ETV Bharat / bharat

ಬುಡಕಟ್ಟು ಯುವಕರ ಬದುಕು ಬದಲಿಸಿದ 'ಕಡಕ್​​ನಾಥ್'​ ಕೋಳಿ ಉದ್ಯಮ

author img

By

Published : Nov 16, 2020, 10:12 AM IST

ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಬುಡಕಟ್ಟು ಜನಾಂಗ ಕ್ಷೇಯೋಭಿವೃದ್ಧಿಗಾಗಿ ‘ಕಡಕ್​ನಾಥ್​​​’ ಕೋಳಿ ಸಾಕಣೆ ಬಗ್ಗೆ ತರಬೇತಿ ನೀಡಿತು.ಇದೀಗಬುಡಕಟ್ಟು ಜನಾಂಗದವರು ಕೋಳಿ ಸಾಕಣೆಯನ್ನ ಜೀವಾನಾಧಾರವಾಗಿರಿಸಿಕೊಂಡು ಯಶಸ್ಸು ಕಂಡಿದ್ದಾರೆ.

Kadaknath farming changing lives of tribal youths in Asansol
ಕಡಕ್​​ನಾಥ್ ಕೋಳಿ ಸಾಕಾಣಿಕೆ

ಪಶ್ಚಿಮ ಬರ್ಧಮನ್: ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮನ್ ಜಿಲ್ಲೆಯ ಅಲ್ಲಾಸಿ ಗ್ರಾಮದ ಬುಡಕಟ್ಟು ಯುವಕರನ್ನು ‘ಕಡಕ್​ನಾಥ್​​​’ ಕೋಳಿ ಸಾಕಣೆಯಲ್ಲಿ ತೊಡಗಿಸುವ ಮೂಲಕ ರಾಜ್ಯ ಸರ್ಕಾರವು ಅವರ ಜೀವನೋಪಾಯದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದೆ.

ಕಡಕ್​​ನಾಥ್ ಕೋಳಿ ಸಾಕಾಣಿಕೆ

ರೈತರ ಜೀವನದಲ್ಲಿ ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಯುವಕರ ಬಾಳಿನಲ್ಲಿ ಉತ್ತಮ ಬದಲಾವಣೆಗಳನ್ನು ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಜಂಟಿಯಾಗಿ ‘ಕಡಕ್​ನಾಥ್​​’ ಕೋಳಿ ಸಾಕಣೆ ಬಗ್ಗೆ ತಾಂತ್ರಿಕ ಜ್ಞಾನವನ್ನು ನೀಡುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು. ಇಲ್ಲಿ ತರಬೇತಿ ಪಡೆದ ಬುಡಕಟ್ಟು ಜನಾಂಗದ ಯುವಕರು ಜಮೀನಿನಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುಗಳಿಂದ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಕಡಕ್​ನಾಥ್ 300 ಕೋಳಿ ಮರಿಗಳನ್ನು ಸಾಕಲು ಪ್ರಾರಂಭಿಸಿದರು. ಈಗ ಇದೇ ಕೋಳಿ ಸಾಕಣೆ ಅವರು ಜೀವನದ ದಿಕ್ಕನ್ನೇ ಬದಲಿಸಿದ್ದು, ವಾರ್ಷಿಕವಾಗಿ ಸುಮಾರು 3 ಲಕ್ಷ ರೂ.ಗಳವರೆಗೆ ಆದಾಯ ಗಳಿಸುತ್ತಿದ್ದಾರೆ.

ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಯುವ ಉದ್ಯಮಿಯೊಬ್ಬರು, ಈ ಕೋಳಿ ಸಾಕಣೆ ತಮ್ಮ ಕೈ ಹಿಡಿದಿದ್ದು, ಅವುಗಳನ್ನು ಸಾಕಲು ತೆರೆದ ಶೆಡ್​​ವೊಂದನ್ನು ನಿರ್ಮಿಸಿದ್ದೇವೆ ಕೋಳಿಗಳು ಎಲ್ಲೇ ಅಲೆದಾಡುತ್ತಿದ್ದರೂ, ನಿಗದಿತ ಸಮಯ ಮತ್ತು ಸ್ಥಳಕ್ಕೆ ಮತ್ತೆ ಮರಳುತ್ತವೆ. ಈ ‘ಕಡಕ್​ನಾಥ್​​’ ಕೋಳಿ ಸಾಕಣೆಯಿಂದ ನಾವು ಹೆಚ್ಚು ಆದಾಯ ಗಳಿಸುತ್ತಿದ್ದೇವೆ ಎಂದು ತಿಳಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.