ETV Bharat / bharat

G20 Summit: ಜಾಗತಿಕ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ಸಾಗಲು ಇದು ಸಕಾಲ.. ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

author img

By PTI

Published : Sep 9, 2023, 1:50 PM IST

Time to walk together for global good, can triumph over trust deficit caused by war: Modi
ಜಾಗತಿಕ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ಸಾಗಲು ಇದು ಸಕಾಲ: ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

G20 Summit: ದೆಹಲಿಯ 'ಭಾರತ್ ಮಂಟಪಂ' ಕನ್ವೆನ್ಷನ್ ಸೆಂಟರ್​ನಲ್ಲಿ​ ಶುಕ್ರವಾರವಾದ ಜಿ-20 ನಾಯಕರ ಶೃಂಗಸಭೆಯಲ್ಲಿ 'ಒನ್ ಅರ್ಥ್' ಅಧಿವೇಶನದಲ್ಲಿ ಪ್ರಧಾನಿ ಮೋದಿ ಆರಂಭಿಕ ಭಾಷಣ ಮಾಡಿದರು.

ನವದೆಹಲಿ: ಉಕ್ರೇನ್ ಯುದ್ಧದ ಬಗೆಗಿನ ಉಂಟಾದ ಬಿರುಕುಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ವಿಶ್ವಾಸ ಕೊರತೆಯನ್ನು ಪರಸ್ಪರ ವಿಶ್ವಾಸವನ್ನಾಗಿ ಪರಿವರ್ತಿಸಲು ಮತ್ತು ಹಳೆಯ ಸವಾಲುಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳುವಂತೆ ವಿಶ್ವ ನಾಯಕರಿಗೆ ಒತ್ತಾಯಿಸಿದರು.

ದೆಹಲಿಯ 'ಭಾರತ್ ಮಂಟಪಂ' ಕನ್ವೆನ್ಷನ್ ಸೆಂಟರ್​ನಲ್ಲಿ​ ಶುಕ್ರವಾರ ಜಿ-20 ನಾಯಕರ ಶೃಂಗಸಭೆಯಲ್ಲಿ 'ಒನ್ ಅರ್ಥ್' (ಒಂದು ಭೂಮಿ) ಅಧಿವೇಶನವನ್ನು ಉದ್ದೇಶಿಸಿ ತಮ್ಮ ಆರಂಭಿಕ ಭಾಷಣ ಮಾಡಿದ ಪ್ರಧಾನಿ ಮೋದಿ, ಜಗತ್ತು ಕೋವಿಡ್​ಅನ್ನು ಸೋಲಿಸಲು ಸಾಧ್ಯವಾಗಿದ್ದರೆ, ಅದಕ್ಕೆ ಯುದ್ಧದಿಂದ ಉಂಟಾದ ನಂಬಿಕೆಯ ಕೊರತೆಯ ಮೇಲೂ ಜಯ ಸಾಧಿಸಬಹುದು ಎಂದು ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್, ಸೌದಿ ಅರೇಬಿಯಾ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಹಾಗೂ ಇತರು ಜಾಗತಿಕ ನಾಯಕರು ಭಾಗವಹಿಸಿದ್ದ ಈ ಸಭೆಯಲ್ಲಿ ಪಿಎಂ ಮೋದಿ, ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಲು ಇದು ಸಕಾಲ ಎಂದು ಪ್ರತಿಪಾದಿಸಿದರು.

  • VIDEO | "The 21st century is an important time to show the world a new direction. New challenges seek new solutions from us and that's why we should move ahead while fulfilling our responsibilities with a human-centric approach," says PM Modi in opening remarks at G20 Summit in… pic.twitter.com/aT7sT1VSpC

    — Press Trust of India (@PTI_News) September 9, 2023 " class="align-text-top noRightClick twitterSection" data=" ">

