ETV Bharat / business

ಮುಂಬೈ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 379 ಅಂಕ ಏರಿಕೆ, 17,800 ದಾಟಿದ ನಿಫ್ಟಿ

author img

By

Published : Aug 16, 2022, 4:39 PM IST

ಮಂಗಳವಾರದ ವಹಿವಾಟಿನಲ್ಲಿ ಏರಿಕೆಯಲ್ಲಿ ಕೊನೆಗೊಂಡ ಬಿಎಸ್​ಇ ಸೆನ್ಸೆಕ್ಸ್. ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್​ಡಿಎಫ್​​ಸಿ ಶೇರುಗಳ ಖರೀದಿ ಭರಾಟೆ.

ಸೆನ್ಸೆಕ್ಸ್
Sensex

ಮುಂಬೈ: ಶೇರು ಮಾರುಕಟ್ಟೆಯ ಬೆಂಚ್‌ಮಾರ್ಕ್ ಬಿಎಸ್‌ಇ ಸೆನ್ಸೆಕ್ಸ್ ಮಂಗಳವಾರ 379 ಪಾಯಿಂಟ್‌ಗಳಷ್ಟು ಏರಿಕೆಯೊಂದಿಗೆ ಕೊನೆಗೊಂಡಿದೆ. ತೈಲ ಮತ್ತು ಅನಿಲ, ಬ್ಯಾಂಕಿಂಗ್ ಮತ್ತು ಆಟೋ ಷೇರುಗಳಲ್ಲಿನ ಲಾಭಗಳ ಕಾರಣದಿಂದ ಸೆನ್ಸೆಕ್ಸ್​ ಗೆಲುವಿನ ಓಟ ಮುಂದುವರಿಸಲು ನೆರವಾಯಿತು.

30 ಷೇರುಗಳ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 379.43 ಪಾಯಿಂಟ್‌ ಅಥವಾ ಶೇಕಡಾ 0.64 ರಷ್ಟು ಪ್ರಗತಿ ಸಾಧಿಸಿ 59,842.21 ರಲ್ಲಿ ಸ್ಥಿರವಾಯಿತು. ದಿನದ ಅವಧಿಯಲ್ಲಿ ಇದು 460.25 ಪಾಯಿಂಟ್‌ ಅಥವಾ 0.77 ರಷ್ಟು ಜಿಗಿದು 59,923.03 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 127.10 ಪಾಯಿಂಟ್‌ ಅಥವಾ ಶೇಕಡಾ 0.72 ರಷ್ಟು ಏರಿಕೆಯಾಗಿ 17,825.25 ಕ್ಕೆ ತಲುಪಿತು. ಇದರಲ್ಲಿನ 42 ಷೇರುಗಳು ಏರಿಕೆ ದಾಖಲಿಸಿದವು.

ಜುಲೈನಲ್ಲಿ ಸಗಟು ಬೆಲೆ-ಆಧಾರಿತ ಹಣದುಬ್ಬರವು ಐದು ತಿಂಗಳ ಕನಿಷ್ಠ ಶೇ 13.93ಕ್ಕಿಳಿದ ನಂತರ ಹಣದುಬ್ಬರದ ಆತಂಕ ಕಡಿಮೆಯಾಗಿದ್ದು ಮತ್ತು ಸೂಚ್ಯಂಕದ ಪ್ರಮುಖ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್​ಡಿಎಫ್​​ಸಿ ಶೇರುಗಳ ಖರೀದಿ ಭರಾಟೆಯಿಂದ ಸೆನ್ಸೆಕ್ಸ್​ ಏರಿಕೆಯ ವೇಗ ಹೆಚ್ಚಾಯಿತು.

ಮಹೀಂದ್ರ ಆಂಡ್ ಮಹೀಂದ್ರ, ಮಾರುತಿ, ಏಷ್ಯನ್ ಪೇಂಟ್ಸ್, ಹಿಂದೂಸ್ತಾನ್ ಯೂನಿಲಿವರ್, ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಮುನ್ನಡೆ ಸಾಧಿಸಿದವು. ಮತ್ತೊಂದೆಡೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರ್ತಿ ಏರ್‌ಟೆಲ್, ಬಜಾಜ್ ಫೈನಾನ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಎನ್‌ಟಿಪಿಸಿ ಕೆಳಗಿಳಿದವು.

ಏಷ್ಯಾದಲ್ಲಿ, ಸಿಯೋಲ್ ಮತ್ತು ಶಾಂಘೈ ಮಾರುಕಟ್ಟೆಗಳು ಏರಿಕೆಯಲ್ಲಿ ಕೊನೆಗೊಂಡರೆ, ಟೋಕಿಯೊ ಮತ್ತು ಹಾಂಗ್ ಕಾಂಗ್ ಕೆಳಮಟ್ಟದಲ್ಲಿ ವಹಿವಾಟು ಮುಗಿಸಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರತೀಯ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದಾರೆ. ಶುಕ್ರವಾರ ಅವರು 3,040.46 ಕೋಟಿ ರೂಪಾಯಿ ಮೌಲ್ಯದ ಶೇರುಗಳನ್ನು ಖರೀದಿಸಿದ್ದಾರೆ ಎಂದು ಶೇರು ವಿನಿಮಯ ಕಚೇರಿ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.