ETV Bharat / bharat

ಒಂದೆಡೆ ಬಿಸಿಲಿನ ಬೇಗೆಗೆ ವರ ಸಾವು.. ಇನ್ನೊಂದೆಡೆ ನನಗೆ ಆ ವ್ಯಕ್ತಿ ಬೇಡವೆಂದು ಮದುವೆ ನಿಲ್ಲಿಸಿದ ವಧು!

author img

By

Published : Jun 15, 2023, 9:38 AM IST

Two marriage cancel  cheating and groom died  marriage cancelled news  ಬಿಸಿಲಿನ ಬೇಗೆಗೆ ವರ ಸಾವು  ವಂಚಕ ಬೇಡವೆಂದು ಮದುವೆ ನಿಲ್ಲಿಸಿದ ವಧು  ತೆಲಂಗಾಣದಲ್ಲಿ ದುರಂತ ಘಟನೆ  ಬಿಸಿಲಿನ ಹೊಡತಕ್ಕೆ ಮಧುಮಗ ಸಾವು  marriage cancelled  ಮದುವೆ ಎಂದಾಕ್ಷಣ ಸಹಜವಾಗಿ ಅಲ್ಲಿ ಸಂಭ್ರಮ  ಕೆಲವೇ ಕ್ಷಣಗಳಲ್ಲಿ ಎರಡು ಮದುವೆಗಳು
ಬಿಸಿಲಿನ ಬೇಗೆಗೆ ವರ ಸಾವು

Marriage Cancelled: ತೆಲಂಗಾಣದಲ್ಲಿ ದುರಂತ ಘಟನೆ ಸಂಭವಿಸಿದೆ. ಕೆಲವೇ ಕ್ಷಣಗಳಲ್ಲಿ ನಡೆಯಬೇಕಾಗಿದ್ದ ಮದುವೆಗಳೆರಡು ರದ್ದಾಗಿದ್ದಾವೆ. ಇದಕ್ಕೆ ಕಾರಣಗಳು ಏನೆಂಬುದು ತಿಳಿಯೋಣ ಬನ್ನಿ..

ಕೋಮರಂ ಭೀಮ್ ಆಸಿಫಾಬಾದ್​, ತೆಲಂಗಾಣ: ಇನ್ನು ಕೆಲವೇ ಕ್ಷಣಗಳಲ್ಲಿ ಎರಡು ಮದುವೆಗಳು ನಡೆಯಬೇಕಾಗಿತ್ತು. ಆದರೆ ಈ ಎರಡು ಮದುವೆಗಳು ಕೊನೆಯ ಸಂದರ್ಭದಲ್ಲಿ (Marriage Cancelled) ರದ್ದಾಗಿವೆ. ಒಂದು ಪ್ರಕರಣದಲ್ಲಿ ವರ ಬಿಸಿಲಿನ ಬೇಗೆಗೆ ಸಾವನ್ನಪ್ಪಿದ್ರೆ, ಇನ್ನೊಂದು ಪ್ರಕರಣದಲ್ಲಿ ವರ ನಿಜ ಸ್ವರೂಪ ಬಯಲಾಗಿ ಮದುವೆಗಳು ರದ್ದಾಗಿವೆ.

ಬಿಸಿಲಿನ ಹೊಡತಕ್ಕೆ ಮಧುಮಗ ಸಾವು: ಮದುವೆ ಎಂದಾಕ್ಷಣ ಸಹಜವಾಗಿ ಅಲ್ಲಿ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ಬಂಧು ಬಳಗದವರು ಸೇರಿದಂತೆ ಅನೇಕರು ಮದುವೆಗೆ ಆಗಮಿಸಿರುತ್ತಾರೆ. ಬಾಜಾ ಭಜಂತ್ರಿ, ನೃತ್ಯ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಂದ ಮದುವೆ ಮನೆ ಸಂಭ್ರಮದಲ್ಲಿ ತೇಲಿರುತ್ತದೆ. ಆದರೆ ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆಯಾಗಬೇಕಿದ್ದ ವರ ಬಿಸಿಲ ಬೇಗೆಯಿಂದ ಸಾವನ್ನಪ್ಪಿದ್ದಾನೆ.

