ETV Bharat / bharat

ಕಾವಲುಗಾರನಿಗೆ ಥಳಿಸಿ ಸುಧಾರಣಾ ಕೇಂದ್ರದಿಂದ ಪರಾರಿಯಾದ ಬಾಲ ಕೈದಿಗಳು ಸೆರೆ

author img

By

Published : May 12, 2022, 8:32 AM IST

ಬಿಹಾರದ ಪೂರ್ಣಿಯಾ ಜಿಲ್ಲೆಯ ಹಾಟ್​​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಕ್ಕಳ ಸುಧಾರಣಾ ಕೇಂದ್ರದಿಂದ 11 ಬಾಲಕೈದಿಗಳು ಪರಾರಿಯಾಗಿದ್ದ ಘಟನೆ ನಡೆದಿದ್ದು, ನಂತರ ಎಲ್ಲರೂ ಸೆರೆ ಸಿಕ್ಕಿದ್ದಾರೆ.

children-escaped-from-correctional-home-after-beating-up-security-guard-in-purnea
ಕಾವಲುಗಾರನಿಗೆ ಥಳಿಸಿ ಸುಧಾರಣಾ ಕೇಂದ್ರದಿಂದ ಬಾಲ ಕೈದಿಗಳು, ಸೆರೆ

ಪೂರ್ಣಿಯಾ(ಬಿಹಾರ): ಕಾವಲುಗಾರನಿಗೆ ಥಳಿಸಿ, ಮಕ್ಕಳ ಸುಧಾರಣಾ ಕೇಂದ್ರದಿಂದ 11 ಬಾಲಕೈದಿಗಳು ಪರಾರಿಯಾಗಿದ್ದ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯ ಹಾಟ್​​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ 4.15ಕ್ಕೆ ಸುಮಾರು 11 ಮಕ್ಕಳು ಮುಖ್ಯಗೇಟ್​​​ ಬಳಿ ನಿಂತಿದ್ದ ಭದ್ರತಾ ಸಿಬ್ಬಂದಿಯನ್ನು ಥಳಿಸಿ, ಕಾಲ್ಕಿತ್ತಿದ್ದರು. ಆದರೆ ಕತಿಹಾರ್ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಎಲ್ಲಾ ಮಕ್ಕಳನ್ನು ವಿಕ್ರಮಪುರ ಎಂಬಲ್ಲಿ ವಶಕ್ಕೆ ಪಡೆದಿದ್ದು, ನಿಯಮಾನುಸಾರ ಪೂರ್ಣಿಯಾ ಪೊಲೀಸರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಎಸ್​ಪಿ ಜಿತೇಂದ್ರ ಕುಮಾರ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು, ಮಕ್ಕಳು ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಬೆಳಗ್ಗೆ 4:15ರ ಸುಮಾರಿಗೆ ಭದ್ರತಾ ಸಿಬ್ಬಂದಿ ಶೌಚಾಲಯಕ್ಕೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಸಿಬ್ಬಂದಿಯ ತಲೆಯನ್ನು ಬಟ್ಟೆಯಿಂದ ಸುತ್ತಿ, ಥಳಿಸಿದ್ದಾರೆ. ನಂತರ ಮುಖ್ಯದ್ವಾರದ ಬಾಗಿಲನ್ನು ತೆರೆದು ಅಲ್ಲಿಂದ ಪರಾರಿಯಾಗಿದ್ದರು ಎಂದು ತಿಳಿಸಿದರು.

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಕ್ಕಳನ್ನು ಈ ಸುಧಾರಣಾ ಗೃಹದಲ್ಲಿ ಇರಿಸಲಾಗಿತ್ತು. ಪ್ರಸ್ತುತ ಸುಧಾರಣಾ ಗೃಹದಲ್ಲಿ ಒಬ್ಬರು ಭದ್ರತಾ ಸಿಬ್ಬಂದಿಯಿದ್ದು, ಇಬ್ಬರ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತಮ್ಮ ಮಕ್ಕಳು ತಲೆಮರೆಸಿಕೊಂಡಿದ್ದ ವಿಚಾರ ತಿಳಿದು ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವನ್ಯಜೀವಿ ಮಾಂಸ ಮಾರಾಟ: ಹೋಟೆಲ್​ ಮೇಲೆ ದಾಳಿ, ಉಡ, ಇತರೆ ಪ್ರಾಣಿಗಳ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.