ETV Bharat / bharat

ಪಂಜಾಬ್​​ನಲ್ಲಿ ಕಮಾಲ್​: ಹರಿಯಾಣದಲ್ಲಿ ಬಿಜೆಪಿ - ಕಾಂಗ್ರೆಸ್​​​​​​ ತೊರೆದು ಆಪ್​ ಸೇರಿದ ಮಾಜಿ ಸಚಿವರು, ಶಾಸಕರು

author img

By

Published : Mar 15, 2022, 9:47 AM IST

Several BJP, Congress leaders from Haryana join AAP
ಪಂಜಾಬ್​​ನಲ್ಲಿ ಕಮಾಲ್​: ಹರಿಯಾಣದಲ್ಲಿ ಬಿಜೆಪಿ- ಕಾಂಗ್ರೆಸ್​​​​​​ ತೊರೆದು ಆಪ್​ ಸೇರಿದ ಮಾಜಿ ಸಚಿವರು, ಶಾಸಕರು

ಪಂಜಾಬ್​ನಲ್ಲಿ ಆಪ್​​ ಪಕ್ಷ ಅಭೂತಪೂರ್ವ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಆಪ್​ ಭಾರಿ ಸದ್ದು ಮಾಡುತ್ತಿದೆ. ಪಂಜಾಬ್​ ಚುನಾವಣೆ ಎಫೆಕ್ಟ್​ ಹರಿಯಾಣದ ಮೇಲೆ ಬಿದ್ದಿದ್ದು, ಕಾಂಗ್ರೆಸ್​ ಹಾಗೂ ಬಿಜೆಪಿಯ ಹಲವು ಮಾಜಿ ಸಚಿವರು, ಶಾಸಕರು ಆಪ್​ ಸೇರ್ಪಡೆಯಾಗುತ್ತಿದ್ದಾರೆ.

ನವದೆಹಲಿ: ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷ ಕಮಾಲ್​ ಮಾಡಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 117 ಸ್ಥಾನಗಳ ಪೈಕಿ 92 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದಿದೆ. ಈ ಐತಿಹಾಸಿಕ ಜಯ ಇತರ ರಾಜ್ಯಗಳಲ್ಲೂ ಆಪ್ ಬಲವರ್ದನೆಗೆ ವೇದಿಕೆ ಒದಗಿಸಿದೆ.​ ಹರಿಯಾಣದ ಮಾಜಿ ಶಾಸಕರು, ಸಚಿವರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವಾರು ನಾಯಕರು ಸೋಮವಾರ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಯಾದರು.

ಹಲವು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸತ್ಯೇಂದ್ರ ಜೈನ್, ಹರ್ಯಾಣದ ವಿವಿಧ ಸಚಿವರು, ಶಾಸಕರು ಮತ್ತು ಸಾಮಾಜಿಕ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಘೋಷಿಸಲು ನಮಗೆ ತುಂಬಾ ಸಂತಸವಾಗ್ತಿದೆ. ಹರಿಯಾಣದ ಜನರು ಎಎಪಿ ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ ಎಂದು ಅವರು ಇದೇ ವೇಳೆ, ಹೇಳಿದರು.

ವಿವಿಧ ಪಕ್ಷ ತೊರೆದು ಎಎಪಿ ಸೇರ್ಪಡೆಗೊಂಡ ನಾಯಕರು: ಉಮೇಶ್ ಅಗರ್ವಾಲ್ - ಮಾಜಿ ಶಾಸಕ (ಬಿಜೆಪಿ), ಬಲ್ಬೀರ್ ಸಿಂಗ್ ಸೈನಿ - ಹರಿಯಾಣದ ಮಾಜಿ ಸಚಿವ (ಭಾರತೀಯ ರಾಷ್ಟ್ರೀಯ ಲೋಕದಳ), ಬಿಜೇಂದ್ರ ಸಿಂಗ್ (ಕಾಂಗ್ರೆಸ್), ರವೀಂದ್ರ ಕುಮಾರ್ ಮಾಜಿ ಪಕ್ಷೇತರ ಶಾಸಕ, ಜಾವೇದ್ ಅಹ್ಮದ್ , ಜಗತ್ ಸಿಂಗ್ (ಕಾಂಗ್ರೆಸ್), ಅಶೋಕ್ ಮಿತ್ತಲ್ ( ಬಿಎಸ್​​​ಪಿ), ಅಮನದೀಪ್ ಸಿಂಗ್ ವಾರೈಚ್ (ಬಿಜೆಪಿ), ಬ್ರಹ್ಮ್ ಸಿಂಗ್ ಗುರ್ಜಾರ್ (ಬಿಜೆಪಿ), ಸರ್ದಾರ್ ಗುರ್ಲಾಲ್ ಸಿಂಗ್ (ಸರ್ಪಂಚ್), ಪರ್ಮಿಂದರ್ ಸಿಂಗ್ (ಸಾಮಾಜಿಕ ಕಾರ್ಯಕರ್ತ), ಕಮಲ್ ಸಿಂಗ್ ತಾವರ್ (ವಕೀಲರು), ಖೇಮಿ ಠಾಕೂರ್ (ಸರ್ಪಂಚ್), ಸರ್ದಾರ್ ಆಜಾದ್ ಸಿಂಗ್ (ಕಾಂಗ್ರೆಸ್) ಸೋಮವಾರ ಎಎಪಿ ಸೇರಿದ ನಾಯಕರಲ್ಲಿ ಪ್ರಮುಖರಾಗಿದ್ದಾರೆ.

ಇದನ್ನು ಓದಿ:ನಿಗೂಢ ಸಾವು ಪ್ರಕರಣ: ಅಧಿವೇಶನದಲ್ಲಿ ವೈಎಸ್‌ಆರ್‌ಸಿಪಿ - ಟಿಡಿಪಿ ಮಧ್ಯೆ ಭಾರಿ ಗಲಾಟೆ- ಐವರ ಅಮಾನತು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.