ETV Bharat / bharat

ಮುಗಿಯುತ್ತಾ ಸಾಗುತ್ತಿರುವ ಚಂದ್ರಯಾನ 3 ಮಿಷನ್​ ಅವಧಿ.. ಚಂದ್ರನ ಮೇಲೆ ಸಲ್ಫರ್(ಎಸ್​)​ ಇರುವುದು ಖಚಿತ ಪಡಿಸಿದ ಪ್ರಗ್ಯಾನ್​

author img

By ETV Bharat Karnataka Team

Published : Aug 31, 2023, 1:29 PM IST

ಚಂದ್ರಯಾನ 3 ಮಿಷನ್​ನ ಅವಧಿ ಮುಗಿಯುತ್ತಾ ಸಾಗುತ್ತಿದೆ. ಸೆಪ್ಟೆಂಬರ್ 6 ಚಂದ್ರನ ಮೇಲೆ ಅದರ ಕೊನೆಯ ದಿನವಾಗಿರಬಹುದು. ಆದರೆ ಮಿಷನ್‌ನ ಕೊನೆಯ ಕ್ಷಣಗಳಲ್ಲಿ ಇನ್ನೂ ಅನೇಕ ಇತಿಹಾಸಗಳನ್ನು ರಚಿಸುತ್ತಿದೆ ಇಸ್ರೋ.. ಈಗ ಚಂದ್ರನಲ್ಲಿ ಸಲ್ಫರ್​ ಇರುವುದು ಪ್ರಗ್ಯಾನ್ ಕಂಡುಕೊಂಡಿದೆ.

handrayaan 3 Pragyan Rover confirms  Rover confirms Sulphur presence in Moon  Sulphur presence in Moon with another method  ಮುಗಿಯುತ್ತಾ ಸಾಗುತ್ತಿರುವ ಚಂದ್ರಯಾನ 3 ಮಿಷನ್​ ಅವಧಿ  ಚಂದ್ರನ ಮೇಲೆ ಸಲ್ಫರ್​ ಇರುವುದು ಖಚಿತ ಪಡಿಸಿದ ಪ್ರಗ್ಯಾನ್​ ಚಂದ್ರಯಾನ 3 ಮಿಷನ್​ನ ಅವಧಿ  ಸೆಪ್ಟೆಂಬರ್ 6 ಚಂದ್ರನ ಮೇಲೆ ಅದರ ಕೊನೆಯ ದಿನ  ಮಿಷನ್‌ನ ಕೊನೆಯ ಕ್ಷಣಗಳಲ್ಲಿ ಇನ್ನೂ ಅನೇಕ ಇತಿಹಾಸ  ಚಂದ್ರನಲ್ಲಿ ಸಲ್ಫರ್​ ಇರುವುದು ಪ್ರಗ್ಯಾನ್ ಕಂಡು  ಚಂದ್ರನ ಮೇಲೆ ತ್ರಿವರ್ಣ ಧ್ವಜ  ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಯಿತು  ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್‌  ಸ್ಥಳದಲ್ಲೇ ವೈಜ್ಞಾನಿಕ ಪ್ರಯೋಗ  ರೋವರ್‌ನಲ್ಲಿರುವ ಮತ್ತೊಂದು ಉಪಕರಣ  ಆಲ್ಫಾ ಪಾರ್ಟಿಕಲ್ ಎಕ್ಸ್ ರೇ ಸ್ಪೆಕ್ಟ್ರೋಸ್ಕೋಪ್
ಮುಗಿಯುತ್ತಾ ಸಾಗುತ್ತಿರುವ ಚಂದ್ರಯಾನ 3 ಮಿಷನ್​ ಅವಧಿ

ಬೆಂಗಳೂರು: ಇಸ್ರೋ ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಪ್ರತಿಯೊಬ್ಬ ದೇಶವಾಸಿಗಳ ಎದೆಯು ಹೆಮ್ಮೆಯಿಂದ ಉಬ್ಬಿತ್ತು. ಚಂದ್ರಯಾನ 3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಪಾದ ಸ್ಪರ್ಶ ಮಾಡಿತು. ಮತ್ತು ಅಂದಿನಿಂದ ಅನೇಕ ಸಂಶೋದನೆಗಳನ್ನು ಮುಂದುವರೆಸಿದೆ. ಆದರೆ ಈಗ ಚಂದ್ರಯಾನ-3 ರ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್‌ನ 14 ದಿನಗಳ ಕೆಲಸದ ಅವಧಿ ಕೊನೆಗೊಳ್ಳಲಿದೆ. ಅಂದರೆ ಈಗ ನಮಗೆ ಸಮಯ ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿವೆ.

