ETV Bharat / bharat

ಕೊಚ್ಚಿ ಏರ್​ಪೋರ್ಟ್​ನಲ್ಲಿ​ ಭಾರತೀಯ ಕೋಸ್ಟ್​​ ಗಾರ್ಡ್ ಹೆಲಿಕಾಪ್ಟರ್​ ಪತನ

author img

By

Published : Mar 26, 2023, 3:46 PM IST

Updated : Mar 26, 2023, 4:21 PM IST

ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಕೋಸ್ಟ್​​ ಗಾರ್ಡ್ ಹೆಲಿಕಾಪ್ಟರ್​ ಪತನವಾಗಿದೆ. ​

coast-guard-helicopter-crashed-near-cochin-international-airport
ಭಾರತೀಯ ಕೋಸ್ಟ್​​ ಗಾರ್ಡ್ ಹೆಲಿಕಾಪ್ಟರ್​ ಪತನ

ಕೊಚ್ಚಿ ಏರ್​ಪೋರ್ಟ್​ನಲ್ಲಿ​ ಭಾರತೀಯ ಕೋಸ್ಟ್​​ ಗಾರ್ಡ್ ಹೆಲಿಕಾಪ್ಟರ್​ ಪತನ

ಎರ್ನಾಕುಲಂ (ಕೇರಳ): ಕೋಸ್ಟ್​​ ಗಾರ್ಡ್​ ಹೆಲಿಕಾಪ್ಟರ್​ನ್ನು ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನವಾಗಿದೆ. ತರಬೇತಿ ಹಾರಾಟದ ವೇಳೆ ಈ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಇದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಸದ್ಯ ಈ ಅಪಘಾತದ ನಂತರ ರನ್‌ವೇಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ತಾಂತ್ರಿಕ ಸಮಸ್ಯೆ ಕಾರಣದಿಂದ ಹೆಲಿಕಾಪ್ಟರ್​ ಪತನಗೊಂಡಿದೆ ಎಂದು ಪ್ರಾರ್ಥಿಕ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕೋಸ್ಟ್ ಗಾರ್ಡ್ ತರಬೇತಿ ವೇಳೆ ಟೇಕಾಫ್ ಆಗುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ರೇನ್​ವೇ ಸ್ಥಳದಿಂದ ಹೊರ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಹಾರ ರಕ್ಷಣೆ ಕೈಗೊಂಡಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ ಮೂವರ ಪೈಕಿ ಒಬ್ಬರು ಗಾಯಗೊಂಡಿದ್ದಾರೆ. ಈ ಗಾಯಾಳುವನ್ನು 26 ವರ್ಷದ ಸುನಿಲ್ ಲೊಟ್‌ಲಯೆ ಎಂದು ಗುರುತಿಸಲಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ತರಬೇತಿ ವಿಮಾನ ಪತನ: ಮಹಿಳಾ ಟ್ರೈನಿ ಪೈಲಟ್ ಸೇರಿ ಇಬ್ಬರ ಸಾವು

ಈ ಬಗ್ಗೆ ಭಾರತೀಯ ಕೋಸ್ಟ್​​ ಗಾರ್ಡ್ ಮಾಹಿತಿ ನೀಡಿದ್ದು, ಸಿಜಿ 855 ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಹೆಚ್)​ ಧ್ರುವ್ ಮಾರ್ಕ್ III ಪತನಗೊಂಡ ಹೆಲಿಕಾಪ್ಟರ್ ಆಗಿದೆ. ಈ ಹೆಲಿಕಾಪ್ಟರ್​ನಲ್ಲಿ ಕಂಟ್ರೋಲ್ ರಾಡ್‌ಗಳನ್ನು ಅಳವಡಿಸಲಾಗಿತ್ತು. ನಂತರ ತಪಾಸಣೆಗಾಗಿ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಮಧ್ಯಾಹ್ನ 12:25ರ ಹಾರಾಟ ಮಾಡಿತ್ತು. ನೆಲದಿಂದ 30-40 ಅಡಿ ಎತ್ತರದಲ್ಲಿದ್ದಾಗ ಸಮಸ್ಯೆ ಕಂಡು ಬಂದಿದೆ ಎಂದು ತಿಳಿಸಿದೆ.

