ಕರ್ನಾಟಕ

karnataka

ಅಂಡಾಶಯದ ಕ್ಯಾನ್ಸರ್​ ಅನ್ನು ಮತ್ತಷ್ಟು ಮಾರಕ ಮಾಡುತ್ತದೆ ಸ್ಥೂಲಕಾಯ

By

Published : Jul 22, 2023, 11:54 AM IST

ಸ್ತ್ರೀರೋಗದ ಕ್ಯಾನ್ಸರ್​ನಲ್ಲಿ ಮೂರನೇ ಅತಿ ಹೆಚ್ಚು ಹರಡುತ್ತಿರುವ ಕ್ಯಾನ್ಸರ್​ ಅಂಡಾಶಯದ ಕ್ಯಾನ್ಸರ್​ ಆಗಿದೆ.

Obesity increases the risk of ovarian cancer
Obesity increases the risk of ovarian cancer

ವಾಷಿಂಗ್ಟನ್​:ಬಹುತೇಕ ಮಹಿಳೆಯರಲ್ಲಿ ಅಂತಿಮ ಹಂತದಲ್ಲಿ ಅಂಡಾಶಯದ ಕ್ಯಾನ್ಸರ್​ ಪತ್ತೆಯಾಗುತ್ತದೆ. ಈ ಹಂತದಲ್ಲಿ ರೋಗ ಪತ್ತೆಯಾದ ಮೂರನೇ ಒಂದರಷ್ಟು ಮಹಿಳೆಯರು ಐದು ವರ್ಷಗಳ ಕಾಲ ಬದುಕಬಹುದು ಎಂದು ಇತ್ತೀಚಿನ ವರದಿ ತಿಳಿಸಿದೆ. ಜಾಗತಿಕವಾಗಿ ಸ್ತ್ರೀಯರನ್ನು ಕಾಡುತ್ತಿರುವ ಹಲವು ಕ್ಯಾನ್ಸರ್​ನಲ್ಲಿ ಮೂರನೇ ಅತಿ ಹೆಚ್ಚು ಹರಡುತ್ತಿರುವ ಕ್ಯಾನ್ಸರ್​ ಇದಾಗಿದೆ.

ಕೇವಲ ಅಂಡಾಶಯದ ಕ್ಯಾನ್ಸರ್​ ಒಂದರಿಂದಲೇ 2020ರ ಒಂದೇ ವರ್ಷದಲ್ಲಿ ಜಾಗತಿನಾದ್ಯಂತ 2,00,000 ಮಂದಿ ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಇಂತಹ ಅಂಡಾಶಯದ ಕ್ಯಾನ್ಸರ್​​ ಮೇಲೆ ಸ್ಥೂಲಕಾಯತೆ ಪ್ರಭಾವ ಕುರಿತು ಜರ್ನಲ್​ ಆಫ್​ ಎಕ್ಸ್​​ಪಿರಿಮೆಂಟರ್​ ಅಂಡ್​ ಕ್ಲಿನಿಕಲ್​ ಕ್ಯಾನ್ಸರ್​ ರಿಸರ್ಚ್​ನ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ನೊಟ್ರೆ ಡ್ಯಾಮ್​ ಯುನಿವರ್ಸಿಟಿ ಸಂಶೋಧಕರು ನಿಯೊಜಿನೊಮಿಕ್ಸ್​​ ಲ್ಯಾಬೊರೇಟರೀಸ್​ ಜೊತೆಗೆ ಈ ಕುರಿತು ಅಧ್ಯಯನ ನಡೆಸಿದ್ದು, ವಿಶೇಷವಾಗಿ ಅಂಡಾಯಶದ ಕ್ಯಾನ್ಸರ್​ನಲ್ಲಿ ಸ್ಥೂಲಕಾಯದ ಅಂಶದ ಪ್ರಭಾವವನ್ನು ಗಮನಿಸಿದ್ದಾರೆ.

ಹೆಚ್ಚುತ್ತಿರುವ ಅಂಡಾಶಯದ ಕ್ಯಾನ್ಸರ್​: ಸ್ಥೂಲಕಾಯವನ್ನು ಸೋಂಕಿತವಲ್ಲ ಸಾಂಕ್ರಾಮಿಕ ಎಂದು ಗುರುತಿಸಲಾಗಿದೆ. ಅಂಡಾಶಯದ ಕ್ಯಾನ್ಸರ್​ ಅಪಾಯ ಹೆಚ್ಚಿಸಿ. ಬದುಕುಳಿಯುವ ಸಾಧ್ಯತೆಯನ್ನು ಅದು ಕಡಿಮೆ ಮಾಡುತ್ತದೆ. ಎಂ ಶರೋನ್​ ಸ್ಟಾಕ್​ ನೇತೃತ್ವದ ತಂಡ ಈ ಅಧ್ಯಯನ ನಡೆಸಿದ್ದು, ಸ್ಥೂಲಕಾಯವೂ ಅಂಡಾಶಯದ ಕ್ಯಾನ್ಸರ್​ನ ಮತ್ತಷ್ಟು ಮಾರಣಾಂತಿಕ ಆಗಿಸುತ್ತದೆಯಾ ಎಂಬುದನ್ನು ಅರ್ಥೈಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಸಂಶೋಧಕರು ವಿಶ್ಲೇಷಿಸಿದಂತೆ ಅಂಡಾಯಯದ ಕ್ಯಾನ್ಸರ್​ ರೋಗಿಗಳಿಂದ ಕ್ಯಾನ್ಸರ್​ ಟ್ಯೂಮರ್​ ಟಿಶ್ಯೂವನ್ನು ವಿಶ್ಲೇಷಣೆ ಮಾಡಿದ್ದಾರೆ. ಅವರು ರೋಗಿಗಳ ಈ ಟಿಶ್ಯೂವನ್ನು ಹೆಚ್ಚಿನ ಬಾಡಿ ಮಾಸ್​ ಇಂಡೆಕ್ಸ್​ (ಬಿಎಂಐ) ಮತ್ತು ಕಡಿಮೆ ಬಿಎಂಐ ಹೊಂದಿರುವವರಿಗೆ ಹೋಲಿಕೆ ಮಾಡಿದ್ದು, ಇದರಲ್ಲಿ ಎರಡು ಪ್ರಮುಖ ವಿಭಿನ್ನತೆಗಳು ಕಂಡು ಬಂದಿದೆ.