  • #WATCH | Chandrayaan-3 Mission: In-situ Scientific Experiments- Another instrument onboard the Rover confirms presence of Sulphur (S) in the region, through another technique. Alpha Particle X-ray Spectroscope (APXS) has detected S, as well as other minor elements, tweets ISRO pic.twitter.com/a0FGePDv6h

    — ANI (@ANI) August 31, 2023 " class="align-text-top noRightClick twitterSection" data=" ">

ಚಂದ್ರಯಾನ-3 ತನ್ನ ಕೊನೆಯ 6 ದಿನಗಳಲ್ಲಿ ಅನೇಕ ಅದ್ಭುತಗಳನ್ನು ಮಾಡಬಹುದಾಗಿದ್ದು, ಅದು ಜಗತ್ತಿಗೆ ಉಪಯುಕ್ತವಾಗಿದೆ. ಸದ್ಯ ಇಸ್ರೋ ಟ್ವೀಟ್​ ಪ್ರಕಾರ ಚಂದ್ರನಲ್ಲಿ ಸಲ್ಫರ್​ ಇರುವುದರ ಬಗ್ಗೆ ಖಚಿತವಾಗಿ ದೃಢಪಡಿಸಿದೆ.

ಇಸ್ರೋ ಜುಲೈ 14 ರಂದು ಚಂದ್ರಯಾನ-3 ಮಿಷನ್ ಅನ್ನು ಪ್ರಾರಂಭಿಸಿತು. ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ಸೃಷ್ಟಿಸಿತ್ತು. ಚಂದ್ರನ ಈ ಭಾಗವನ್ನು ತಲುಪಿದ ವಿಶ್ವದ ಮೊದಲ ದೇಶ ಭಾರತ. ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಜೀವನವು ಕೇವಲ 14 ದಿನಗಳು, ಇದು ಚಂದ್ರನ ಒಂದು ದಿನಕ್ಕೆ ಸಮಾನವಾಗಿರುತ್ತದೆ. ಚಂದ್ರನ ಮೇಲೆ ಸೂರ್ಯ ಬೆಳಕು ನಿಂತಾಕ್ಷಣ ಎರಡೂ ಕೆಲಸ ನಿಲ್ಲಿಸುತ್ತವೆ. ಅಂದರೆ ವಿಕ್ರಮ್-ಪ್ರಗ್ಯಾನ್ ಗೆ ಸುಮಾರು 150 ಗಂಟೆಗಳು ಬಾಕಿ ಇದೆ.

ಈಗ ಇಸ್ರೋ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಸ್ಥಳದಲ್ಲೇ ವೈಜ್ಞಾನಿಕ ಪ್ರಯೋಗಗಳು ನಡೆದಿದೆ. ರೋವರ್‌ನಲ್ಲಿರುವ ಮತ್ತೊಂದು ಉಪಕರಣವು ಮತ್ತೊಂದು ತಂತ್ರದ ಮೂಲಕ ಆ ಪ್ರದೇಶದಲ್ಲಿ ಸಲ್ಫರ್ (ಎಸ್) ಇರುವಿಕೆಯನ್ನು ಖಚಿತಪಡಿಸಿದೆ. ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪ್ (ಎಪಿಎಕ್ಸ್‌ಎಸ್) ಎಸ್ ಮತ್ತು ಇತರ ಸಣ್ಣ ಅಂಶಗಳನ್ನು ಪತ್ತೆ ಮಾಡಿದೆ ಎಂದು ಇಸ್ರೋ ಟ್ವೀಟ್ ಮೂಲಕ ದೃಢಪಡಿಸಿದೆ.

