ETV Bharat / bharat

ನಾನವನಲ್ಲ.. ನನಗೆ ಟ್ಯಾಗ್​ ಮಾಡುವುದು ದಯವಿಟ್ಟು ನಿಲ್ಲಿಸಿ: ಗೋಲ್​​ಕೀಪರ್​​ 'ಅಮರೀಂದರ್​ ಸಿಂಗ್​' ಮನವಿ

author img

By

Published : Sep 30, 2021, 4:35 PM IST

ಪಂಜಾಬ್​ ಕಾಂಗ್ರೆಸ್​ನಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವವಾಗುತ್ತಿದ್ದಂತೆ ಅನೇಕರು ಭಾರತದ ಫುಟ್ಬಾಲ್​ ತಂಡದ ಗೋಲ್​ ಕೀಪರ್ ಅಮರೀಂದರ್​ ಸಿಂಗ್​ ಅವರಿಗೆ ಟ್ವೀಟ್​ ಮಾಡುತ್ತಿದ್ದಾರೆ.

Amrinder Singh
Amrinder Singh

ಹೈದರಾಬಾದ್​: ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​​ ಸಿಂಗ್​​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಂದಿನ ನಡೆ ಕುರಿತು ಗೌಪ್ಯತೆ ಕಾಯ್ದುಕೊಂಡಿದ್ದಾರೆ. ಯಾವ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದ್ರೆ ಕಾಂಗ್ರೆಸ್​ ತೊರೆಯುವುದಾಗಿ ಹೇಳಿದ್ದು, ಬಿಜೆಪಿ ಸೇರಲ್ಲ ಎಂದಿದ್ದಾರೆ.

ಇದರ ಮಧ್ಯೆ ಭಾರತದ ಫುಟ್ಬಾಲ್​ ತಂಡದ ಗೋಲ್​ಕೀಪರ್​​ ಅಮರಿಂದರ್​ ಸಿಂಗ್​​ ಮಾಧ್ಯಮ ಹಾಗೂ ಪತ್ರಕರ್ತರ ಬಳಿ ಮನವಿ ಮಾಡಿಕೊಂಡಿದ್ದು, ನನಗೆ ಟ್ಯಾಗ್​ ಮಾಡುವುದನ್ನು ನಿಲ್ಲಿಸುವಂತೆ ಟ್ವಿಟರ್​ನಲ್ಲಿ ಒತ್ತಾಯಿಸಿದ್ದಾರೆ.

  • Dear News Media, Journalists, I am Amrinder Singh, Goalkeeper of Indian Football Team 🇮🇳 and not the Former Chief Minister of the State Punjab 🙏😂 Please stop tagging me.

    — Amrinder Singh (@Amrinder_1) September 30, 2021 " class="align-text-top noRightClick twitterSection" data=" ">

"ಆತ್ಮೀಯ ಸುದ್ದಿ ಮಾಧ್ಯಮದವರೇ, ಪತ್ರಕರ್ತರೇ, ನಾನು ಅಮರಿಂದರ್​​ ಸಿಂಗ್, ಭಾರತೀಯ ಫುಟ್ಬಾಲ್ ತಂಡದ ಗೋಲ್​ಕೀಪರ್​. ಪಂಜಾಬ್​ ರಾಜ್ಯದ ಮಾಜಿ ಮುಖ್ಯಮಂತ್ರಿ ಅಲ್ಲ. ದಯವಿಟ್ಟು ನನಗೆ ಟ್ಯಾಗ್ ಮಾಡುವುದನ್ನು ನಿಲ್ಲಿಸಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ಟಾಲಿವುಡ್​ ನಟಿ ಅನುರಾಧಾ: ಕಾರಣವಾಯ್ತೇ ಪ್ರೇಮ ವೈಫಲ್ಯ?

ಯಾವ ಕಾರಣಕ್ಕಾಗಿ ಈ ಟ್ವೀಟ್?

ಪಂಜಾಬ್​ ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದ್ದಂತೆ ಕ್ಯಾಪ್ಟನ್​​ ಅಮರೀಂದರ್​ ಸಿಂಗ್​​ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ನಡೆ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿದ್ದಾರೆ. ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದ ಅವರು, ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಅನೇಕರು ಭಾರತದ ಫುಟ್ಬಾಲ್ ಗೋಲ್​ಕೀಪರ್ ಅಮರಿಂದರ್ ಸಿಂಗ್​ ಟ್ವಿಟರ್ ಖಾತೆಗೆ ಪಂಜಾಬ್​ ರಾಜಕೀಯ ವಿಷಯ ಸೇರಿ ಅನೇಕ ಮಾಹಿತಿ ಕೋರಿ ಟ್ವಿಟರ್​ ಮೂಲಕ ಟ್ಯಾಗ್ ಮಾಡ್ತಿದ್ದಾರೆ. ಹೀಗಾಗಿ ಅವರು ಮನವಿ ಮಾಡಿಕೊಂಡಿದ್ದು, ನಾನು ಪಂಜಾಬ್ ಮಾಜಿ ಸಿಎಂ ಅಲ್ಲ ಎಂದು ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.