ETV Bharat / bharat

ಮಾರುಕಟ್ಟೆಯಲ್ಲಿ ಕೋವಿಶೀಲ್ಡ್​, ಕೋವ್ಯಾಕ್ಸಿನ್​​ ಮಾರಾಟಕ್ಕೆ DCGI ಅನುಮೋದನೆ

author img

By

Published : Jan 27, 2022, 4:39 PM IST

Updated : Jan 27, 2022, 10:36 PM IST

Regular market approval granted for Covishield
Regular market approval granted for Covishield

Covaxin, Covishield granted regular market approval: ಕೋವ್ಯಾಕ್ಸಿನ್​, ಕೋವಿಶೀಲ್ಡ್​​​​ ಕೋವಿಡ್ ಲಸಿಕೆಗಳು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಮಾರುಕಟ್ಟೆಗೋಸ್ಕರ ಅನುಮೋದನೆ ಪಡೆದುಕೊಂಡಿವೆ. ಇನ್ಮುಂದೆ ಮಾರುಕಟ್ಟೆಯಲ್ಲಿ ಈ ವ್ಯಾಕ್ಸಿನ್​ಗಳು ಲಭ್ಯವಾಗಲಿವೆ.

ನವದೆಹಲಿ: ಕೆಲವೊಂದು ಷರತ್ತುಗಳೊಂದಿಗೆ ಕೋವಿಡ್-19 ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಮತಿ ಪಡೆದುಕೊಂಡಿವೆ. ಇದಕ್ಕೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ​​​ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮಾಂಡವೀಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ.

  • The @CDSCO_INDIA_INF has now upgraded the permission for COVAXIN and Covishield from restricted use in emergency situations to normal new drug permission in the adult population with certain conditions.

    — Dr Mansukh Mandaviya (@mansukhmandviya) January 27, 2022 " class="align-text-top noRightClick twitterSection" data=" ">

ವಯಸ್ಕ ವ್ಯಕ್ತಿಗಳಿಗೆ ಬಳಕೆ ಮಾಡಲು ಮಾತ್ರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್​ ಲಸಿಕೆಗಳಿಗೆ DCGIನಿಂದ ಅನುಮೋದನೆ ಸಿಕ್ಕಿದ್ದು, 2019ರ ಹೊಸ ಔಷಧ ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮದ ಅಡಿಯಲ್ಲಿ ಗ್ರೀನ್​ ಸಿಗ್ನಲ್​ ನೀಡಲಾಗಿದೆ. ಮಾರುಕಟ್ಟೆಗೆ ಅನುಮೋದನೆ ನೀಡಿರುವುದರಿಂದ ಲಸಿಕೆಗಳು ಜನರಿಗೆ ನೇರವಾಗಿ ಸಿಗುವುದಿಲ್ಲ. ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳು ಅವುಗಳನ್ನ ನೀಡಲಿವೆ ಎಂದು ತಿಳಿದು ಬಂದಿದೆ.

ಜನರು ಇನ್ಮುಂದೆ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಂದ ಕೋವಿಡ್​ ವ್ಯಾಕ್ಸಿನ್ ಖರೀದಿ ಮಾಡಬಹುದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿ ರಿಲೀಸ್ ಮಾಡುವ ಸಾಧ್ಯತೆ ಇದೆ. ಕೋವಿಡ್​ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಔಷಧಾಲಯಗಳು ಆರು ತಿಂಗಳ ಡೇಟಾ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾಗೆ ನೀಡಬೇಕು.

ಇದನ್ನೂ ಓದಿರಿ: ಟಾಟಾ ಗ್ರೂಪ್​ಗೆ ಅಧಿಕೃತವಾಗಿ ಏರ್​ ಇಂಡಿಯಾ ಹಸ್ತಾಂತರ.. ಮರಳಿ ಗೂಡು ಸೇರಿದ ವಿಮಾನಯಾನ ಸಂಸ್ಥೆ

ಕೇಂದ್ರೀಯ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು (ಎಸ್‌ಇಸಿ) ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲು ಈಗಾಗಲೇ ಒಪ್ಪಿಗೆ ನೀಡಿದ್ದು, ಇದನ್ನು ಆಧರಿಸಿ ಲಸಿಕೆ ತಯಾರಿಕೆ ಕಂಪನಿಗಳಾದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮತ್ತು ಭಾರತ್‌ ಬಯೊಟೆಕ್‌ ಭಾರತೀಯ ಔಷಧಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದವು. ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಎರಡು ಲಸಿಕೆಗಳು ಈಗಾಗಲೇ ಆಸ್ಪತ್ರೆಗಳಲ್ಲಿ ಮಾರಾಟವಾಗ್ತಿದ್ದು, ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಪ್ರತಿ ಡೋಸ್‌ಗೆ 1,200 ರೂ.ಗಳ ದರದಲ್ಲಿ ಲಭ್ಯವಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಖಾಸಗಿ ಸೌಲಭ್ಯಗಳಲ್ಲಿ 780 ರೂ.ಗಳಿಗೆ ಮಾರಾಟವಾಗ್ತಿವೆ. ಇದೀಗ ಇವುಗಳ ಬೆಲೆಯಲ್ಲೂ ಗಣನೀಯವಾದ ಇಳಿಕೆ ಕಂಡು ಬರುವ ಸಾಧ್ಯತೆ ಇದ್ದು, ಪ್ರತಿ ಡೋಸ್​ಗೆ 275 ರೂ. ಆಗಲಿದೆ ಎಂದು ತಿಳಿದು ಬಂದಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated :Jan 27, 2022, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.