ETV Bharat / bharat

ನೂತನ ಪಾರ್ಲಿಮೆಂಟ್ ಕಟ್ಟಡ ಕಾಮಗಾರಿ ವೆಚ್ಚ ₹200 ಕೋಟಿ ಹೆಚ್ಚಳ

author img

By

Published : Jan 21, 2022, 8:56 AM IST

New Parliament building cost shoots up by over Rs 200 crore
ನೂತನ ಪಾರ್ಲಿಮೆಂಟ್ ಕಟ್ಟಡದ ಕಾಮಗಾರಿ ವೆಚ್ಚ ₹200 ಕೋಟಿ ಹೆಚ್ಚಳ

ಉಕ್ಕು, ಎಲೆಕ್ಟ್ರಾನಿಕ್ಸ್ ಮತ್ತು ಇತರ ಸಾಮಗ್ರಿಗಳ ಬೆಲೆ ಏರಿಕೆಯ ಕಾರಣದಿಂದ ನೂತನ ಸಂಸತ್ ಭವನ ನಿರ್ಮಾಣ ಕಾಮಗಾರಿ ವೆಚ್ಚವೂ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ನೂತನ ಸಂಸತ್ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸತ್ ಭವನದ ನಿರ್ಮಾಣ ವೆಚ್ಚವು 971 ಕೋಟಿ ರೂಪಾಯಿಯಿಂದ ಸುಮಾರು 1200 ಕೋಟಿ ರೂಪಾಯಿವರೆಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಉಕ್ಕು, ಎಲೆಕ್ಟ್ರಾನಿಕ್ಸ್ ಮತ್ತು ಇತರ ಸಾಮಗ್ರಿಗಳ ಬೆಲೆ ಏರಿಕೆಯ ಕಾರಣದಿಂದ ಕಟ್ಟಡ ನಿರ್ಮಾಣಕ್ಕೂ ನಿರೀಕ್ಷೆಗಿಂತ ಹೆಚ್ಚು ಖರ್ಚಾಗುತ್ತದೆ. ವೆಚ್ಚ ಹೆಚ್ಚಳದ ಬಗ್ಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಲೋಕಸಭೆಯ ಸಚಿವಾಲಯದ ಅನುಮೋದನೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ತಿಂಗಳ ಆರಂಭದಲ್ಲಿ, ಹೊಸ ಸಂಸತ್​​ ಕಟ್ಟಡದ ನಿರ್ಮಾಣದ ನೋಡಲ್ ಏಜೆನ್ಸಿಯಾದ ಸಿಪಿಡಬ್ಲ್ಯೂಡಿ ವೆಚ್ಚ ಹೆಚ್ಚಳಕ್ಕೆ ಲೋಕಸಭಾ ಕಾರ್ಯಾಲಯದ ತಾತ್ವಿಕ ಅನುಮೋದನೆ ಕೋರಿತ್ತು. ನಿರ್ಮಾಣ ಕಾಮಗಾರಿಗಳ ಉಪಯೋಗಿಸುವ ವಸ್ತುಗಳ ಬೆಲೆ ಹೆಚ್ಚಳದ ನಂತರ 1200 ಕೋಟಿ ರೂಪಾಯಿಗೆ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಅಂದರೆ ಮೂಲ ಯೋಜನಾ ವೆಚ್ಚಕ್ಕಿಂತ ಸುಮಾರು 223 ಕೋಟಿ ಹೆಚ್ಚಳವಾಗುವ ಸಾಧ್ಯತೆ ಇದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಹೊಸ ಪಾರ್ಲಿಮೆಂಟ್ ಕಟ್ಟಡ ಯೋಜನೆಯನ್ನು ಟಾಟಾ ಪ್ರಾಜೆಕ್ಟ್‌ಗೆ 2020ರಲ್ಲಿ ರೂಪಾಯಿ 971 ಕೋಟಿಗೆ ಟೆಂಡರ್​​​ ನೀಡಲಾಗಿತ್ತು. ಸರ್ಕಾರವು ಕಟ್ಟಡಕ್ಕಾಗಿ ಅಕ್ಟೋಬರ್ 2022 ಗಡುವು ನಿಗದಿಪಡಿಸಿದ್ದು, 2022ರ ಚಳಿಗಾಲದ ಅಧಿವೇಶನವನ್ನು ಹೊಸ ಕಟ್ಟಡದಲ್ಲಿ ನಡೆಸುವ ಗುರಿಯನ್ನು ಹೊಂದಲಾಗಿತ್ತು. ಈಗ ವೆಚ್ಚ ಹೆಚ್ಚಳಕ್ಕೆ ಅನುಮೋದನೆಗಾಗಿ ಕಳುಹಿಸುವ ಸಾಧ್ಯತೆಯಿದ್ದು, ಕಾಮಗಾರಿ ಸ್ವಲ್ಪ ತಡವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಅರುಣಾಚಲ ಪ್ರದೇಶದ ಯುವಕನ ಅಪಹರಣ ಆರೋಪ ನಿರಾಕರಿಸಿದ ಚೀನಾ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.