ಇನ್ನೂ ಏನೇನು ಅಧ್ಯಯನ ಮಾಡಲಿದೆ ರೋವರ್​: ಈಗಾಗಲೇ ಚಂದ್ರಯಾನ-3 ಇದುವರೆಗೆ ಚಂದ್ರನ ದಕ್ಷಿಣ ಭಾಗದಲ್ಲಿ ಆಮ್ಲಜನಕ ಮತ್ತು ಇತರ ಅಂಶಗಳ ಉಪಸ್ಥಿತಿ, ತಾಪಮಾನದಲ್ಲಿನ ಬದಲಾವಣೆಗಳು ಮತ್ತು ವಿವಿಧ ಕುಳಿಗಳನ್ನು ಪತ್ತೆ ಮಾಡಿದೆ. ಈಗ ಮುಂಬರುವ ಕೆಲವು ದಿನಗಳಲ್ಲಿ, ನಾವು ಚಂದ್ರನ ಮೇಲಿನ ಭೂಕಂಪ -ಸಂಬಂಧಿತ ಚಟುವಟಿಕೆ, ಚಂದ್ರ ಮತ್ತು ಭೂಮಿಯ ನಡುವಿನ ಸಂಕೇತದ ಅಂತರ ಮತ್ತು ಮಣ್ಣಿನಲ್ಲಿ ಕಂಡುಬರುವ ಕಣಗಳನ್ನು ತನಿಖೆ ಮಾಡುತ್ತೇವೆ. ಇದರರ್ಥ ಕೇವಲ 14 ದಿನಗಳಲ್ಲಿ, ಚಂದ್ರನ ಮೇಲೆ ಚಂದ್ರಯಾನ-3 ರ ಹಲವು ಕಾರ್ಯಾಚರಣೆಗಳು ಪೂರ್ಣಗೊಳ್ಳಲಿವೆ.

ಚಂದ್ರನ ದಕ್ಷಿಣ ಧ್ರುವವನ್ನು ಡಾರ್ಕ್ ಝೋನ್ ಎಂದೂ ಕರೆಯುತ್ತಾರೆ. ಏಕೆಂದರೆ ಅದು ಸೂರ್ಯನೊಂದಿಗೆ ನೇರ ಸಂಪರ್ಕಕ್ಕೆ ಬರುವುದಿಲ್ಲ ಮತ್ತು ದೀರ್ಘಕಾಲದವರೆಗೆ ಇಲ್ಲಿ ಕತ್ತಲೆ ಆವರಿಸಿರುತ್ತದೆ. ಆದರೆ, ಚಂದ್ರನ ಒಂದು ದಿನ ಅಂದರೆ ಭೂಮಿಯ ಪ್ರಕಾರ 14 ದಿನಗಳವರೆಗೆ ಸೂರ್ಯನ ಕಿರಣಗಳು ಇಲ್ಲಿಗೆ ಬೀಳುತ್ತವೆ. ಅದರ ಸಹಾಯದಿಂದ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಕೆಲಸ ಮಾಡುತ್ತಿದೆ.

ಚಂದ್ರಯಾನ-3 ಜಗತ್ತಿನ ಯಾವ ದೇಶಕ್ಕೂ ಸಾಧ್ಯವಾಗದ ಸಾಧನೆ ಮಾಡಿದೆ. ಚಂದ್ರನ ತಾಪಮಾನದಲ್ಲಿ ವ್ಯತ್ಯಾಸವಿದೆ ಎಂದು ಕಂಡುಬಂದಿದೆ. ಚಂದ್ರನ ಮೇಲ್ಮೈಗಿಂತ 8 ಸೆಂ.ಮೀ ಕೆಳಗಿರುವ ತಾಪಮಾನವು -10 ಡಿಗ್ರಿಗಳಿಗೆ ಏರುತ್ತಿದೆ. ಆದರೆ, ತಾಪಮಾನ ಮೇಲ್ಮೈ ಮೇಲೆ 60 ಡಿಗ್ರಿ ತಲುಪುತ್ತದೆ. ಇದಲ್ಲದೇ, ವಿಕ್ರಮ್ ಲ್ಯಾಂಡರ್‌ನ LIBS ಪೇಲೋಡ್ ಚಂದ್ರನ ಮೇಲ್ಮೈಯಲ್ಲಿ ಆಮ್ಲಜನಕ ಸೇರಿದಂತೆ ಒಟ್ಟು 8 ಅಂಶಗಳಿವೆ ಎಂದು ಕಂಡುಹಿಡಿದಿದೆ. ಇಲ್ಲಿ ಹೈಡ್ರೋಜನ್ ಕಂಡುಬಂದರೆ, ನಂತರ ನೀರಿನ ಸಾಧ್ಯತೆಗಳು ಹೆಚ್ಚಾಗುತ್ತವೆ.

ಓದಿ: ಒಂದೇ ತಿಂಗಳಲ್ಲಿ 2 ಸೂಪರ್​ ಮೂನ್: ಬೇರೆ ಬೇರೇ ರಾಜ್ಯದಲ್ಲಿ ಕಾಣಿಸಿಕೊಂಡ ಚಂದ್ರನ ಫೋಟೋ ಇಲ್ಲಿದೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.