ETV Bharat / bharat

ಜಿಮ್ ಮಾಡುವಾಗ ಎಚ್ಚರ: ವರ್ಕೌಟ್​ ವೇಳೆಯೇ ಕೊನೆಯುಸಿರೆಳೆದ ಗಣ್ಯರಿವರು!.

author img

By

Published : Oct 30, 2021, 10:17 AM IST

Incidents of Actors and common people dying while doing exercises
ಪುನೀತ್​ ರಾಜ್​ಕುಮಾರ್

ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಹಲವಾರು ಜನ ಮೃತಪಟ್ಟಿದ್ದಾರೆ. ಬಾಲಿವುಡ್​ ನಟ ಸಿದ್ದಾರ್ಥ್​ ಶುಕ್ಲಾ, ಸ್ಯಾಂಡಲ್​ವುಡ್​ ನಟ ಪುನೀತ್​ ರಾಜ್​ಕುಮಾರ್​ ಸೇರಿ ಹಲವು ಮಂದಿ ಜಿಮ್​ಮಾಡುವಾಗ ಹಾರ್ಟ್​ ಅಟ್ಯಾಕ್​ ಆಗಿ ಸಾವನ್ನಪ್ಪಿದ್ದಾರೆ.

31.05.13: ದೂರದರ್ಶನ ಮತ್ತು ಸಿನಿಮಾ ನಟ ಅಬೀರ್ ಗೋಸ್ವಾಮಿ (38) ತಮ್ಮ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಮಧ್ಯಾಹ್ನ 1.50ರ ಸುಮಾರಿಗೆ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತಾದರೂ ಆಸ್ಪತ್ರೆ ಸೇರುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

04.07.2013: ಸಿನಿಮಾ ಕ್ಷೇತ್ರದಲ್ಲಿ ಮಿಂಚುವ ಹಂಬಲದಿಂದ ಚಿತ್ರರಂಗಕ್ಕೆ ಪದಾರ್ಪಣೆ ದೊಡ್ಡಬಳ್ಳಾಪುರ ಮೂಲದ ಕನ್ನಡದ ನಟ ಹೇಮಂತ್ (27) ಅವರು ಹೆಬ್ಬಾಳದ ಜಿಮ್‌ನಲ್ಲಿ ವರ್ಕೌಟ್​​ ಮಾಡುವಾಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು.ಹೇಮಂತ್ ಜಿಮ್​ ಮಾಡುತ್ತಿದ್ದ ವೇಳೆ ಎದೆನೋವು ಎಂದರು. ತಕ್ಷಣ ಅವರನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ರವಾನಿಸಲಾಯ್ತು.

ನಂತರ M S ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೂ ಅವರು ಬದುಕುಳಿಯಲಿಲ್ಲ. ನಿರ್ಮಾಪಕ ಜಿ ರಾಮಕೃಷ್ಣ ಅವರ ಪುತ್ರ, ಹೇಮಂತ್ ಮಾರ್ಚ್ 2013 ರಲ್ಲಿ ಬಿಡುಗಡೆಯಾದ ತಮ್ಮ ಚೊಚ್ಚಲ ಚಿತ್ರ 'ನೆನಪಿನಂಗಳ'ದಲ್ಲಯೇ ಹೊಸ ಭರವಸೆ ಹುಟ್ಟುಹಾಕಿದ್ರು.

14.07.2017: ಹೈದರಾಬಾದ್‌ನಲ್ಲಿ ಡೆಲ್​ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವರುಣ್​ ಕುಮಾರ್​ ಎಂಬ 22 ವರ್ಷದ ಟೆಕ್ಕಿಯೊಬ್ಬರು ಮಾದಾಪುರದದಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಕುಸಿದು ಬಿದ್ದು ಇಹಲೋಕ ತ್ಯಜಿಸಿದರು.

20.05.17: ಕೋಲ್ಕತ್ತಾದಲ್ಲಿ ಐಬಿಎಂನ ಸಿಸ್ಟಂ ಇಂಜಿನಿಯರ್ ಆಗಿದ್ದ ಮೈಸೂರು ಮೂಲದ ಅಮರ್ ಎಂ(31), ನ್ಯೂ ಟೌನ್ ಕಚೇರಿಯ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗ ಕುಸಿದು ಬಿದ್ದು ಸಾವನ್ನಪ್ಪಿದರು. ಅತಿಯಾದ ವ್ಯಾಯಾಮದ ಅಪಾಯಗಳನ್ನು ವೈದ್ಯರು ಈ ವೇಳೆ ಒತ್ತಿಹೇಳಿದರು. ಕೋಲ್ಕತ್ತಾದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

27.09.2019: ನೋಯ್ಡಾದಲ್ಲಿ 24 ವರ್ಷದ ಯುವಕನೊಬ್ಬ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದಾಗ ಕುಸಿದು ಬಿದ್ದ. ಅವರು ಹೃದಯಾಘಾತದಿಂದ ಬಳಲುತ್ತಿದ್ದರ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ರು.

30.04.2019: ಎಸ್‌ ಆರ್‌ ನಗರ ಪೊಲೀಸ್‌ ವ್ಯಾಪ್ತಿಯ ಗೋಲ್ಡನ್ ಜಿಮ್​ನಲ್ಲಿ ವರ್ಕ್‌ಔಟ್‌ ವೇಳೆ ಆದಿತ್ಯ ಎಂಬ 29 ವರ್ಷದ ಯುವಕ ಮೃತಪಟ್ಟರು. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

19.01.2019: ಥಾಣೆಯ ವಿಷ್ಣು ನಗರದಲ್ಲಿನ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ 28 ವರ್ಷದ ಪ್ರತೀಕ್ ಪರದೇಶಿ ಎಂಬುವವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.

13.03.20: ದಕ್ಷಿಣ ಮುಂಬೈನ ಡೋಂಗಾರಿ ಪ್ರದೇಶದ ಸದ್ಗುರು ಫಿಟ್‌ನೆಸ್ ಜಿಮ್‌ನಲ್ಲಿ18 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

02.09.2021: ಕಿರುತರೆ ಹಾಗೂ ಬಾಲಿವುಡ್​​ ನಟ ಸಿದ್ಧಾರ್ಥ್ ಶುಕ್ಲಾ (40) ಹೃದಯಾಘಾತದಿಂದ ನಿಧನರಾದರು. ಹಿಂದಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​-13ರ ವಿಜೇತರಾಗಿದ್ದ ಶುಕ್ಲಾ, ಜಿಮ್​ನಲ್ಲಿ ಕಸರತ್ತು ನಡೆಸುತ್ತಿದ್ದ ವೇಳೆ ಅಸ್ವಸ್ಥಗೊಂಡರು ನಂತರ ಹೃದಯಾಘಾತ ಸಂಭವಿಸಿತು. ಅವರನ್ನು ಮುಂಬೈನ ಕೂಪರ್​ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಅಲ್ಲಿಯೇ ವಿಧಿವಶರಾದರು.

29.10.2021: ಕನ್ನಡದ ಹೆಸರಾಂತ ನಟ ಪುನೀತ್​ ರಾಜ್​ಕುಮಾರ್​ (46) ಜಿಮ್​ನಲ್ಲಿ ವರ್ಕೌಟ್ ಮಾಡುವ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಅವರನ್ನು ಬೆಂಗಳೂರಿನ ರಮಣಶ್ರೀ ಆಸ್ಪತ್ರೆಗೆ ದಾಖಲಿಸಿ ನಂತರ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ, ಅವರು ಅಲ್ಲಿಯೇ ಕೊನೆಯುಸಿರೆಳೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.