ETV Bharat / health

ಎಷ್ಟೇ ಪ್ರಯತ್ನಿಸಿದರೂ ಹಲ್ಲಿಗಳು ಮನೆಯಿಂದ ಹೊರ ಹೋಗುತ್ತಿಲ್ಲವೇ?: ಈ ಟಿಪ್ಸ್​ ಫಾಲೋ ಮಾಡಿದರೆ ಓಡಿಸುವುದು ತುಂಬಾ ಸುಲಭ! - Ways To Eliminate Lizards

Natural Ways To Get Rid of Lizard: ನಿಮ್ಮ ಮನೆಯೊಳಗೆ ಹಲ್ಲಿಗಳು ಮುತ್ತಿಕೊಂಡಿವೆಯೇ? ಅವುಗಳನ್ನು ತೊಡೆದುಹಾಕಲು ನೀವು ವಿವಿಧ ವಿಧಾನಗಳನ್ನು ಪ್ರಯತ್ನಿಸಿ ವಿಫಲರಾಗಿದ್ದೀರಾ? ಒಮ್ಮೆ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಮನೆಯಲ್ಲಿ ಹಲ್ಲಿಗಳು ಕಾಣಿಸುವುದೇ ಇಲ್ಲ ಎನ್ನುತ್ತಾರೆ ತಜ್ಞರು.

atural Ways To Get Rid of Lizards  How to Get Rid of Lizards Naturally
ಎಷ್ಟೇ ಪ್ರಯತ್ನಿಸಿದರೂ ಹಲ್ಲಿಗಳು ಮನೆಯಿಂದ ಹೊರಹೋಗುತ್ತಿಲ್ಲವೇ? ಈ ಟಿಪ್ಸ್​ ಫಾಲೋ ಮಾಡಿದರೆ ಓಡಿಸುವುದು ತುಂಬಾ ಸುಲಭ! (ETV Bharat)
author img

By ETV Bharat Karnataka Team

Published : Jun 18, 2024, 10:15 AM IST

How to Get Rid of Lizards Naturally: ಯಾವುದೇ ನೇರ ಅಪಾಯವಿಲ್ಲದಿದ್ದರೂ ಸಹ ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಕಾಣಿಸಿಕೊಂಡರೆ ಅನೇಕರು ಭಯಪಡುತ್ತಾರೆ. ಅವುಗಳನ್ನು ಓಡಿಸಲು ವಿವಿಧ ರೀತಿಯ ಸ್ಪ್ರೇಗಳನ್ನು ಬಳಸಲಾಗುತ್ತದೆ. ಆದರೆ, ಇವುಗಳ ಬಳಕೆಯಿಂದ ಮನೆಯೊಳಗೆ ಆಂತರಿಕ ಮಾಲಿನ್ಯ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳು ಮತ್ತು ವೃದ್ಧರಿರುವ ಮನೆಯಲ್ಲಿ ಅವುಗಳನ್ನು ಬಳಸದಿರುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ. ಆದರೆ, ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಿದರೆ ಹಲ್ಲಿಗಳು ಮನೆಯಿಂದ ಓಡಿ ಹೋಗುತ್ತವೆ ಎಂದು ಹೇಳಲಾಗುತ್ತದೆ. ಆ ಸಲಹೆಗಳು ಯಾವುವು ಎಂದು ಇದೀಗ ತಿಳಿಯೋಣ ಬನ್ನಿ.

ಮೊಟ್ಟೆಯ ಚಿಪ್ಪು: ಮನೆಯಲ್ಲಿ ಎಗ್ ಕರಿ ಮಾಡಿದ ನಂತರ ಹೆಚ್ಚಿನವರು ಮೊಟ್ಟೆಯ ಚಿಪ್ಪನ್ನು ಡಸ್ಟ್‌ಬಿನ್‌ಗೆ ಎಸೆಯುತ್ತಾರೆ. ಆದರೆ, ಮೊಟ್ಟೆಯ ಚಿಪ್ಪನ್ನು ಮನೆಯ ಬಾಗಿಲು, ಕಿಟಕಿ, ಅಡುಗೆ ಮನೆ ಅಥವಾ ಇತರ ಸ್ಥಳಗಳಲ್ಲಿ ಇಡುವುದರಿಂದ ಹಲ್ಲಿಗಳ ಕಾಟದಿಂದ ಪಾರಾಗಬಹುದು.

ಬೆಳ್ಳುಳ್ಳಿ: ಬೆಳ್ಳುಳ್ಳಿ ಮತ್ತು ಲವಂಗದ ವಾಸನೆಯನ್ನು ಹಲ್ಲಿಗಳು ಇಷ್ಟಪಡುವುದಿಲ್ಲ. ಆದ್ದರಿಂದ ಬೆಳ್ಳುಳ್ಳಿ ಮತ್ತು ಲವಂಗವನ್ನು ಮನೆಯ ಸುತ್ತಲೂ ಇಡುವುದರಿಂದ ಹಲ್ಲಿಗಳು ದೂರ ಇರುತ್ತವೆ ಎಂದು ಹೇಳಲಾಗುತ್ತದೆ. ಹಲ್ಲಿಗಳು ವಾಸಿಸುವ ಸ್ಥಳಗಳ ಸುತ್ತಲೂ ಬೆಳ್ಳುಳ್ಳಿ ರಸವನ್ನು ಸಿಂಪಡಿಸಬಹುದು ಎಂದು ಹೇಳಲಾಗುತ್ತದೆ.

