ETV Bharat / sukhibhava

Lung Health: ಒಮೆಗಾ 3 ಫ್ಯಾಟಿ ಆ್ಯಸಿಡ್​ನಿಂದ ಶ್ವಾಸಕೋಶದ ಆರೋಗ್ಯ ವೃದ್ಧಿ​​: ಅದು ಹೇಗೆ? ಈ ಸ್ಟೋರಿ ನೋಡಿ!!

author img

By

Published : Jul 21, 2023, 3:15 PM IST

ಒಮೆಗಾ 3 ಫ್ಯಾಟಿ ಆ್ಯಸಿಡ್​​ಗಳು ಮೀನು, ಮೀನಿನ ಎಣ್ಣೆ, ಒಣಹಣ್ಣುಗಳು ಮತ್ತು ಬೀಜ, ಸಸ್ಯ ಎಣ್ಣೆ ಮತ್ತು ಪೊರ್ಟಿಫೈಡ್​ ಆಹಾರದಲ್ಲಿ ಇರುತ್ತದೆ

Omega 3 fatty acids may boost your lung health
Omega 3 fatty acids may boost your lung health

ನ್ಯೂಯಾರ್ಕ್​: ಮೀನು ಮತ್ತು ಮೀನಿನ ಎಣ್ಣೆಯ ಪೂರಕದಲ್ಲಿ ಅಗಾಧ ಪ್ರಮಾಣದಲ್ಲಿ ಕಂಡು ಬರುವ ಒಮೆಗಾ -3 ಫ್ಯಾಟಿ ಆ್ಯಸಿಡ್​​ ಇದೀಗ ಶ್ವಾಸಕೋಶದ ಆರೋಗ್ಯ ನಿರ್ವಹಣೆಗೆ ಪ್ರಯೋಜನ ನೀಡುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ.

ಒಮೆಗಾ-3 ಫ್ಯಾಟಿ ಆ್ಯಸಿಡ್​ಗಳು ಊರಿಯೂತದ ಪ್ರಯೋಜನ ಹೊಂದಿದೆ. ಈ ಹಿಂದಿನ ಅಧ್ಯಯನದಲ್ಲೂ ಇದು ಹೃದಯದ ಆರೋಗ್ಯವೃದ್ಧಿ ಹೆಚ್ಚಿಸಿ, ಹೃದಯ ಸಮಸ್ಯೆ ಮತ್ತು ಪಾರ್ಶ್ವವಾಯು ಪ್ರಕರಣಗಳು ತಡೆಗಟ್ಟುತ್ತದೆ ಎಂದು ಅಧ್ಯಯನ ತಿಳಿಸಿದೆ. ಜೊತೆಗೆ ಕ್ಯಾನ್ಸರ್​ ಅಪಾಯವನ್ನು ಕೂಡ ಇದು ಕಡಿಮೆ ಮಾಡುತ್ತದೆ.

ಅಮೆರಿಕನ್​ ಜರ್ನಲ್​ ಆಫ್​ ರೆಸ್ಪಿರೆಟರಿ ಅಂಡ್​ ಕ್ರಿಟಿಕಲ್​ ಕೇರ್​ ಮೆಡಿಸಿನ್​ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಒಮೆಗಾ 3, ಶ್ವಾಸಕೋಶದನ ನಡುವಿನ ಸಂಬಂಧ ಕುರಿತು ಬಲವಾದ ಪುರಾವೆ ತೋರಿಸಲಾಗಿದೆ. ಒಮೆಗಾ 3 ಫ್ಯಾಟಿ ಆ್ಯಸಿಡ್​​ಗಳು ಒಣಹಣ್ಣುಗಳು ಮತ್ತು ಬೀಜ, ಸಸ್ಯ ಎಣ್ಣೆ ಮತ್ತು ಪೊರ್ಟಿಫೈಡ್​ ಆಹಾರದಲ್ಲಿ ಇರುತ್ತದೆ ಎಂಬುದನ್ನು ತೋರಿಸಿದೆ. ಇದು ಶ್ವಾಸಕೋಶನ ಕಾರ್ಯಾಚರಣೆ ಕುಗ್ಗುವುದನ್ನು ತಡೆಯಲು ಸಾಧ್ಯಮಾಡುತ್ತದೆ ಎಂದು ತೋರಿಸಲಾಗಿದೆ.

ಕ್ಯಾನ್ಸರ್​ ಮತ್ತು ಹೃದಯನಾಳ ಸಮಸ್ಯೆಗಳಲ್ಲಿ ಆಹಾರ ಪದ್ದತಿಯ ಪಾತ್ರ ಕುರಿತು ನಮಗೆಲ್ಲ ತಿಳಿದಿದೆ. ಆದರೆ, ದೀರ್ಘಾವಧಿಯ ಶ್ವಾಸಕೋಶ ಸಮಸ್ಯೆಯಲ್ಲಿನ ಆಹಾರ ಪದ್ದತಿ ಪಾತ್ರವನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಕರೆಸ್ಪಾಂಡಿಂಗ್​ ಲೇಖಕ ಪ್ಯಾಟ್ರಿಸಿಯ ಎ ಕ್ಯಾಸನೊ ತಿಳಿಸಿದ್ದಾರೆ.

