ETV Bharat / bharat

ಬಸ್​ ನಿಲ್ಲಿಸಿ ವೋಟ್​ ಮಾಡಿ ಬಂದ ಡ್ರೈವರ್​.. ಚಾಲಕನ ನಡೆಗೆ ಬಹುಪರಾಕ್​

author img

By

Published : Feb 19, 2022, 4:02 PM IST

bus driver casts his vote
ಪ್ರಯಾಣಿಕರಿಗೆ ಕಾಯಲು ಹೇಳಿ ವೋಟ್​ ಮಾಡಿ ಬಂದ ಬಸ್​ ಡ್ರೈವರ್​

ತನ್ನ ಹುಟ್ಟೂರಿನ ಮಾರ್ಗವಾಗಿ ಚಲಾಯಿಸುತ್ತಿದ್ದ ಬಸ್​ ನಿಲ್ಲಿಸಿ ಚಾಲಕ ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವೋಟ್​ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಧರ್ಮಪುರಿ (ತಮಿಳುನಾಡು): ಇಂದು ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಮತದಾನದ ದಿನದಂದು ವೋಟ್​ ಮಾಡುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆದರೆ ಇಲ್ಲೊಬ್ಬ ಚಾಲಕ ತಾನು ಚಲಾಯಿಸುತ್ತಿದ್ದ ಬಸ್​ ನಿಲ್ಲಿಸಿ ಬಳಿಕ ವೋಟ್​ ಮಾಡುವ ಮೂಲಕ ಹಕ್ಕು ಚಲಾಯಿಸಿದ್ದಾರೆ.

ಪ್ರಯಾಣಿಕರಿಗೆ ಕಾಯಲು ಹೇಳಿ ವೋಟ್​ ಮಾಡಿ ಬಂದ ಬಸ್​ ಡ್ರೈವರ್​

ಖಾಸಗಿ ಬಸ್​ವೊಂದು ಧರ್ಮಪುರಿ ಜಿಲ್ಲೆಯ ಬೊಮ್ಮಿಡಿ ಗ್ರಾಮದ ಮಾರ್ಗವಾಗಿ ಪಾಲಕೋಡ್‌ನಿಂದ ಸೇಲಂಗೆ ಸಾಗುತ್ತಿತ್ತು. ಈ ಬಸ್​ನ ಚಾಲಕ ಶ್ರೀಧರ್ ತನ್ನ ಹುಟ್ಟೂರಾದ ಬೊಮ್ಮಿಡಿ ಬರುತ್ತಿದ್ದಂತೆಯೇ ಬಸ್​ ನಿಲ್ಲಿಸಿ, ಪ್ರಯಾಣಿಕರಿಗೆ 10 ನಿಮಿಷ ಕಾಯುವಂತೆ ವಿನಂತಿಸಿ ಬೊಮ್ಮಿಡಿ ಮತಗಟ್ಟೆಯಲ್ಲಿ ಮತ ಹಾಕಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆ: ನಟ ವಿಜಯ್​ ಸೇರಿ ಪ್ರಮುಖರಿಂದ ಮತದಾನ

ಮತ ಚಲಾಯಿಸಿ ಕೆಲವೇ ನಿಮಿಷಗಳಲ್ಲಿ ಚಾಲಕ ವಾಪಸಾಗಿದ್ದಾರೆ. ತಮ್ಮ ವೃತ್ತಿ ಮತ್ತು ಪ್ರಜಾಸತ್ತಾತ್ಮಕ ಕರ್ತವ್ಯ ಎರಡನ್ನೂ ಪ್ರಾಮಾಣಿಕವಾಗಿ ನಿರ್ವಹಿಸಿರುವುದಕ್ಕೆ ಶ್ರೀಧರ್ ಅವರನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ಚಪ್ಪಾಳೆ ತಟ್ಟಿ ಶ್ಲಾಘಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.