ETV Bharat / bharat

ಸೋನಿಯಾ, ರಾಹುಲ್​, ಪ್ರಿಯಾಂಕಾ ಗಾಂಧಿಯಿಂದ ಮತದಾನ: ಮೊದಲ ಸಲ ವೋಟ್​ ಮಾಡಿದ ಪ್ರಿಯಾಂಕಾ ಪುತ್ರಿ - SONIA GANDHI CASTS VOTE

author img

By ETV Bharat Karnataka Team

Published : May 25, 2024, 11:39 AM IST

ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಗಾಂಧಿ ಕುಟುಂಬಸ್ಥರು ಮತದಾನ ಮಾಡಿದರು.

ಸೋನಿಯಾ, ರಾಹುಲ್​, ಪ್ರಿಯಾಂಕಾ ಗಾಂಧಿಯಿಂದ ಮತದಾನ
ಸೋನಿಯಾ, ರಾಹುಲ್​, ಪ್ರಿಯಾಂಕಾ ಗಾಂಧಿಯಿಂದ ಮತದಾನ (ETV Bharat)

ನವದೆಹಲಿ: ದೇಶದ ರಾಜಧಾನಿ ದೆಹಲಿ, ನವದೆಹಲಿ, ಚಾಂದಿನಿ ಚೌಕ್, ವಾಯುವ್ಯ ದೆಹಲಿ, ಈಶಾನ್ಯ ದೆಹಲಿ, ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ ಮತ್ತು ಪೂರ್ವ ದೆಹಲಿಯ ಎಲ್ಲಾ 7 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯವರೆಗೆ ಶೇ.8.94 ಮತದಾನವಾಗಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಅವರು ಮತ ಚಲಾಯಿಸಿದರು. ಬಳಿಕ ಇಬ್ಬರೂ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮತ್ತು ಅವರ ಪುತ್ರ ರೆಹಾನ್, ಪುತ್ರಿ ಮಿರಾಯಾ ವಾದ್ರಾ ಮತ ಚಲಾಯಿಸಿದರು.

ವಿಪಕ್ಷಗಳ ನಡುವಿನ ಅಸಮಾಧಾನಗಳನ್ನು ಬದಿಗಿಟ್ಟು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ನಾವು ಮತ ನೀಡಿದ್ದೇವೆ. ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಹಿಸಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಪ್ರಿಯಾಂಕಾ ವಾದ್ರಾ ಹೇಳಿದರು.

ಮೊದಲ ಬಾರಿಗೆ ಮತದಾನ ಮಾಡಿದ ಪ್ರಿಯಾಂಕಾ ಅವರ ಪುತ್ರಿ ಮಿರಾಯಾ ವಾದ್ರಾ, ಎಲ್ಲರೂ ಮನೆಯಿಂದ ಹೊರ ಬಂದು ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ರಾಜೀವ್ ವಾದ್ರಾ ಅವರು, ಇದು ಬಹಳ ಮುಖ್ಯವಾದ ಚುನಾವಣೆಯಾಗಿದೆ. ನಮ್ಮ ಸಂವಿಧಾನವನ್ನು ಉಳಿಸಲು ಮತ್ತು ಸಕಾರಾತ್ಮಕ ಬದಲಾವಣೆಯನ್ನು ತರುವ ರೀತಿಯಲ್ಲಿ ಮತ ಚಲಾಯಿಸಲು ಯುವಕರನ್ನು ಕೋರುತ್ತೇನೆ ಎಂದರು.

ಇದನ್ನೂ ಓದಿ: 8 ರಾಜ್ಯಗಳ 58 ಕ್ಷೇತ್ರಗಳಿಗೆ ಮತದಾನ ಆರಂಭ: ವಿದೇಶಾಂಗ ಸಚಿವ, ಕೇಂದ್ರ ಸಚಿವರಿಂದ ಮೊದಲ ಮತ - POLLING FOR LOK SABHA ELECTION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.