ಹೆಲಿಕಾಪ್ಟರ್​ನಲ್ಲಿ ಲೋಪ ಕಂಡು ತಕ್ಷಣವೇ ಎಚ್ಚೆತ್ತ ಪೈಲಟ್​ ಸಾಧ್ಯವಾದಷ್ಟು ನಿಧಾನವಾಗಿ ಲ್ಯಾಂಡಿಂಗ್​ ಯತ್ನಿಸಿದ್ದಾರೆ. ಈ ಹೆಲಿಕಾಪ್ಟರ್​ ಎಡಕ್ಕೆ ತಿರುಗಿ ಮುಖ್ಯ ರನ್​ವೇ ಎಡಭಾಗಕ್ಕೆ ಅಪ್ಪಳಿಸಿದೆ. ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಹೆಲಿಕಾಪ್ಟರ್​ನ ರೋಟರ್‌ಗಳು ಮತ್ತು ಏರ್‌ಫ್ರೇಮ್‌ಗೆ ಹಾನಿಯನ್ನುಂಟುಮಾಡಿದೆ. ಈ ಘಟನೆ ಬಗ್ಗೆ ತನಿಖೆ ಮಾಡಲು ಭಾರತೀಯ ಕೋಸ್ಟ್ ಗಾರ್ಡ್ ಆದೇಶಿಸಿದೆ ಎಂದು ಹೇಳಿದೆ.

ಹೆಲಿಕಾಪ್ಟರ್​ ಅಪಘಾತದ ಕಾರಣದಿಂದ ಸದ್ಯಕ್ಕೆ ರನ್​ವೇ ಮುಚ್ಚಲಾಗಿದೆ. ಇಲ್ಲಿ ಇಳಿಯಬೇಕಾದ ವಿಮಾನಗಳು ತಿರುವನಂತಪುರ, ಕೋಯಂಪತ್ತೂರ್ ವಿಮಾನ ನಿಲ್ದಾಣಗಳತ್ತ ತೆರಳಿದವು. ಘಟನಾ ಸ್ಥಳದಲ್ಲಿ ಹೆಲಿಕಾಪ್ಟರ್​ನ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ, ಮುಂಬೈ ಕರಾವಳಿಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾದ ನಂತರ ಮಾರ್ಚ್ 8ರಿಂದ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್‌ಗಳ ಫ್ಲೀಟ್​ಅನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶದಲ್ಲಿ ಪತನಗೊಂಡಿದ್ದ ವಿಮಾನ: ಇದೇ ಮಾರ್ಚ್​ 18ರಂದು ಮಧ್ಯಪ್ರದೇಶದ ಬಾಲಘಾಟ್​ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಪತನಗೊಂಡಿತ್ತು. ಈ ಘಟನೆಯಲ್ಲಿ ಪೈಲಟ್ ಮತ್ತು ತರಬೇತಿನಿರತ ಮಹಿಳಾ ಪೈಲಟ್ ಸಾವನ್ನಪ್ಪಿದ್ದರು. ಪತನಗೊಂಡ ಈ ವಿಮಾನವು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಹಾರಾಟ ಮಾಡಿತ್ತು. ಆದರೆ, ಇದಾದ ನಂತರ ಸ್ವಲ್ಪ ಹೊತ್ತಿನಲ್ಲಿ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿ ಜಿಲ್ಲೆಯ ಗಡಿಯ ಬಳಿ ಪತನವಾಗಿತ್ತು.

ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್​ಗಳ ಸಾವು

Last Updated :Mar 26, 2023, 4:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.