ETV Bharat / bharat

4ನೇ ಸುತ್ತಿನ ವಿಚಾರಣೆ: ಇಡಿ ಮುಂದೆ ಹಾಜರಾದ ರಾಹುಲ್ ಗಾಂಧಿ

author img

By

Published : Jun 20, 2022, 12:09 PM IST

Updated : Jun 20, 2022, 12:17 PM IST

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಜೂನ್ 13 ರಿಂದ 15 ರವರೆಗೆ ವಿಚಾರಣೆ ನಡೆಸಿತ್ತು. ಸುಮಾರು 30 ಗಂಟೆಗಳಿಗೂ ಹೆಚ್ಚಿನ ಕಾಲ ಅವರನ್ನು ಪ್ರಶ್ನೆ ಮಾಡಿತ್ತು. ಇಂದೂ ಕೂಡಾ ವಿಚಾರಣೆ ಮುಂದುವರೆದಿದೆ.

Rahul Gandhi
ರಾಹುಲ್ ಗಾಂಧಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕನೇ ಸುತ್ತಿನ ವಿಚಾರಣೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗಿದ್ದಾರೆ. ಈ ನಡುವೆ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಹಿರಿಯ ನಾಯಕರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ಮುಂದುವರಿಸಿದ್ದಾರೆ.

ದೇಶಾದ್ಯಂತ ಕಾಂಗ್ರೆಸ್​ ನಾಯಕರ ತೀವ್ರ ಪ್ರತಿಭಟನೆ ನಡುವೆ, ವಯನಾಡು ಸಂಸದರೂ ಆಗಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಜೂನ್ 13 ರಿಂದ 15 ರವರೆಗೆ ವಿಚಾರಣೆ ನಡೆಸಿತ್ತು. ಸುಮಾರು 30 ಗಂಟೆಗಳಿಗೂ ಹೆಚ್ಚಿನ ಕಾಲ ಅವರನ್ನು ಪ್ರಶ್ನೆ ಮಾಡಿತ್ತು. ಇಂದೂ ಕೂಡಾ ಇಡಿ ಅಧಿಕಾರಿಗಳು ರಾಹುಲ್​ ಗಾಂಧಿ ಅವರನ್ನು ಪ್ರಶ್ನಿಸುತ್ತಿದ್ದಾರೆ.

ಗಮನಾರ್ಹ ವಿಷಯ ಎಂದರೆ ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಇಡಿ ರಾಹುಲ್​ ಗಾಂಧಿಗೆ ಸಮನ್ಸ್​ ಜಾರಿ ಮಾಡಿತ್ತು. ಆದರೆ ಅವರು ಶುಕ್ರವಾರದ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಅಧಿಕಾರಿಗಳನ್ನು ಕೋರಿಕೊಂಡಿದ್ದರು. ಈ ಮನವಿಗೆ ಒಪ್ಪಿಗೆ ನೀಡಿದ್ದ ಇಡಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿತ್ತು.

  • #WATCH | Delhi: Congress leader Priyanka Gandhi Vadra takes Rahul Gandhi's supporter in her car as she headed towards Jantar Mantar where her party is protesting over ED probe against Rahul in the National Herald case pic.twitter.com/K1lZS5Rift

    — ANI (@ANI) June 20, 2022 " class="align-text-top noRightClick twitterSection" data=" ">

ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಜೂನ್ 17 ರಿಂದ ಜೂನ್ 20 ರವರೆಗೆ ಅವರ ವಿಚಾರಣೆ ಮುಂದೂಡಬೇಕು ಎಂಬ ಕಾಂಗ್ರೆಸ್​ ಮಾಜಿ ಅಧ್ಯಕ್ಷರ ಮನವಿಯನ್ನು ಇಡಿ ಸಮ್ಮತಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು ಇಡಿ ಮುಂದೆ ಹಾಜರಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ: ಜಂತರ್​​ ಮಂತರ್​ನಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್​ ಖರ್ಗೆ, ಸಲ್ಮಾನ್​ ಖುರ್ಷಿದ್​, ಕೆ ಸುರೇಶ್​,ವಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿ ಪೊಲೀಸರು ಜಂತರ್​ ಮಂತರ್​ನಲ್ಲಿ 1000 ಜನರಿಗೆ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಿದ್ದಾರೆ.

  • Delhi | Congress leaders, including Mallikarjun Kharge, Salman Khurshid, K Suresh, V Narayanasamy and others, hold a 'Satyagraha' at Jantar Mantar against ED summons to Rahul Gandhi and #AgnipathScheme pic.twitter.com/TbTWnanZww

    — ANI (@ANI) June 20, 2022 " class="align-text-top noRightClick twitterSection" data=" ">

ಇದನ್ನೂ ಓದಿ: ನಾಲ್ಕು ದಿನಗಳ ಬಿಡುವಿನ ಬಳಿಕೆ ಮತ್ತೆ ಇಡಿ ಮುಂದೆ ರಾಹುಲ್​ ಹಾಜರು ಸಾಧ್ಯತೆ: ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

Last Updated :Jun 20, 2022, 12:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.