ETV Bharat / bharat

ಋಷಿಕೇಶ್​ನಲ್ಲಿ ಭೀಕರ ರಸ್ತೆ ಅಪಘಾತ : ನಾಲ್ವರು ಅರಣ್ಯಾಧಿಕಾರಿಗಳು ಸಾವು, ಮಹಿಳಾ ಸಿಬ್ಬಂದಿ ನಾಪತ್ತೆ

author img

By ETV Bharat Karnataka Team

Published : Jan 8, 2024, 7:27 PM IST

Updated : Jan 8, 2024, 8:52 PM IST

major-road-accident-in-rajaji-park-chilla-range-rishikesh-uttarakhand-many-forest-department-officers-died
ಋಷಿಕೇಶ್​ನಲ್ಲಿ ಭೀಕರ ರಸ್ತೆ ಅಪಘಾತ : ಮೂವರು ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಸಾವು, ಇಬ್ಬರು ನಾಪತ್ತೆ

ಉತ್ತರಾಖಂಡ್​ನ ಋಷಿಕೇಶ್​ನಲ್ಲಿ ಸಂಭವಿಸಿ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಅರಣ್ಯಾಧಿಕಾರಿಗಳು ಸಾವನ್ನಪ್ಪಿದ್ದಾರೆ.

ಋಷಿಕೇಶ್​(ಉತ್ತರಾಖಂಡ್​) : ಉತ್ತರಾಖಂಡ್​ನ ಡೆಹ್ರಾಡೂನ್​ ಜಿಲ್ಲೆಯ ಋಷಿಕೇಶ್​ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಅರಣ್ಯಾಧಿಕಾರಿಗಳು ಮೃತಪಟ್ಟಿದ್ದಾರೆ. ಐವರು ಗಂಭೀರ ಗಾಯಗೊಂಡಿದ್ದು, ಓರ್ವ ಮಹಿಳಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ಮಾಹಿತಿ ಪ್ರಕಾರ, ಸೋಮವಾರ ಸಂಜೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಚೀಲ್ಲಾ ವ್ಯಾಪ್ತಿಯ ರಾಜಾಜಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಎಲೆಕ್ಟ್ರಿಕ್​ ವಾಹನದ ಪರೀಕ್ಷಾರ್ಥ ಚಾಲನೆ ನಡೆಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಇದರಿಂದ ಕಾರಿನಲ್ಲಿದ್ದ ರೇಂಜರ್​, ಡೆಪ್ಯುಟಿ ರೇಂಜರ್​ ಸೇರಿ ನಾಲ್ವರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಈ ವಾಹನದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ 10 ಮಂದಿ ಇದ್ದರು ಎಂದು ಹೇಳಲಾಗಿದೆ.

major-road-accident-in-rajaji-park-chilla-range-rishikesh-uttarakhand-many-forest-department-officers-died
ಋಷಿಕೇಶ್​ನಲ್ಲಿ ಭೀಕರ ರಸ್ತೆ ಅಪಘಾತ : ಮೂವರು ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಸಾವು, ಇಬ್ಬರು ನಾಪತ್ತೆ

ಮೃತರಲ್ಲಿ ಓರ್ವರನ್ನು ಪಿಎಂಓ ಪ್ರಧಾನ ಕಚೇರಿಯ ಉಪಕಾರ್ಯದರ್ಶಿ ಮಂಗೇಶ್​ ಗಿಲ್ಡಿಯಾಲ್​ ಅವರ ಸಹೋದರ ಚೀಲಾ ಶೈಲೇಶ್​ ಗಿಲ್ಡಿಯಾಲ್​ ಎಂದು ಗುರುತಿಸಲಾಗಿದೆ. ಮತ್ತಿತರರನ್ನು ಪ್ರಮೋದ್ ಧ್ಯಾನಿ ಮತ್ತು ಸೈಫ್​ ಅಲಿ ಖಾನ್, ಕುಲರಾಜ್​​​​ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ನದಿಗೆ ಬಿದ್ದು ಮಹಿಳಾ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ನದಿಯಲ್ಲಿ ಮುಳುಗುತಜ್ಞರ ತಂಡ ಹುಡುಕಾಟ ನಡೆಸುತ್ತಿದೆ.

ಅಪಘಾತದಲ್ಲಿ ಚಾಲಕ ಹಿಮಾಂಶು ಗುಸೇನ್​, ರಾಜಾಜಿ ರಾಷ್ಟ್ರೀಯ ಉದ್ಯಾನವನದ ವೈದ್ಯ ರಾಕೇಶ್ ನೌಟಿಯಾಲ್, ಕುಲರಾಜ್ ಸಿಂಗ್, ಅಂಕುಶ್, ಅಮಿತ್ ಸೆಂವಾಲ್ ಮತ್ತು ಅಶ್ವಿನ್ ಎಂಬವರು ಗಾಯಗೊಂಡಿದ್ದು, ಋಷಿಕೇಶ್​ನ ಏಮ್ಸ್​ಗೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನೂಪ್​ ಮಲಿಕ್​, ಎಲೆಕ್ಟ್ರಿಕ್​ ವಾಹನದ ಪರೀಕ್ಷಾರ್ಥ ಚಾಲನೆ ವೇಳೆ ಅಪಘಾತ ಸಂಭವಿಸಿದೆ. ಅಪಘಾತ ನಡೆದ ಕೂಡಲೇ ಸ್ಥಳಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದರು.

ಇದನ್ನೂ ಓದಿ : ಬೆಂಗಳೂರು: ಓವರ್ ಟೇಕ್ ಮಾಡುವಾಗ ಬಿಎಂಟಿಸಿ ಬಸ್ ಹರಿದು ಯುವಕ‌ ಸಾವು

Last Updated :Jan 8, 2024, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.