ETV Bharat / bharat

‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಘೋಷವಾಕ್ಯ ಹುಟ್ಟುಹಾಕಿದ ಸೇವಾಗ್ರಾಮ್ ಆಶ್ರಮ

author img

By

Published : Oct 2, 2021, 7:04 AM IST

An important focal point of India freedom struggle
ಸೇವಾಗ್ರಾಮ್ ಆಶ್ರಮ

ಮಹಾತ್ಮ ಗಾಂಧಿಯವರು ಜಮ್ನಾಲಾಲ್ ಬಜಾಜ್ ಅವರ ಕೋರಿಕೆಯ ಮೇರೆಗೆ ಪಾಲಕ್​​​ವಾಡಿಗೆ ಬಂದಾಗ ಸೇವಾಗ್ರಾಮ ಮಾರ್ಗದಲ್ಲಿರುವ ಸತ್ಯಾಗ್ರಹಿ ಆಶ್ರಮದಲ್ಲಿ ತಂಗಿದ್ದರು. 1937ರಲ್ಲಿ ಬಾಪು, ಮೀರಾ ಬೆನ್ ವಾಸವಿದ್ದ ಗುಡಿಸಲಿಗೆ ತೆರಳಿದರು. ಇದೇ ಗುಡಿಸಲೀಗ ‘ಬಾಪು ಕುಟಿ’ ಎಂದು ಕರೆಯಲಾಗುತ್ತದೆ.

ದಂಡಿ ಯಾತ್ರೆಗೂ ಮುನ್ನ ಸಬರಮತಿ ಆಶ್ರಮದಿಂದ ತೆರಳುವಾಗಲೇ ಭಾರತ ಸ್ವಾತಂತ್ರ್ಯ ಪಡೆಯುವರೆಗೂ ಆಶ್ರಮಕ್ಕೆ ಹಿಂದಿರುಗಬಾರದು ಎಂದು ಗಾಂಧೀಜಿ ನಿರ್ಧಾರ ಮಾಡಿದ್ದರು. ಆದ್ರೆ ದಂಡಿ ಯಾತ್ರೆ ಬಳಿಕ ಗಾಂಧೀಜಿಯನ್ನು ಬ್ರಿಟಿಷರು ಸರೆಮನೆಗಟ್ಟಿದ್ದರು. ಎರಡು ವರ್ಷಗಳ ಜೈಲುವಾಸದ ನಂತರ ಗಾಂಧೀಜಿ ಹೊರಬಂದಾಗ, ಅವರು ಒಂದು ಗ್ರಾಮವನ್ನು ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವನ್ನಾಗಿ ಮಾಡಲು ನಿರ್ಧರಿಸಿದರು.

ಹಲವು ಸ್ವಾತಂತ್ರ್ಯ ಹೋರಾಟಗಳಿಗೆ ನಾಂದಿ ಹಾಡಿದ್ದ ಸೇವಾಗ್ರಾಮ್ ಆಶ್ರಮ

ಮಹಾತ್ಮ ಗಾಂಧಿಯವರು ಜಮ್ನಾಲಾಲ್ ಬಜಾಜ್ ಅವರ ಕೋರಿಕೆಯ ಮೇರೆಗೆ ಪಾಲಕ್​​​ವಾಡಿಗೆ ಬಂದಾಗ ಸೇವಾಗ್ರಾಮ ಮಾರ್ಗದಲ್ಲಿರುವ ಸತ್ಯಾಗ್ರಹಿ ಆಶ್ರಮದಲ್ಲಿ ತಂಗಿದ್ದರು. ಜನವರಿ 1935 ರಲ್ಲಿ ಮಗನ್​​​ವಾಡಿಯಲ್ಲಿಯೂ ತಂಗಿದ್ದರು. ಈ ಜಾಗದಲ್ಲಿ ಅವರು 5 ದಿನಗಳ ಕಾಲ ಉಳಿದುಕೊಂಡಿದ್ದರು.

