ETV Bharat / bharat

ಪುಲ್ವಾಮಾ ಎನ್​ಕೌಂಟರ್​: ಇಬ್ಬರು ಉಗ್ರರು ಶರಣಾಗತಿ

author img

By

Published : Jan 30, 2021, 7:29 AM IST

Lelhar Pulwama Encounter:
ಪುಲ್ವಾಮಾ ಎನ್​ಕೌಂಟರ್

ಪುಲ್ವಾಮಾದಲ್ಲಿ ಭದ್ರತಾ ಸಿಬ್ಬಂದಿಯು ಸರ್ಕಾರದಿಂದ ನೀಡುವ ಸೌಲಭ್ಯದ ಆಮಿಷವೊಡ್ಡಿ ಉಗ್ರರು ಶರಣಾಗುವಂತೆ ಮಾಡಿದ್ದಾರೆ. ಇದಕ್ಕೂ ಮುನ್ನ ಲೆಲ್ಹರಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು.

ಪುಲ್ವಾಮಾ (ಜಮ್ಮು-ಕಾಶ್ಮೀರ): ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್​ ವೇಳೆ ಇಬ್ಬರು ಸ್ಥಳೀಯ ಉಗ್ರರು, ಎಕೆ-47 ಗನ್​ನೊಂದಿಗೆ ಭದ್ರತಾ ಪಡೆಗೆ ಶರಣಾಗಿದ್ದಾರೆ.

ಪುಲ್ವಾಮಾದ ಲೆಲ್ಹರಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯು ಸರ್ಕಾರದಿಂದ ನೀಡುವ ಸೌಲಭ್ಯದ ಆಮಿಷವೊಡ್ಡಿ ಉಗ್ರರು ಶರಣಾಗುವಂತೆ ಮಾಡಿದ್ದಾರೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆರೋಗ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಲಸಿಕೆ ಹಾಕಿಸಿಕೊಂಡ ಭೂಪ!

ಶರಣಾದ ಇಬ್ಬರಲ್ಲಿ ಓರ್ವ ಉಗ್ರ ಎನ್​ಕೌಂಟರ್​ ವೇಳೆ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.