ETV Bharat / bharat

ಹಕ್ಕಿ ಜ್ವರದ ಭೀತಿ: ಪಂಚಕುಲದಲ್ಲಿ 20 ಸಾವಿರ ಕೋಳಿಗಳ ಮಾರಣಹೋಮ

author img

By

Published : Jan 12, 2021, 9:45 AM IST

ಹರಿಯಾಣದ ಪಂಚಕುಲದಲ್ಲಿ ಈಗಾಗಲೇ ಸಾವಿರಾರು ಕೋಳಿಗಳು ಹಕ್ಕಿ ಜ್ವರಕ್ಕೆ ಬಲಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೋಳಿ ಸಾಕಣೆ ಕೇಂದ್ರಗಳಲ್ಲಿರುವ 20 ಸಾವಿರ ಕೋಳಿಗಳನ್ನು ಹತ್ಯೆ ಮಾಡಲಾಗಿದೆ.

twenty thousand chickens killed after bird flu threat in panchkula
ಪಂಚಕುಲದಲ್ಲಿ 20 ಸಾವಿರ ಕೋಳಿಗಳ ಮಾರಣಹೋಮ

ಪಂಚಕುಲ: ಹರಿಯಾಣ ಸೇರಿದಂತೆ ದೇಶದ 9 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಹಕ್ಕಿ ಜ್ವರ ಅಂಟುವ ಭೀತಿಯಲ್ಲಿ ಹರಿಯಾಣದ ಪಂಚಕುಲದಲ್ಲಿ 20 ಸಾವಿರ ಕೋಳಿಗಳನ್ನು ಕೊಲ್ಲಲಾಗಿದೆ.

ಭಾರತ ಸರ್ಕಾರ ಮತ್ತು ಪಶುಸಂಗೋಪನಾ ಇಲಾಖೆ ಸೂಚನೆಯಂತೆ ಎಲ್ಲ ಜಿಲ್ಲೆಗಳಲ್ಲಿ ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಂಚಕುಲದಲ್ಲಿ ಈಗಾಗಲೇ ಸಾವಿರಾರು ಕೋಳಿಗಳು ಹಕ್ಕಿ ಜ್ವರಕ್ಕೆ ಬಲಿಯಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರದೇಶದ ಸುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿನ ಕೋಳಿ ಸಾಕಣೆ ಕೇಂದ್ರಗಳಲ್ಲಿರುವ ಒಟ್ಟು 20 ಸಾವಿರ ಕೋಳಿಗಳನ್ನು ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ - ಹಕ್ಕಿ ಜ್ವರ ಹರಡದಂತೆ ನಿಗಾ ವಹಿಸಿ: ಎಲ್ಲ ರಾಜ್ಯಗಳ ಸಿಎಂಗಳಿಗೆ ಪ್ರಧಾನಿ ಸಲಹೆ

ಜಿಲ್ಲಾಡಳಿತ ನಿಯೋಜಿಸಿದ ಕ್ಷಿಪ್ರ ಕ್ರಿಯಾ ಪಡೆಗಳು ಈ ಕಾರ್ಯ ಮಾಡುತ್ತಿದ್ದು, ಕೋಳಿಗಳ ಮಾರಣ ಹೋಮದ ಬಳಿಕ ಆ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಿದೆ ಎಂದು ಪಂಚಕುಲ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಗುಜರಾತ್ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಪಕ್ಷಿಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವೆಂಬುದನ್ನು ಸ್ಪಷ್ಟಪಡಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.