ETV Bharat / bharat

ಪ್ರವಾಹಪೀಡಿತ ಪ್ರದೇಶಗಳಿಗೆ 10,000 ಕೋಟಿ ರೂ. ಘೋಷಿಸಿದ 'ಮಹಾ' ಸಿಎಂ

author img

By

Published : Oct 23, 2020, 4:50 PM IST

Thackeray govt announces Rs 10,000 crore package for flood victims
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ರೈತರು ಸೇರಿದಂತೆ ಪ್ರವಾಹ ಪೀಡಿತ ಪ್ರದೇಶದ ಜನರಿಗಾಗಿ 10,000 ಕೋಟಿ ರೂ. ನೆರವು ನೀಡುತ್ತಿದ್ದು, ಈ ಹಣವನ್ನು ದೀಪಾವಳಿ ಹಬ್ಬದೊಳಗಾಗಿ ವಿತರಿಸಲಾಗುವುದು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರವಾಗಿ 10,000 ಕೋಟಿ ರೂ. ಪ್ಯಾಕೇಜ್​ ಅನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.

ಪ್ರವಾಹ ಮತ್ತು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ. ಈ ಸಂಬಂಧ ಪರಿಶೀಲನಾ ಸಭೆ ನಡೆಸಿದ್ದು, ರೈತರು ಸೇರಿದಂತೆ ಪ್ರವಾಹ ಪೀಡಿತ ಪ್ರದೇಶದ ಜನರಿಗಾಗಿ 10,000 ಕೋಟಿ ರೂ. ನೆರವು ನೀಡಲಾಗುವುದು. ಈ ನೆರವನ್ನು ದೀಪಾವಳಿ ಹಬ್ಬದೊಳಗಾಗಿ ವಿತರಿಸಲಾಗುವುದು ಎಂದು ಸಿಎಂ ಠಾಕ್ರೆ ತಿಳಿಸಿದ್ದಾರೆ.

ರೈತರಿಗೆ ಪ್ರತಿ ಹೆಕ್ಟೇರ್​​ಗೆ 6,800 ರೂ. ಸಹಾಯದ ಬದಲು, ನಾವು 10000 ರೂ. ನೀಡುತ್ತೇವೆ. ಇದೇ ಕ್ರಮವನ್ನು ಅನುಸರಿಸಲು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಈಗಾಗಲೇ 3800 ಕೋಟಿ ರೂ.ಗಳನ್ನು ಪ್ರವಾಹ ಪೀಡಿತ ಪ್ರದೇಶದ ಜನರಿಗೆ ನೀಡಿದ್ದೇವೆ ಎಂದು ಉದ್ಧವ್ ಠಾಕ್ರೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.