ಕುಟುಂಬಸ್ಥರು ಹಾಗೂ ಸಂಬಂಧಿಕರು ಹೇಳುವ ಪ್ರಕಾರ, ತೆಲಂಗಾಣದ ಕೋಮರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕೌತಾಳ ತಾಲೂಕಿನ ಗುಡ್ಲಬೋರಿ ಗ್ರಾಮದ ನಿವಾಸಿ ಗುಂಡ್ಲ ಶ್ಯಾಮರಾವ್ - ಯಶೋದಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇವರಲ್ಲಿ ಹಿರಿಯ ಮಗ ತಿರುಪತಿ (32)ಗೆ ಮಂಚ್ಯಾಳ ಜಿಲ್ಲೆಯ ಭೀಮಿಯ ಹುಡುಗಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಬುಧವಾರ ಗುಡ್ಲಬೋರಿನಲ್ಲಿ ಮದುವೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದವು.

ಮದುವೆ ಕಾರ್ಯಗಳಲ್ಲಿ ನಿರತರಾಗಿದ್ದ ತಿರುಪತಿ ಮಂಗಳವಾರ ಬಿಸಿಲಿನ ಝಳಕ್ಕೆ ಸಿಲುಕಿ ಅಸ್ವಸ್ಥಗೊಂಡಿದ್ದರು. ತಾಲೂಕಿನ ಕೇಂದ್ರದ ಖಾಸಗಿ ಆಸ್ಪತ್ರೆಗೆ ತೋರಿಸಿ ನಂತರ ಸಂಜೆ ಉತ್ತಮ ಚಿಕಿತ್ಸೆಗಾಗಿ ಕಾಗಜನಗರಕ್ಕೆ ರವಾನಿಸಲಾಯಿತು. ಮಂಗಳವಾರ ಮಧ್ಯರಾತ್ರಿ ಅವರ ಆರೋಗ್ಯ ಹಠಾತ್ ಹದಗೆಟ್ಟಿದ್ದರಿಂದ ಅವರನ್ನು ಮಂಚ್ಯಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮುಂಜಾನೆ 3 ಗಂಟೆ ಸುಮಾರಿಗೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ತಿರುಪತಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ದೇವರು ನಮ್ಮನ್ನು ಕರೆದುಕೊಂಡು ಹೋದರೆ ಒಳ್ಳೆಯದು: 'ಆಸರೆಯಾಗಬೇಕೆಂದು ಬಯಸಿದ ಮಕ್ಕಳು ನಮ್ಮ ಕಣ್ಣಮುಂದೆಯೇ ಒಬ್ಬೊಬ್ಬರಾಗಿ ಇಹಲೋಕ ತ್ಯಜಿಸುತ್ತಿದ್ದಾರೆ. ನಾವು ಬದುಕಲು ಏನು ಮಾಡಬೇಕು?.. ಆ ದೇವರೇ ನಮ್ಮನ್ನು ಕರೆದುಕೊಂಡು ಹೋಗಿದ್ದರೆ ಚೆನ್ನಾಗಿತ್ತು' ಎಂದು ಮೃತನ ಪೋಷಕರು ಅಳಲು ತೋಡಿಕೊಂಡರು. ಗುಡ್ಲಬೋರಿಯ ಸರಪಂಚ ಆಗಿದ್ದ ಇವರ ಕಿರಿಯ ಪುತ್ರ ಗುಂಡ್ಲ ಶ್ರೀನಿವಾಸ್ ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿರುವುದು ಗಮನಾರ್ಹ. ಈಗ ಗುಂಡ್ಲ ಶ್ಯಾಮರಾವ್ - ಯಶೋದಾ ದಂಪತಿಗೆ ಉಳಿದಿರುವುದು ಒಬ್ಬನೇ ಮಗ..

ಪ್ರೇಮ ವಿವಾಹ ನಿಲ್ಲಿಸಿದ ವಧು: ಇನ್ನು ಕೆಲವೇ ನಿಮಿಷಗಳಲ್ಲಿ ಮದುವೆ ನಡೆಯಬೇಕಿತ್ತು.. ಅಷ್ಟರಲ್ಲಿ ವರನ ನಿಜ ಸ್ವರೂಪ ಬಯಲಾಗಿದೆ. ಪೊಲೀಸರ ಪ್ರವೇಶದಿಂದ ಅ ಮದುವೆ ಅರ್ಧಕ್ಕೆ ನಿಂತಿರುವ ಘಟನೆ ಆಸಿಫಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರ ಪ್ರಕಾರ.. ಕೌತಾಳ ತಾಲೂಕಿನ ಬೋಧನಪಲ್ಲಿ ಗ್ರಾಮದ ಎಟಕರಿ ಸಾಯಿ (27) ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಯುವತಿಯೊಬ್ಬಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಅದು ಸ್ವಲ್ಪ ಸಮಯದಲ್ಲೇ ಪ್ರೀತಿಗೂ ತಿರುಗಿತ್ತು. ನಾಲ್ಕು ವರ್ಷಗಳಿಂದ ಜೊತೆಯಾಗಿ ಸುತ್ತಾಡಿದ ಬಳಿಕ ಮದುವೆಯಾಗುವುದಾಗಿ ಯುವಕ ಸಾಯಿ ನಂಬಿಸಿದ್ದಾನೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಆಕೆ ಗರ್ಭಪಾತ ಮಾಡಿಸಿಕೊಂಡಿದ್ದಳು. ಇವರಿಬ್ಬರ ಪ್ರೀತಿಯ ವಿಚಾರ ಯುವತಿ ಕುಟುಂಬಸ್ಥರಿಗೆ ತಿಳಿದಿದೆ. ಅಂದಿನಿಂದ ಸಾಯಿ ಯುವತಿಯೊಂದಿಗೆ ಮಾತನಾಡಿರಲಿಲ್ಲ.