ಈರುಳ್ಳಿ: ಈರುಳ್ಳಿಯ ಘೋರ ವಾಸನೆ ಹಲ್ಲಿಗಳಿಗೂ ಇಷ್ಟವಾಗುವುದಿಲ್ಲ ಎನ್ನುತ್ತಾರೆ ತಜ್ಞರು. ಹಾಗಾಗಿ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಗೋಡೆಗಳ ಮೇಲೆ ಸ್ವಲ್ಪ ಈರುಳ್ಳಿ ರಸವನ್ನು ಸಿಂಪಡಿಸಿದರೆ ಮನೆಯಿಂದ ಪಾರಾಗುತ್ತವೆ ಎಂದು ಹೇಳಲಾಗುತ್ತದೆ.

ನ್ಯಾಫ್ತಲೀನ್ ಬಾಲ್ಸ್​: ಮನೆಯಿಂದ ಹಲ್ಲಿಗಳನ್ನು ಓಡಿಸಲು ನ್ಯಾಫ್ತಲೀನ್ ಬಾಲ್ಸ್​ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಇವುಗಳನ್ನು ಅಡುಗೆ ಮನೆಯ ಕಪಾಟುಗಳಲ್ಲಿ ಮತ್ತು ಕೆಲವೆಡೆ ತಿರುಗುವ ಜಾಗದಲ್ಲಿ ಇಟ್ಟರೆ ಉತ್ತಮ ಫಲ ನೀಡುತ್ತದೆ ಎನ್ನುತ್ತಾರೆ.

ಕಾಳುಮೆಣಸಿನ ಪುಡಿ: ಕಾಳುಮೆಣಸಿನ ಕಟುವಾದ ವಾಸನೆಯಿಂದ ಹಲ್ಲಿಗಳು ಮನೆಯಿಂದ ಹೊರಗೆ ಓಡಿಹೋಗುತ್ತವೆ. ಹಾಗಾಗಿ ಕಾಳುಮೆಣಸಿನ ಪುಡಿಯನ್ನು ಹಲ್ಲಿಗಳು ಹೆಚ್ಚಾಗಿ ಓಡಾಡುವ ಜಾಗದಲ್ಲಿ ಇಡುತ್ತಾರೆ. ಈ ಪುಡಿಯನ್ನು ನೀರಿನೊಂದಿಗೆ ಸಿಂಪಡಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಅಂತಾರೆ ತಜ್ಞರು.

2004 ರಲ್ಲಿ 'ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಸೈನ್ಸ್ ಅಂಡ್ ಹೆಲ್ತ್'ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕರಿಮೆಣಸಿನಲ್ಲಿ ಕಂಡುಬರುವ ಪೈಪರಿನ್ ಹಲ್ಲಿಗಳನ್ನು ಮನೆಯಿಂದ ಓಡಿಸಲು ಸಹಾಯ ಮಾಡುತ್ತದೆ. ಕೊಯಮತ್ತೂರಿನ ಶ್ರೀ ಕೃಷ್ಣದಾಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ಡಾ. ಸುಬ್ರಮಣ್ಯಂ ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು.

ಕರ್ಪೂರ: ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಇದ್ದಲ್ಲಿ ಅವು ತಿರುಗಾಡುವ ಜಾಗದಲ್ಲಿ ಕರ್ಪೂರದ ಪುಡಿಯನ್ನು ಎರಚಲು ಸೂಚಿಸಲಾಗುತ್ತದೆ. ಕರ್ಪೂರದ ಬಿಲ್ವಪತ್ರೆಗಳನ್ನು ಕೆಲವು ದಿನಗಳ ಕಾಲ ಅಲ್ಲೇ ಇಟ್ಟರೆ ಅವು ದೂರವಾಗುತ್ತವೆ. ಹಲ್ಲಿಗಳು ಓಡಾಡುವ ಜಾಗದಲ್ಲಿ ಲಿಂಬೆರಸ ಮತ್ತು ನಿಂಬೆ ಪುಡಿಯನ್ನು ಉದುರಿಸಬೇಕು. ಆ ವಾಸನೆ ಹಲ್ಲಿಗಳಿಗೆ ಇಷ್ಟವಾಗುವುದಿಲ್ಲ. ಕೂಡಲೇ ಮನೆಯಿಂದ ಹಲ್ಲಿಗಳು ಓಡಿ ಹೋಗುತ್ತೇವೆ ಎನ್ನುತ್ತಾರೆ ತಜ್ಞರು.

ಗೋಡೆಗಳ ಮೇಲೆ ಹಲ್ಲಿಗಳು ಜಾಸ್ತಿ ಇದ್ದರೆ ಅವುಗಳ ಮೇಲೆ ಫ್ರಿಡ್ಜ್‌ನಲ್ಲಿರುವ ತಣ್ಣೀರನ್ನು ಚಿಮುಕಿಸಿದರೆ, ಅವುಗಳು ಮನೆಯಿಂದ ಹೊರಗೆ ಹೋಗುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

ಇದನ್ನೂ ಓದಿ: ಅಡುಗೆಗೂ ಮೊದಲು ಅಕ್ಕಿ ನೆನೆಸಿಡುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? - Soaked Rice Health Benefits

ETV Bharat Logo

Copyright © 2024 Ushodaya Enterprises Pvt. Ltd., All Rights Reserved.