1937ರಲ್ಲಿ ಬಾಪು, ಮೀರಾ ಬೆನ್ ವಾಸವಿದ್ದ ಗುಡಿಸಲಿಗೆ ತೆರಳಿದರು. ಇದೇ ಗುಡಿಸಲೀಗ ‘ಬಾಪು ಕುಟಿ’ ಎಂದು ಕರೆಯಲಾಗುತ್ತದೆ. ಮೊದಲು ಈ ಗುಡಿಸಲು ಚಿಕ್ಕದಾಗಿತ್ತು. ಗಾಂಧೀಜಿ ಈ ಗುಡಿಸಲಲ್ಲಿ ತಂಗಲು ಮುಂದಾದ ಬಳಿಕ ಇದನ್ನು ವಿಸ್ತರಿಸಲಾಯಿತು. ಇದೇ ಗುಡಿಸಲಲ್ಲಿಯೇ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸಭೆಗಳ ರೂಪುರೇಷೆಗಳು ತಯಾರಾಗಿದ್ದವು.

ಸೇವಾಗ್ರಾಮ್​​ನಲ್ಲಿ ಪ್ರತ್ಯೇಕ ಗುಡಿಸಲಿಲ್ಲದೆ ಬಾಪು ಸಮಸ್ಯೆ ಎದುರಿಸಿದ್ದರು. ಹೀಗಾಗಿ ಬಜಾಬ್ ಬಾಪುವಿಗಾಗಿ ಪ್ರತ್ಯೇಕ ಗುಡಿಸಲು ಕಟ್ಟಿದ್ದರು. ಈಗಲೂ ಗಾಂಧೀಜಿ ಬಳಸಿದ್ದ ಹಲವಾರು ವಸ್ತುಗಳನ್ನು ಈ ಆಶ್ರಮದಲ್ಲಿ ಕಾಣಬಹುದು.

ಬಾಪು ಬಳಸಿದ್ದ ಲ್ಯಾಂಟನ್​, ಭಗವದ್ಗೀತೆ, ಬೈಬಲ್ ಮತ್ತು ಕುರಾನ್ ಕಾಣಬಹುದು. ಜೊತೆಗೆ ತೂಕದ ಕಲ್ಲುಗಳು, ನಕಲಿ ಟೂತ್​ಪಿಕ್ಸ್, ತಂಬಿಗೆ, ಪೆನ್​, ಪೆನ್ಸಿಲ್, ಮೂರು ಕೋತಿಗಳು, ಸೂಜಿ ದಾರ, ಚರಕ, ಜಪಮಣಿ, ಪ್ರಶಸ್ತಿಗಳು, ಬಾಪುವನ್ನು ಯಾವಾಗಲೂ ಸಂಪರ್ಕಿಸಲೆಂದು ಲಾರ್ಡ್ ಲಿನ್ ಲಿತ್ ಗೋ ಅವರು ಸೇವಾಗ್ರಾಮದಲ್ಲಿ ಹಾಟ್ ಲೈನ್ ಫೋನ್ ಸ್ಥಾಪಿಸಿದ್ದರು. ಈ ವಸ್ತುಗಳನ್ನು ಈಗಲೂ ರಕ್ಷಿಸಿಡಲಾಗಿದೆ. ಸೇವಾಗ್ರಾಮ್ ಆಶ್ರಮ್‌ನಲ್ಲೇ ಹುಟ್ಟಿದ್ದ ಭಾರತ ಬಿಟ್ಟು ತೊಲಗಿ ಘೋಷಣೆಯೂ ಭಾರತದಾದ್ಯಂತ ಪ್ರತಿಧ್ವನಿಸಿತ್ತು.

ಇದಾದ ಬಳಿಕವೂ ಬಾಪು ಸೇವಾಗ್ರಾಮ್ ಆಶ್ರಮಕ್ಕೆ ಆಗಮಿಸಿದ್ದರು ಎಂದು ದಾಖಲಿಸಲಾಗಿದೆ. ಆದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇಲ್ಲಿನ ಬೆಳವಣಿಗೆಗಳು ಅತ್ಯಂತ ಮಹತ್ವದ್ದಾಗಿವೆ. ಸೇವಾಗ್ರಾಮ ಆಶ್ರಮವು ಸ್ವಾತಂತ್ರ್ಯ ಹೋರಾಟದ ಪ್ರಮುಖ ಕೇಂದ್ರವಾಗಿದೆ. ಬ್ರಿಟಿಷ್ ಗುಲಾಮಗಿರಿಯಿಂದ ದೇಶದ ವಿಮೋಚನೆಯ ಮಹತ್ವದ ಅವಧಿಗೆ ಸಾಕ್ಷಿಯಾದ ಈ ಆಶ್ರಮವು ಇಂದಿಗೂ ಇಡೀ ದೇಶಕ್ಕೆ ಸ್ಫೂರ್ತಿಯ ಮೂಲವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.