ಯುವತಿಗೆ ಗೊತ್ತಿಲ್ಲದೇ ಸಾಯಿ ಹನುಮಕೊಂಡ ಜಿಲ್ಲೆಯ ಕಮಲಾಪುರ ತಾಲೂಕಿನ ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧನಾಗಿದ್ದ. ಈ ವಿಷಯ ತಿಳಿದ ಯುವತಿ ನೇರ ಕಲ್ಯಾಣ ಮಂಟಪಕ್ಕೆ ತೆರಳಿದ್ದಾಳೆ. ಆಗ ಎಲ್ಲರ ಮುಂದೆ ಯುವಕನಿಗೆ ಕ್ಲಾಸ್​ ತೆಗೆದುಕೊಂಡ ಯುವತಿ, ಆತ ಕಳೆದ ತಿಂಗಳು ಅಂದ್ರೆ ಮೇ 28ರಂದು ನನಗೆ ತಾಳಿ ಕಟ್ಟಿದ್ದಾನೆ. ತಾಳಿ ಕಟ್ಟಿದ ಮರುದಿನವೇ ನನ್ನನ್ನು ಒಂಟಿಯಾಗಿ ಬಿಟ್ಟ ಹೋಗಿದ್ದಾನೆ ಎಂದು ಘಟನೆಯ ವಿವರವನ್ನ ಅಲ್ಲಿ ಸೇರಿದ ಜನರ ಮುಂದೆ ಯುವತಿ ಬಹಿರಂಗ ಪಡಿಸಿದ್ದಳು.

ಈ ತಿಂಗಳ 12 ರಂದು ಸಂತ್ರಸ್ತ ಯುವತಿ ಕೌತಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ಯುವಕನ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಸಾಯಿ ಅವರ ಮದುವೆ ಬುಧವಾರ ನಡೆಯಲಿದೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ ನಂತರ ಕೌತಾಳ ಎಸ್‌ಎಸ್‌ಐ ವಿಜಯ್ ಮತ್ತು ಸಿಬ್ಬಂದಿ ಹನುಮಕೊಂಡ ಜಿಲ್ಲೆಯ ಕಮಲಾಪುರ ಮಂಡಲದ ಗ್ರಾಮಕ್ಕೆ ಆಗಮಿಸಿದ್ದರು.

ಕಮಲಾಪುರ ಎಸ್​ಐ ಮೋಟಂ ಸತೀಶನ ಸಹಾಯದಿಂದ ಕಲ್ಯಾಣ ಮಂಟಪಕ್ಕೆ ತೆರಳಿದ್ದರು. ಪೊಲೀಸರ ಆಗಮನವನ್ನು ಕಂಡ ಸಾಯಿ ರೂಂನಲ್ಲಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಸ್ವಲ್ಪ ಹೊತ್ತಿನ ನಂತರ ಪೊಲೀಸರು ಒಳಪ್ರವೇಶಿಸಿ ವಧುವಿನ ಮನೆಯವರೊಂದಿಗೆ ಮಾತನಾಡಿದ್ದರು. ಸತ್ಯ ಹೇಳಿದ ನಂತರ ಮದುವೆಯನ್ನು ನಿಲ್ಲಿಸಲಾಗಿದ್ದು, ಪೊಲೀಸರು ಸಾಯಿಯನ್ನು ಬಂಧಿಸಿ, ಕ್ರಮ ಕೈಗೊಂಡಿದ್ದಾರೆ.

ಓದಿ: Live in relationship: ಲಿವ್ ಇನ್ ಜೋಡಿ ವಿಚ್ಛೇದನ ಕೋರುವಂತಿಲ್ಲ: ಕೇರಳ ಹೈಕೋರ್ಟ್​ ಮಹತ್ವದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.