ETV Bharat / bharat

ಕುಟುಂಬಸ್ಥರ ವಿರೋಧಿಸಿ ಪ್ರೇಮ ವಿವಾಹ: ಯುವತಿಯ ಅಣಕು ಶವಯಾತ್ರೆ ನಡೆಸಿ ಆಕ್ರೋಶ

author img

By

Published : Mar 31, 2021, 7:49 PM IST

amily members perform last rites
amily members perform last rites

ಸೋದರ ಸಂಬಂಧಿ ಜತೆ ಕುಟುಂಬದ ವಿರೋಧದ ನಡುವೆ ಮದುವೆ ಮಾಡಿಕೊಂಡಿರುವ ಯುವತಿಯ ಅಣಕು ಶವಯಾತ್ರೆ ನಡೆಸಿ ಅಂತ್ಯಕ್ರಿಯೆ ನಡೆಸಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ಚತ್ರಾ(ಜಾರ್ಖಂಡ್​): ಯುವತಿಯೋರ್ವಳು ಕುಟುಂಬಸ್ಥರ ವಿರೋಧದ ನಡುವೆಯೂ ಕೂಡ ಪ್ರೇಮ ವಿವಾಹ ಮಾಡಿಕೊಂಡಿದ್ದು, ಇದರಿಂದ ಆಕ್ರೋಶಗೊಂಡ ಕುಟುಂಬ ಆಕೆಯ ಅಣಕು ಶವಯಾತ್ರೆ ನಡೆಸಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ಯುವತಿ ಅಣಕು ಶವಯಾತ್ರೆ ನಡೆಸಿ ಆಕ್ರೋಶ

25 ವರ್ಷದ ಯುವತಿ ಕುಟುಂಬಸ್ಥರ ವಿರೋಧದ ನಡುವೆ ಸೋದರ ಸಂಬಂಧಿ ಮದುವೆಯಾಗಿದ್ದು, ಇದಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಜತೆಗೆ ಆಕೆಯ ಅಣಕು ಶವಯಾತ್ರೆ ನಡೆಸಿ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.

ಇದನ್ನೂ ಓದಿ: ಹುಡುಗಿ ಚಾರಿತ್ರ್ಯದ ಬಗ್ಗೆ ಹುಡುಗನ ಹಗುರ ಮಾತು: ರಣಾಂಗಣವಾದ ಸಂಭ್ರಮದ ಮನೆ!

ಕಳೆದೆರಡು ವರ್ಷಗಳಿಂದ ಯುವತಿ ತನ್ನ ಸೋದರ ಸಂಬಂಧಿ ರಾಜ್​ದೀಪ್​ ಕುಮಾರ್​ ಜತೆ ಸಂಬಂಧ ಹೊಂದಿದ್ದಳು ಎಂದು ತಿಳಿದು ಬಂದಿದ್ದು, ಆಕೆಯ ಮನವೊಲಿಕೆ ಮಾಡಲು ಕುಟುಂಬಸ್ಥರು ತುಂಬಾ ಹರಸಾಹಸಪಟ್ಟರೂ ಪ್ರಯೋಜನವಾಗಿರಲಿಲ್ಲ. ಕಳೆದ ನಾಲ್ಕು ತಿಂಗಳ ಹಿಂದೆ ಕಿರಣ್​ ಕುಮಾರಿ(25) ರಾಜ್​ದೀಪ್​​ ಜತೆ ವಿವಾಹವಾಗಿದ್ದಾರೆ. ಮದುವೆ ಮಾಡಿಕೊಂಡ ಬಳಿಕ ಕೂಡ ಆಕೆಯ ಮನವೊಲಿಕೆ ಮಾಡಲಾಗಿತ್ತು. ಆದರೆ ಮಹಿಳೆ ನಿರ್ಧಾರಕ್ಕೆ ಅಂಟಿಕೊಂಡಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಪೋಷಕರು ತಿಳಿಸಿದ್ದಾರೆ.ಸೋಮವಾರ ಕುಟುಂಬದ ಸದಸ್ಯರು ಆಕೆಯ ಅಣಕು ಶವ ಮೆರವಣಿಗೆ ಮಾಡಿ, ಅಂತ್ಯಕ್ರಿಯೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.