ಕೋವಿಡ್ ಸಾಂಕ್ರಾಮಿಕದ ನಂತರ ವಿಶ್ವವು ನಂಬಿಕೆ ಕೊರತೆಯ ಹೊಸ ಸವಾಲನ್ನು ಎದುರಿಸಿತು. ದುರದೃಷ್ಟವಶಾತ್ ಯುದ್ಧಗಳು ಇದನ್ನು ಇನ್ನಷ್ಟು ಆಳಗೊಳಿಸಿವೆ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಉಕ್ರೇನ್​ ಹಾಗೂ ರಷ್ಯಾ ಯುದ್ಧವನ್ನು ಉಲ್ಲೇಖಿಸಿ ಹೇಳಿದರು. ಆದರೆ, ನಾವು ಕೋವಿಡ್‌ನಂತಹ ರೋಗವನ್ನು ಸೋಲಿಸಲು ಸಾಧ್ಯವಾಗಲಿದೆಯಾದರೆ, ಈ ವಿಶ್ವಾಸ ಕೊರತೆಯ ಸವಾಲನ್ನು ಸಹ ಗೆಲ್ಲಬಹುದು ಎಂಬುದನ್ನು ನಾವು ನೆನಪಿನಲ್ಲಿಡಬೇಕು ಎಂದು ತಿಳಿಸಿದರು.

ಇಂದು ಜಿ-20 ಅಧ್ಯಕ್ಷತೆ ವಹಿಸಿರುವ ಭಾರತವು ಜಾಗತಿಕ ವಿಶ್ವಾಸ ಕೊರತೆಯನ್ನು ನಂಬಿಕೆಯಾಗಿ ಪರಿವರ್ತಿಸಲು ಇಡೀ ಜಗತ್ತಿಗೆ ಕರೆ ನೀಡುತ್ತಿದೆ ಮತ್ತು ಆತ್ಮವಿಶ್ವಾಸ ತುಂಬುತ್ತದೆ. ಇದು ಹಳೆಯ ಸವಾಲುಗಳು ನಮ್ಮಿಂದ ಹೊಸ ಪರಿಹಾರಗಳಿಗೆ ಕರೆ ನೀಡುತ್ತಿರುವ ಸಮಯ. ಆದ್ದರಿಂದ ಮಾನವ ಕೇಂದ್ರಿತ ವಿಧಾನದೊಂದಿಗೆ ನಮ್ಮ ಜವಾಬ್ದಾರಿಗಳನ್ನು ಪೂರೈಸಲು ನಾವು ಮುಂದುವರಿಯಬೇಕು ಎಂದು ಪ್ರಧಾನಿ ಹೇಳಿದರು.

ಎಲ್ಲ ಸವಾಲುಗಳಾದ ಜಾಗತಿಕ ಆರ್ಥಿಕತೆಯ ಕ್ರಾಂತಿಯಿಂದ ಉತ್ತರ - ದಕ್ಷಿಣ ವಿಭಜನೆಯವರೆಗೆ, ಆಹಾರ ನಿರ್ವಹಣೆಯಿಂದ ಇಂಧನ ಮತ್ತು ರಸಗೊಬ್ಬರ ನಿರ್ವಹಣೆಯವರೆಗೆ, ಭಯೋತ್ಪಾದನೆಯಿಂದ ಸೈಬರ್ ಭದ್ರತೆಯವರೆಗೆ, ಆರೋಗ್ಯದಿಂದ ಶಕ್ತಿ ಮತ್ತು ನೀರಿನ ಭದ್ರತೆಯವರೆಗೆ.. ನಾವು ಒಟ್ಟಾಗಿ ಮಾರ್ಗೋಪಾಯಗಳತ್ತ ಸಾಗಬೇಕಾಗಿದೆ ಎಂದು ಮೋದಿ ಕರೆ ನೀಡಿದರು.

ಭಾರತದ ಜಿ20 ಅಧ್ಯಕ್ಷ ಸ್ಥಾನವು ದೇಶದ ಒಳಗೆ ಮತ್ತು ಹೊರಗೆ ಒಳಗೊಳ್ಳುವಿಕೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ ಎಂದ ಪ್ರಧಾನಿ ಮೋದಿ, ಇದು ಭಾರತದ ಜನರ ಜಿ-20 ಆಗಿ ಮಾರ್ಪಟ್ಟಿದೆ. ದೇಶದ 60ಕ್ಕೂ ಹೆಚ್ಚು ನಗರಗಳಲ್ಲಿ 200ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ. ಕೋಟ್ಯಂತರ ಭಾರತೀಯರು ಇದರಲ್ಲಿ ಸೇರಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ: G20 Summit: ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಆಸನದ ಮುಂದೆ 'ಭಾರತ' ಕಾರ್ಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.