ETV Bharat / bharat

ತೆಲಂಗಾಣ ಚುನಾವಣಾ ಫಲಿತಾಂಶದ ಬಗ್ಗೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್: ಆ್ಯಪ್, ವೆಬ್‌ಸೈಟ್‌ಗಳೇ ಅಡ್ಡೆಗಳು!

author img

By ETV Bharat Karnataka Team

Published : Nov 30, 2023, 11:05 PM IST

Telangana Elections Betting: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ?, ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಯಾರು?... ಹೀಗೆ ಹಲವು ವಿಷಯಗಳ ಮೇಲೆ ಆನ್‌ಲೈನ್ ಮತ್ತು ಆಫ್‌ಲೈನ್‌ ಬೆಟ್ಟಿಂಗ್​ ನಡೆಯುತ್ತಿದೆ ಎಂದು ವರದಿಯಾಗಿದೆ.

Etv Bharat
Etv Bharat

ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆ ಅಂತ್ಯವಾಗಿದೆ. ರಾಜ್ಯಾದ್ಯಂತ 119 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.64ರಷ್ಟು ಮತದಾನವಾಗಿದೆ. ಇದರ ನಡುವೆ ಚುನಾವಣಾ ಫಲಿತಾಂಶದ ಬಗ್ಗೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್​ ನಡೆಯುತ್ತಿದೆ. ಜೊತೆಗೆ ಚುನಾವಣಾ ಕದನದಲ್ಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್ ಮುಂದುವರಿದಿದೆ.

ತೆಲಂಗಾಣದಲ್ಲಿ ಸದ್ಯ ಬಿಆರ್​ಎಸ್​ ಕಳೆದ ಎರಡು ಅವಧಿಗಳಿಂದ ಸತತವಾಗಿ ಅಧಿಕಾರದಲ್ಲಿದೆ. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ?, ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಯಾರು?, ಪ್ರಮುಖ ಪಕ್ಷಗಳ ರಾಜ್ಯ ಮಟ್ಟದ ನಾಯಕರು ಭವಿಷ್ಯವೇನು?, ಜಿಲ್ಲೆ ಮತ್ತು ಕ್ಷೇತ್ರವಾರು ಪಕ್ಷಗಳಲ್ಲಿ ಎಷ್ಟು ಗೆಲುವು ಮತ್ತು ಪ್ರಮುಖ ನಾಯಕರ ಜಯ ಹೇಗೆ?... ಹೀಗೆ ಹಲವು ವಿಷಯಗಳ ಮೇಲೆ ಆನ್‌ಲೈನ್ ಮತ್ತು ಆಫ್‌ಲೈನ್‌ ಎರಡೂರಲ್ಲಿ ಬೆಟ್ಟಿಂಗ್​ ನಡೆಸಲಾಗುತ್ತಿದೆ. ಸರಿಸುಮಾರು 500 ಕೋಟಿ ಬೆಟ್ಟಿಂಗ್ ನಡೆಯುತ್ತಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಇದನ್ನೂ ಓದಿ: Exit Poll Result: ರಾಜಸ್ಥಾನದಲ್ಲಿ ಬಿಜೆಪಿ, ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್‌, ತೆಲಂಗಾಣದಲ್ಲಿ ಬಿಆರ್​ಎಸ್​ಗೆ ಹಿನ್ನಡೆ, ಮಧ್ಯಪ್ರದೇಶದಲ್ಲಿ ನೇರ ಹಣಾಹಣಿ

ತೆಲಂಗಾಣ ಜೊತೆಗೆ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳಲ್ಲೂ ಚುನಾವಣೆ ನಡೆದಿದೆ. ಈ ಐದು ರಾಜ್ಯಗಳ ಚುನಾವಣೆಯ ಬೆಟ್ಟಿಂಗ್ ಮೌಲ್ಯ 1,000 ಕೋಟಿ ಮೀರಲಿದೆ ಎಂದು ವರದಿಯಾಗಿದೆ. ಬೇರೆ, ಬೇರೆ ದಿನಾಂಕಗಳಲ್ಲಿ ಆಯಾ ರಾಜ್ಯಗಳಲ್ಲಿ ಮತದಾನ ನಡೆದರೂ ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಇದರಿಂದ ಬೆಟ್ಟಿಂಗ್ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಒಂದು ಲಕ್ಷ ಬಾಜಿ ಕಟ್ಟಿದರೆ; 2 ಲಕ್ಷ ಬಹುಮಾನ: ಈ ಬಾರಿ ರಾಜ್ಯ ಮಟ್ಟದಲ್ಲಿ ಗೆಲ್ಲುವ ನಾಯಕರ ಜೊತೆಗೆ ಪ್ರಮುಖ ಪಕ್ಷಗಳ ಪ್ರಮುಖ ನಾಯಕರ ಮೇಲೆ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್​, ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ರೇವಂತ್ ರೆಡ್ಡಿ, ಸಚಿವರಾದ ಕೆಟಿಆರ್, ಹರೀಶ್ ರಾವ್, ಬಿಜೆಪಿ ಮುಖಂಡ ಈಟಾಳ ರಾಜೇಂದರ್ ಮುಂತಾದ ಪ್ರಮುಖ ನಾಯಕರ ಗೆಲುವು ಮತ್ತು ಬಹುಮತದ ಬಗ್ಗೆ ಪಂಟರ್‌ಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.

ಪ್ರಸ್ತುತ, ಆನ್‌ಲೈನ್‌ನಲ್ಲಿ ಕೆಲವು ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ 1 ಲಕ್ಷ ರೂ. ದರದಲ್ಲಿ ಬೆಟ್‌ಗಳು ನಡೆಯುತ್ತಿವೆ. ಕೆಲವು ಬುಕ್ಕಿಗಳು 1:10ರ ಬಗ್ಗೆ ಪ್ರಚಾರ ಮಾಡುತ್ತಿದ್ಧಾರೆ. ತೆಲಂಗಾಣ ಚುನಾವಣೆಯಲ್ಲಿ ಮುಂಬೈ, ದೆಹಲಿ ಸೇರಿದಂತೆ ಕೆಲ ರಾಜ್ಯಗಳ ಗ್ಯಾಂಗ್​ಗಳು ಸಹ ಫೀಲ್ಡಿಗಿಳಿದು ಬೆಟ್ಟಿಂಗ್ ನಡೆಸುತ್ತಿವೆ.

ಇದನ್ನೂ ಓದಿ: Exit Poll Result: ತೆಲಂಗಾಣ ಕಾಂಗ್ರೆಸ್​ನ​​ ಹುಮ್ಮಸ್ಸು ಹೆಚ್ಚಿಸಿದ ಎಕ್ಸಿಟ್ ಪೋಲ್​, ರಾಹುಲ್ ಗಾಂಧಿ​ ಕಾರ್ಯತಂತ್ರಕ್ಕೆ ಯಶಸ್ಸು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.