ETV Bharat / bharat

ಇಂದು ವಿಶ್ವ ಮಾನವೀಯ ದಿನ: ಕೋವಿಡ್​ ಸಮಯದಲ್ಲಿ ಇದರ ಮಹತ್ವವೇನು?

author img

By

Published : Aug 19, 2020, 7:01 AM IST

ಬಾಗ್ದಾದ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಇರಾಕ್ ದೇಶದ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅವರ ಪ್ರತಿನಿಧಿಯಾಗಿದ್ದ ಸೆರ್ಗಿಯೋ ವಿರಾ ಡಿ ಮೆಲ್ಲೋ ಮತ್ತು ಇವರ 21 ಸಹೋದ್ಯೋಗಿಗಳು ಅಸುನೀಗುತ್ತಾರೆ. ಈ ಘಟನೆಯ ಸ್ಮರಣೆಗಾಗಿ 2009ರಿಂದ ಪ್ರತಿ ವರ್ಷ ಆಗಸ್ಟ್. 19ರಂದು ವಿಶ್ವ ಮಾನವತ್ವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

World Humanitarian Day
ವಿಶ್ವ ಮಾನವೀಯ ದಿನ

ಇಂದು ಆಗಸ್ಟ್​.19 ಅಂದರೆ ವಿಶ್ವ ಮಾನವೀಯ ದಿನ. ಮನುಷ್ಯನ ಕಷ್ಟಕ್ಕೆ ಸ್ಪಂದಿಸುವ, ತೊಂದರೆಗೆ ನೆರವಾಗುವ ಮಾನವತಾವಾದಿಗಳ ಸೇವೆಗೆ ಗೌರವ ನೀಡುವ ಸಲುವಾಗಿ ವಿಶ್ವ ಸಂಸ್ಥೆ ವಿಶ್ವ ಮಾನವೀಯ ದಿನವನ್ನು ಆಚರಿಸುತ್ತಿದೆ.

ಮಾನವೀಯ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿರುವ ಕಾರ್ಮಿಕರಿಗಾಗಿ ಮತ್ತು ವಿಶ್ವದಾದ್ಯಂತದ ಬಿಕ್ಕಟ್ಟಿನಿಂದ ಬಳಲುತ್ತಿರುವ ಜನರಿಗೆ ಬೆಂಬಲವನ್ನು ನೀಡುತ್ತಿರುವ ವ್ಯಕ್ತಿಗಳನ್ನು ಗೌರವಿಸುವ ಸಲುವಾಗಿ ವಿಶ್ವದಾದ್ಯಂತದ ಮಾನವೀಯ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಮಾನವೀಯ ದಿನವನ್ನು 2008 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸ್ಥಾಪಿಸಿತು ಮತ್ತು ಇದನ್ನು ಅಧಿಕೃತವಾಗಿ 2009 ರಲ್ಲಿ ಆಚರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ವಿಶ್ವವು ಕೋವಿಡ್​-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವುದರಿಂದ ಈ ವರ್ಷ ವಿಶ್ವ ಮಾನವೀಯ ದಿನವನ್ನು ಆಚರಿಸಲಾಗುತ್ತಿದೆ.

ಇತ್ತೀಚೆಗೆ ನೆರೆಹಾನಿಗೆ ಮತ್ತು ಕೊರೊನಾಗೆ ಒಳಗಾದವರ ನೆರವಿಗೆ ಅನೇಕ ಮನಸ್ಸುಗಳು ಒಂದಾಗಿ ಕೈಜೋಡಿಸಿರುವುದು ಸ್ತುತ್ಯಾರ್ಹ ಕೆಲಸವಾಗಿದೆ. ಜಾತಿ, ಮತ ಪಂಥಗಳನ್ನು ಮರೆತು ಒಟ್ಟಾಗಿ ನಿಷ್ಕಲ್ಮಷ ಮನಸ್ಸಿನಿಂದ ನಿಮ್ಮ ಸೇವೆಯ ಹಸ್ತವನ್ನು ಚಾಚಿರುವುದು ನೊಂದ ಮನಕ್ಕೆ ಕೊಂಚ ನಿರಾಳತೆ ನೀಡಿದೆ. ಇದನ್ನೆ ಅಲ್ಲವೇ ಮಾನವೀಯತೆ ಎನ್ನುವುದು, ಇದರಿಂದಲೇ ಅಲ್ಲವೇ ಮಾನವೀಯತೆಯ ಸಾರ್ಥಕತೆ ಸಿಗುವುದು.

ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿಯೂ ಮಾನವೀಯತೆಯನ್ನು ಮೆರೆಯುವ ಮಾನವತಾವಾದಿ ಸಂಘಟನೆಯ ಅವಶ್ಯಕತೆ ಜಗತ್ತಿಗಿದೆ. ಎಷ್ಟೋ ಅಂತಾರಾಷ್ಟ್ರೀಯ ಎನ್‌ಜಿಓಗಳು ಹಸಿವಿನಿಂದ ಬಳಲುತ್ತಿರುವ ಬಡದೇಶದ ಪ್ರಜೆಗಳಿಗೆ ಮತ್ತು ನಿರಾಶ್ರಿತರಿಗೆ ಆಹಾರ ನೀಡುತ್ತಿವೆ.

ಜನರ ಜೀವವನ್ನು ರಕ್ಷಿಸಲು ಪ್ರಾಣ ತ್ಯಾಗಮಾಡಲೂ ಹೆದರದೆ ಕೆಲಸ ಮಾಡುವ ಎನ್‌ಜಿಓ ಸೇವೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ತಾಣಗಳು ಹಾಗೂ ಮಾಧ್ಯಮಗಳಿಗೆ ವಿಶ್ವ ಸಂಸ್ಥೆ ಸೂಚಿಸಿದೆ. ಮನುಷ್ಯರೇ ಮನುಷ್ಯರಿಗಾಗಿ ಸಹಕರಿಸಿ, ಮಾನವರೇ ಮಾನವೀಯತೆಯನ್ನು ಪ್ರದರ್ಶಿಸಿ ಎಂಬುದು ವಿಶ್ವ ಮಾನವೀಯ ದಿನದ ಸಂದೇಶ. .. ಎಲ್ಲರಿಗೂ ವಿಶ್ವ ಮಾನವೀಯ ದಿನದ ಶುಭಾಶಯಗಳು

ವಿಶ್ವ ಮಾನವೀಯ ದಿನ ಏಕೆ ಮುಖ್ಯ:

ಇದನ್ನು ಮಾನವೀಯ ಕಾರ್ಯ ಮಾಡಿದ ವೀರರನ್ನು ನೆನೆಯಲು ಆಚರಿಸಲಾಗುತ್ತದೆ.

ಇದು ಮಾನವೀಯ ಕಾರ್ಯದ ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಇದು ಅಂತಾ​​ರಾಷ್ಟ್ರೀಯ ಆಚರಣೆಯಾಗಿದೆ.

ಕೋವಿಡ್​-19 ಸಮಯದಲ್ಲಿ ವಿಶ್ವದಾದ್ಯಂತ ಮಾನವೀಯ ಕಾರ್ಯಗಳ ಅಗತ್ಯತೆ ತುಂಬಾ ಇದೆ.

ಜಾಗತಿಕವಾಗಿ ಎಚ್‌ಆರ್‌ಪಿ(Humanitarian Response Plan)ಯನ್ನು ಮೂರು ಕಾರ್ಯತಂತ್ರದ ಆಧಾರದ ಮೇಲೆ ರಚಿಸಲಾಗಿದೆ.

1.ಕೋವಿಡ್​-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ನಿಯಂತ್ರಿಸುವುದು ಹಾಗೂ ಮರಣ ಪ್ರಮಾಣ ಕಡಿಮೆ ಮಾಡುವುದು.