ಬದುಕುಳಿಯುವ ಸಾಧ್ಯತೆ ಕಡಿಮೆ: 30ಕ್ಕಿಂತ ಹೆಚ್ಚಿನ ಬಿಎಂಐ ಹೊಂದಿರುವ ಕ್ಯಾನ್ಸರ್​ ರೋಗಿಗಳಲ್ಲಿ ಕ್ಯಾನ್ಸರ್​ನ ಟ್ಯೂಮರ್​ ಸುತ್ತಲಿನ ಪ್ರತಿರಕ್ಷಣಾ ಕೋಶಗಳ ಮೂಲಕ ನಿರ್ದಿಷ್ಟ ಮಾದರಿಯನ್ನು ಸಂಶೋಧಕರು ಕಂಡುಕೊಂಡರು. ಅವರು ಪ್ರತಿರಕ್ಷಣಾ ಕೋಶ ವಿಧದ ಸಂಖ್ಯೆಯಲ್ಲಿ ಬದಲಾವಣೆಯನ್ನು ಪತ್ತೆ ಮಾಡಿದ್ದು, ಅದನ್ನು ಮ್ಯಾಕ್ರೋಫೇಜಸ್ ಎಂದು ಕರೆಯಲಾಗಿದೆ. ಇದು ಸಾಮಾನ್ಯವಾಗಿ ಹೆಚ್ಚು ಅಭಿವೃದ್ಧಿ ಹೊಂದಿದ ಕ್ಯಾನ್ಸರ್ ಹಂತವಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆಯಾಗಿದೆ.

ಸ್ಥೂಲಕಾಯ ಹೊಂದಿರುವ ರೋಗಿಗಳ ಕ್ಯಾನ್ಸರ್​​ ಟ್ಯೂಮರ್​ ಸುತ್ತಲೂ ಮತ್ತಷ್ಟು ಬಿಗಿಯಾಗಿದ್ದು ಕೀಮೋಥೆರಪಿಯ ಚಿಕಿತ್ಸೆಯನ್ನು ವಿರೋಧಿಸುವ ಗೆಡ್ಡೆಗಳಿಗೆ ಸಹಾಯ ಮಾಡಲು ಫೈಬ್ರೊಸ್​ ಟಿಶ್ಯೂ ಕಂಡು ಬಂದಿದೆ. ತಂಡವೂ ಇದೇ ರೀತಿಯ ದೃಢ ಫಲಿತಾಂಶವನ್ನು ಅಧಿಕ ಫ್ಯಾಟ್​ ಹೊಂದಿದ ಅಂಡಾಯದ ಕ್ಯಾನ್ಸರ್​ ಹೊಂದಿದ ಇಲಿಗಳಲ್ಲಿಲ್ಲಿ ಪತ್ತೆ ಮಾಡಿದ್ದರು. ಸ್ಥೂಲಕಾಯತೆಯ ಹರಡುವಿಕೆಯು ಪ್ರಪಂಚದಾದ್ಯಂತ ಹೆಚ್ಚಾದಂತೆ ಉತ್ತಮ ಚಿಕಿತ್ಸೆಗಳಿಗೆ ಅಧ್ಯಯನವು ಭರವಸೆ ನೀಡುತ್ತದೆ ಎಂದು ಅಧ್ಯಯನಕಾರರು ಒತ್ತಿ ಹೇಳಿದ್ದಾರೆ.

ನಮ್ಮ ದತ್ತಾಂಶವೂ ಸ್ಥೂಲಕಾಯತೆಯು ಅಂಡಾಶಯದ ಗೆಡ್ಡೆಯ ಪ್ರಗತಿ ಮತ್ತು ಕ್ಯಾನ್ಸರ್‌ಗೆ ಚಿಕಿತ್ಸಕ ಪ್ರತಿಕ್ರಿಯೆಗಳ ಮೇಲೆ ಹೇಗೆ ಮತ್ತು ಏಕೆ ಪರಿಣಾಮ ಬೀರಬಹುದು ಎಂದು ಚಿತ್ರಣವನ್ನು ನಮ್ಮ ಅಧ್ಯಯನ ನೀಡುತ್ತದೆ.

ಇದನ್ನೂ ಓದಿ:Lung Health: ಒಮೆಗಾ 3 ಫ್ಯಾಟಿ ಆ್ಯಸಿಡ್​ನಿಂದ ಶ್ವಾಸಕೋಶದ ಆರೋಗ್ಯ ವೃದ್ಧಿ​​: ಅದು ಹೇಗೆ? ಈ ಸ್ಟೋರಿ ನೋಡಿ!!

ABOUT THE AUTHOR

...view details