ETV Bharat / business

ಮುಂಬೈನಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್​ ಬೆಲೆ... ಬೆಂಗಳೂರಲ್ಲಿ ಎಷ್ಟಿದೆ?

author img

By

Published : May 29, 2021, 11:47 AM IST

fuel price in India
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ

ಪ್ರತಿ ಲೀಟರ್‌ ಪೆಟ್ರೋಲ್​ಗೆ ಇಂದು 25 ಪೈಸೆ ಹಾಗೂ ಡೀಸೆಲ್​ಗೆ 30 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್​​ ಪೆಟ್ರೋಲ್​ ಬೆಲೆ 97.07 ರೂ. ಹಾಗೂ ಡೀಸೆಲ್​ ಬೆಲೆ 89.99 ರೂ.ಗೆ ಹೆಚ್ಚಳವಾಗಿದೆ.

ಮುಂಬೈ: ದೇಶದ ಜನರು ಕೋವಿಡ್​ ಎರಡನೇ ಅಲೆಯಲ್ಲಿ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ವೇಳೆಯಲ್ಲಿ ದಿನದಿಂದ ದಿನಕ್ಕೆ ತೈಲ ಮಾರುಕಟ್ಟೆ ಕಂಪನಿಗಳು ಇಂಧನ ಬೆಲೆಯನ್ನು ಹೆಚ್ಚಿಸುತ್ತಲೇ ಇವೆ. ಒಂದೇ ತಿಂಗಳಲ್ಲಿ 16 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ.

ಇಂದು ಮತ್ತೆ ಲೀಟರ್‌ ಪೆಟ್ರೋಲ್​ಗೆ 25 ಪೈಸೆ ಹಾಗೂ ಡೀಸೆಲ್​ಗೆ 30 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ ನೂರು ರೂಪಾಯಿ ಗಡಿ ದಾಟಿದ್ದು, ಇತರ ಮೆಟ್ರೋ ನಗರಗಳಿಗಿಂತ ಮುಂಬೈನಲ್ಲೇ ಡೀಸೆಲ್ ಬೆಲೆ ಅಧಿಕವಾಗಿದೆ.​ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 93.94 ರೂ. ಹಾಗೂ ಡೀಸೆಲ್​ ಬೆಲೆ 84.89 ರೂ.ಗೆ ಏರಿಕೆಯಾಗಿದೆ.

ಈ ಬೆಲೆ ಏರಿಕೆ ಬೆಳವಣಿಗೆಯು ದೇಶದ ಮೆಟ್ರೋ ನಗರಗಳಿಗೆ ಅನ್ವಯವಾಗಲಿದ್ದು, ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂದಿನ ಇಂಧನ ಬೆಲೆ ಈ ಕೆಳಕಂಡಂತಿದೆ.

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು97.07 ರೂ. 89.99 ರೂ.
ದೆಹಲಿ93.94 ರೂ. 84.89 ರೂ.
ಕೋಲ್ಕತ್ತಾ93.97 ರೂ. 87.74 ರೂ.
ಮುಂಬೈ100.19 ರೂ. 96.55 ರೂ.
ಚೆನ್ನೈ95.51 ರೂ. 89.65 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.