2. ಮಾನವ ಸ್ವತ್ತುಗಳು ಮತ್ತು ಹಕ್ಕುಗಳು, ಸಾಮಾಜಿಕ ಒಗ್ಗಟ್ಟು ಮತ್ತು ಜೀವನೋಪಾಯ ಹಾಳಾಗದಂತೆ ನೋಡಿಕೊಳ್ಳುವುದು.

3.ವಿಶೇಷವಾಗಿ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗುವ ನಿರಾಶ್ರಿತರು, ಆಂತರಿಕವಾಗಿ ಸ್ಥಳಾಂತರಗೊಂಡ ಜನರು, ವಲಸಿಗರು ಮತ್ತು ಸಮುದಾಯಗಳನ್ನು ರಕ್ಷಿಸಿ, ಸಹಾಯ ಮಾಡುವುದು ಇದರ ಉದ್ದೇಶವಾಗಿದೆ.

ಸಾಂಕ್ರಾಮಿಕ ರೋಗದ ಸಮಯದಲ್ಲಿ ಜೀವ ಉಳಿಸುವ ಕೆಲಸವನ್ನು ಮಾಡುವುದು.

ವಿಶ್ವ ಮಾನವೀಯ ದಿನದಂದು (ಡಬ್ಲ್ಯುಎಚ್‌ಡಿ) ಆಗಸ್ಟ್. 19 ರಂದು ಮಾನವೀಯ ಕೆಲಸ ಮಾಡುವ ವೇಳೆ ಸಾವನ್ನಪ್ಪಿದ ಮತ್ತು ಗಾಯಗೊಂಡ ವ್ಯಕ್ತಿಗಳನ್ನು ಈ ದಿನದಂದು ಸ್ಮರಿಸಲಾಗುತ್ತದೆ. ಕೋವಿಡ್​ ಸಮಯದಲ್ಲಿ ಜನರ ಜೀವ ಉಳಿಸಲು ಕಾರ್ಯನಿರ್ವಹಿಸಿದ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರನ್ನು ನಾವು ಈ ದಿನ ಗೌರವಿಸುತ್ತೇವೆ.

ಸಾರ್ವಜನಿಕ ಆರೋಗ್ಯದ ಮೇಲೆ ಕೋವಿಡ್​-19 ಪರಿಣಾಮ:

ವೈಯಕ್ತಿಕ ಮತ್ತು ಸಮುದಾಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದರ ಜೊತೆಗೆ, ಕೋವಿಡ್​-19 ವಿಶ್ವದಾದ್ಯಂತ ಅಗತ್ಯ ಆರೋಗ್ಯ ಮತ್ತು ಮಾನವೀಯ ಸೇವೆಗಳಿಗೆ ದೊಡ್ಡ ಅಡ್ಡಿ ಉಂಟುಮಾಡಿದೆ.

2020 ರಲ್ಲಿ ಸುಮಾರು 168 ಮಿಲಿಯನ್ ಜನರಿಗೆ ಮಾನವೀಯ ನೆರವು ಮತ್ತು ರಕ್ಷಣೆಯ ಅಗತ್ಯವಿದೆ. ಇದು ವಿಶ್ವದ ಸುಮಾರು 45 ಜನರಲ್ಲಿ 1 ಜನರನ್ನು ಪ್ರತಿನಿಧಿಸುತ್ತದೆ. ವಿಶ್ವಸಂಸ್ಥೆ ಮತ್ತು ಪಾಲುದಾರ ಸಂಸ್ಥೆಗಳು ಸುಮಾರು 109 ಮಿಲಿಯನ್ ದುರ್ಬಲ ಜನರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿವೆ. ಇದಕ್ಕೆ. 28.8 ಬಿಲಿಯನ್ ಹಣದ ಅಗತ್ಯವಿರುತ್ತದೆ.

ಜಾಗತಿಕವಾಗಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಮತ್ತು ಹುಡುಗಿಯರು ತಮ್ಮ ಜೀವಿತಾವಧಿಯಲ್ಲಿ ಕೆಲವು ರೀತಿಯ ಹಿಂಸಾಚಾರವನ್ನು ಅನುಭವಿಸುತ್ತಾರೆ. ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯಗಳು ದೀರ್ಘಕಾಲೀನ ಪರಿಣಾಮ ಬೀರುತ್ತವೆ. ಲಿಂಗ ಆಧಾರಿತ ಹಿಂಸೆ (ಜಿಬಿವಿ) ಹೆಚ್ಚಿದ್ದು, ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳನ್ನು ಸಹ ಹೊಂದಿದೆ.

ಅಭದ್ರತೆ ಮತ್ತು ಹವಾಮಾನದಿಂದಾಗಿ ಮಾನವೀಯ ಅಗತ್ಯಗಳು ಹೆಚ್ಚಾಗುತ್ತವೆ:

ಹೆಚ್ಚುತ್ತಿರುವ ಅಗತ್ಯತೆಗಳ ಸಂಘರ್ಷವು ಮುಖ್ಯ ಕಾರಣವಾಗಿದೆ. ಆದರೆ ಅನೇಕ ಸ್ಥಳಗಳಲ್ಲಿ ಜನರ ಜೀವನ ಮತ್ತು ಜೀವನೋಪಾಯಕ್ಕೆ ತೊಂದರೆಯಾದಗ, ಅವರಿಗೆ ಅದನ್ನು ನಿಭಾಯಿಸುವ ಸಾಮರ್ಥ್ಯವನ್ನು ಮಾನವೀಯ ಕಾರ್ಯಗಳು ಮಾಡುತ್ತವೆ. ಹವಾಮಾನ ವೈಪರಿತ್ಯದಿಂದ ಉಂಟಾಗುವ ತೊಂದರೆಗಳೆಂದರೇ, ಆಹಾರ ಅಭದ್ರತೆ ಇವು 2020 ರಲ್ಲಿ ಪ್ರತಿಯೊಂದು ದೇಶಗಳಲ್ಲಿಯೂ ಹೆಚ್ಚಾಗಿದ್ದು, ಮಾನವೀಯ ಕಾರ್ಯಗಳ ಅಗತ್ಯತೆಗಳನ್ನು ಹೆಚ್ಚಿಸಿದೆ.

ಈ ದಿನಾಚರಣೆಯ ಸಂದರ್ಭದಲ್ಲಿ ನಾವೆಲ್ಲರೂ ಪಣ ತೊಡೋಣ. 'ಏನಾದರು ಆಗು ಮೊದಲು ಮಾನವನಾಗು' ಎಂಬ ಕುವೆಂಪು ಕವಿವಾಣಿಯಂತೆ ಬಾಳೋಣ. ಮಾನವೀಯತೆ ಮೆರೆದು ಅಮರರಾಗಿರುವ ಜೀವಿಗಳಿಗೊಂದು ವಂದನೆಗಳನ್ನು ಸಲ್ಲಿಸೋಣ.

ಜನರ ಜೀವವನ್ನು ರಕ್ಷಿಸಲು ಪ್ರಾಣ ತ್ಯಾಗಮಾಡಲೂ ಹೆದರದೆ ಕೆಲಸ ಮಾಡುವ ಎನ್‌ಜಿಓ ಸೇವೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ತಾಣಗಳು ಹಾಗೂ ಮಾಧ್ಯಮಗಳಿಗೆ ವಿಶ್ವ ಸಂಸ್ಥೆ ಸೂಚಿಸಿದೆ. ಮನುಷ್ಯರೇ ಮನುಷ್ಯರಿಗಾಗಿ ಸಹಕರಿಸಿ, ಮಾನವರೇ ಮಾನವೀಯತೆಯನ್ನು ಪ್ರದರ್ಶಿಸಿ ಎಂಬುದು ವಿಶ್ವ ಮಾನವೀಯ ದಿನದ ಸಂದೇಶ. .. ಎಲ್ಲರಿಗೂ ವಿಶ್ವ ಮಾನವೀಯ ದಿನದ ಶುಭಾಶಯಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.