ ದರ ನಿಗಧಿಗೊಳಿಸಿ ಜಿಲ್ಲಾಡಳಿತ ಅದೇಶ ಹೊರಡಿಸಿದೆ.

etv bharat impact Sugarcane bill Fixed belagavi
ಕಬ್ಬಿನ ಬಿಲ್ ನಿಗಧಿ ಮಾಡಿದ ಬೆಳಗಾವಿ ಜಿಲ್ಲಾಡಳಿತ, ಈಟಿವಿ ಭಾರತ ಫಲಶ್ರುತಿ...

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಕಬ್ಬು ಬೆಳೆಯನ್ನು ಬೆಳೆಯಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಕಾರ್ಖಾನೆಗಳು ಬೆಲೆ ನಿಗದಿ ಮಾಡದೇ ಕಬ್ಬು ಬೆಳೆ ಕಟಾವು ಮಾಡಲು‌ ಮುಂದಾಗಿದ್ದವು. ಈ ವಿಚಾರವಾಗಿ 'ಈಟಿವಿ ಭಾರತ ಕಬ್ಬಿನ ಬಿಲ್ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸಿ: ರೈತರ ಆಗ್ರಹ' ಎಂಬ ಶೀರ್ಷಿಕೆ ಅಡಿ ಸುದ್ದಿ ಬಿತ್ತರಿಸಿತ್ತು. ರಾಜ್ಯ ಸರ್ಕಾರದ ಆದೇಶದಂತೆ ಕಬ್ಬಿನ ಎಫ್​ಆರ್​ಪಿ ದರ ನಿಗಧಿಗೊಳಿಸಿ ಜಿಲ್ಲಾಡಳಿತ ಅದೇಶ ಹೊರಡಿಸಿದೆ.

sugarcane
ಕಬ್ಬಿನ ಬಿಲ್ ನಿಗದಿ ಮಾಡಿದ ಬೆಳಗಾವಿ ಜಿಲ್ಲಾಡಳಿತ

ಈಗಾಗಲೇ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಪ್ರಾರಂಭಿಸಿವೆ. ಆದರೆ, ಬೆಲೆ ಮಾತ್ರ ಯಾವ ಸಕ್ಕರೆ ಕಾರ್ಖಾನೆಗಳು ನಿಗದಿ ಮಾಡದೇ ಪ್ರಾರಂಭಿಸಿವೆ. ಹೀಗಾಗಿ ರೈತರು ತಮ್ಮ ಕಬ್ಬಿನ ಬೆಳೆಗೆ ಬೆಲೆ ನಿಗದಿ‌ ಮಾಡದೆ ರೈತರು ಗೊಂದಲದಲ್ಲಿದ್ದರು. ಆದರೆ, ಜಿಲ್ಲಾಡಳಿತ ಬೆಳಗಾವಿ ಜಿಲ್ಲೆಯಲ್ಲಿರುವ ಸಕ್ಕರೆ ಬೆಲೆಗಳನ್ನು ನಿಗದಿ ಮಾಡಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿವೆ.

sugarcane
ಕಬ್ಬಿನ ಬಿಲ್ ನಿಗದಿ ಮಾಡಿದ ಬೆಳಗಾವಿ ಜಿಲ್ಲಾಡಳಿತ

ಇದನ್ನು ಓದಿ: ಕಬ್ಬಿನ ಬಿಲ್ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸಿ: ರೈತರ ಆಗ್ರಹ

ಬೆಳಗಾವಿ ಜಿಲ್ಲೆಯಲ್ಲಿ ಇರುವ ಸಕ್ಕರೆ ಕಾರ್ಖಾನೆಗಳು ನಿಗದಿ ಮಾಡಿರುವ ಬಿಲ್‌ಗಳ ವಿವರ:

  • ಉಗಾರ ಶುಗರ್, ಉಗಾರ - 3,067
  • ವೆಂಕಟೇಶ್ವರ ಪವರ್​ ಪ್ರಾಜೆಕ್ಟ್ ಬೆಡಕಿಹಾಳ - 3,477
  • ವಿಶ್ವರಾಜ್ ಶುಗರ್, ಬಾಗೇವಾಡಿ - 3,129
  • ಸೌಭಾಗ್ಯ ಲಕ್ಷ್ಮಿ ಶುಗರ್, ಹೀರೆನಂದಿ - 3,021
  • ಬೆಳಗಾಂವ ಶುಗರ್, ಹುದಲಿ - 3,243
  • ಹರ್ಷಾ ಶುಗರ್ ಸವದತ್ತಿ - 3,129
  • ಅಥಣಿ ಶುಗರ್, ಅಥಣಿ - 3,035
  • ಲೈಲಾ ಶುಗರ್, ಖಾನಾಪೂರ - 3,320
  • ಚಿದಾನಂದ ಕೋರೆ ಸಹಕಾರಿ ಚಿಕ್ಕೋಡಿ - 3,353
  • ಪ್ಯಾರಿ ಶುಗರ್, ರಾಮದುರ್ಗ - 3,363
  • ಘಟಪ್ರಭಾ ಸಹಕಾರಿ, ಸಂಗನಕೇರಿ - 2,864
  • ಗೋಕಾಕ ಶುಗರ್, ಗೋಕಾಕ - 3,198
  • ಹಾಲಸಿದ್ದನಾಥ ಸಹಕಾರಿ, ನಿಪ್ಪಾಣಿ - 3,349
  • ಹಿರಣ್ಯಕೇಶಿ ಸಹಕಾರಿ, ಸಂಕೇಶ್ವರ - 3,055
  • ಕೃಷ್ಣಾ ಸಹಕಾರಿ, ಅಥಣಿ - 2,993
  • ಮಲಪ್ರಭಾ ಸಹಕಾರಿ, ಎಂ ಕೆ ಹುಬ್ಬಳ್ಳಿ - 2,779
  • ರೇಣುಕಾ ಶುಗರ್, ರಾಯಬಾಗ - 3,055
  • ರೇಣುಕಾ ಶುಗರ್, ಅಥಣಿ - 2,993
  • ರೇಣುಕಾ ಶುಗರ್, ಮುನವಳ್ಳಿ - 2,841
  • ಶಿರಗುಪ್ಪಿ ಶುಗರ್, ಕಾಗವಾಡ - 3,425
  • ಸೋಮೇಶ್ವರ ಸಹಕಾರಿ, ಬೈಲಹೊಂಗಲ - 3,209
  • ಶಿವಶಕ್ತಿ ಶುಗರ್, ರಾಯಬಾಗ - 3,157
Last Updated :Oct 24, 2020, 10:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.