ಈ ಅಧ್ಯಯನವೂ ಒಮೆಗಾ 3 ಫ್ಯಾಟಿ ಆ್ಯಸಿಡ್​​ ಆರೋಗ್ಯಯುತ ಆಹಾರ ಪದ್ಧತಿಯ ಭಾಗವಾಗಿದ್ದು, ಇದು ಶ್ವಾಸಕೋಶದ ಆರೋಗ್ಯಕ್ಕೂ ಪ್ರಮುಖ ಎಂಬುದರ ಸಾಕ್ಷಿಯನ್ನು ಅಧ್ಯಯನ ತಿಳಿಸಿದೆ ಎಂದಿದ್ದಾರೆ ಲೇಖಕರು. ರಕ್ತದಲ್ಲಿನ ಒಮೆಗಾ 3 ಫ್ಯಾಟಿ ಆ್ಯಸಿಡ್​ ಮಟ್ಟ ಮತ್ತು ಶ್ವಾಸಕೋಶ ಕಾರ್ಯಾಚರಣೆ ನಡುವಿನ ಸಂಬಂಧಗಳು ಕುರಿತು ಕಾಲಾನಂತರದಲ್ಲಿ ಅಧ್ಯಯನಕಾರರು ಎರಡು ಭಾಗದ ಅಧ್ಯಯನವಾಗಿ ಅಭಿವೃದ್ಧಿಪಡಿಸಿದ್ದಾರೆ.

ಮೊದಲ ಭಾಗದಲ್ಲಿ ಸಂಶೋಧಕರು 15, 063 ಸಾರಾಸರಿ 56 ವರ್ಷದ ಅಮೆರಿಕನ್​ರನ್ನು ಒಳಗೊಂಡ ಲಾಂಗಿಟ್ಯೂಡಿನಲ್​ ಅಧ್ಯಯನ ನಡೆಸಿದ್ದಾರೆ. ಭಾಗಿದಾರರ ಸಾಮಾನ್ಯ ಆರೋಗ್ಯದೊಂದಿಗೆ ಅಧ್ಯಯನ ಆರಂಭಿಸಲಾಗಿದೆ. ಈ ವೇಳೆ, ಅವರಿಗೆ ದೀರ್ಘವಾಧಿಕ ಶ್ವಾಸಕೋಶದ ಸಮಸ್ಯೆ ಪತ್ತೆಯಾಗಿಲ್ಲ. ಇವರನ್ನು 7ರಿಂದ 20 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ.

ಲಾಂಗಿಟ್ಯೂಡಿನಲ್ ಅಧ್ಯಯದಲ್ಲಿ ಭಾಗಿದಾರನ ರಕ್ತದಲ್ಲಿನ ಒಮೆಗಾ-3 ಫ್ಯಾಟಿ ಆ್ಯಸಿಡ್​ ಶ್ವಾಸಕೋಶದ ಸಮಸ್ಯೆಯನ್ನು ತಗ್ಗಿಸಿದೆ. ಸಂಶೋಧಕರು ಇದೇ ವೇಳೆ ಡಿಎಚ್​ಎ, ಒಮೆಗಾ 3 ಫ್ಯಾಟಿ ಆ್ಯಸಿಡ್​ ಅನ್ನು ಫ್ಯಾಟಿ ಫಿಶ್​ ಆದ ಸಲ್ಮೊನ್​, ಟ್ಯೂನಾ ಮತ್ತು ಸರ್ಡೈನ್​ನಲ್ಲಿ ಪತ್ತೆ ಮಾಡಿದ್ದಾರೆ. ಎರಡನೇ ಭಾಗದಲ್ಲಿ ಸಂಶೋಧಕರು ಯುರೋಪಿಯನ್​ನ 500000 ಭಾಗಿದಾರ ರೋಗಿಗಳ ಅನುವಂಶಿಕ ದತ್ತಾಂಶವನ್ನು ಪಡೆದಿದ್ದಾರೆ.

ರಕ್ತದಲ್ಲಿನ ಅನುವಂಶಿಕತೆಯನ್ನು ಪರೋಕ್ಷ ಮಾಪನವಾಗಿ ಒಮೆಗಾ 3 ಫ್ಯಾಟಿ ಮಟ್ಟವನ್ನು ಅಳೆಯಲು ಬಳಸಲಾಗಿದೆ. ಸಂಶೋಧಕರು ಡಿಎಚ್​ಎ ಸೇರಿದಂತೆ ಹೆಚ್ಚಿನ ಮಟ್ಟದ ಒಮೆಗಾ-3 ಫ್ಯಾಟಿ ಆ್ಯಸಿಡ್​​ಗಳು ಉತ್ತಮ ಶ್ವಾಸಕೋಶ ಕಾರ್ಯಚರಣೆಯೊಂದಿಗೆ ಸಂಬಂಧ ಹೊಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವೈರಲ್‌ ಫೀವರ್‌ ಪ್ರಕರಣಗಳು ಹೆಚ್ಚಳ; ಮುನ್ನೆಚ್ಚರಿಕೆ ಮರೆಯದಿರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.