ETV Bharat / sukhibhava

ಸಾವಿನ ಅಪಾಯ ಹೆಚ್ಚಿಸುತ್ತದೆ ಒಸಿಡಿ: ಅಧ್ಯಯನ

author img

By ETV Bharat Karnataka Team

Published : Jan 19, 2024, 2:30 PM IST

OCD may have an increased risk of death
OCD may have an increased risk of death

ಒಸಿಡಿ ಎಂಬುದು ದೀರ್ಘಕಾಲಿನ ಮಾನಸಿಕ ಸಮಸ್ಯೆಯಾಗಿದ್ದು, ಇದು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ.

ಲಂಡನ್​: ಅಬ್ಸೆಸೆಸಿವ್​ ಕಂಪಲ್ಷನ್​ ಡಿಸಾರ್ಡರ್​ (ಒಸಿಡಿ) ಎಂಬುದು ಮಾನಸಿಕ ಗೀಳಿನ ಸಮಸ್ಯೆಯಾಗಿದ್ದು, ಇದನ್ನು ಹೊಂದಿರುವ ಜನರಲ್ಲಿ ಸ್ವಾಭಾವಿಕ ಮತ್ತು ಅಸ್ವಾಭಾವಿಕ ಸಾವಿನ ಅಪಾಯ ಹೆಚ್ಚಿಸಿದೆ ಎಂದು ಅಧ್ಯಯನ ತಿಳಿಸಿದೆ.

ಒಸಿಡಿ ಎಂಬುದು ದೀರ್ಘಕಾಲಿನ ಮಾನಸಿಕ ಸಮಸ್ಯೆಯಾಗಿದ್ದು, ಶೇ 2ರಷ್ಟು ಜನರು ಇದರಿಂದ ಬಾಧಿತರಾಗಿದ್ದಾರೆ. ಈ ಸಮಸ್ಯೆ ಹೊಂದಿರುವವರಲ್ಲಿ ಬೇಡದ ವಿಚಾರಗಳು, ಚಿಂತನೆಗಳು, ಚಿತ್ರಗಳು ಅವರಲ್ಲಿ ಹೆಚ್ಚಿನ ಆತಂಕ ಹೆಚ್ಚಿಸುತ್ತದೆ. ಅಲ್ಲದೇ ಗೀಳು ಎಂದು ಕರೆಯುವ ಚಟುವಟಿಕೆಯಲ್ಲಿ ಪದೇ ಪದೇ ತೊಡಗುತ್ತಾರೆ. ಇದನ್ನು ಕಂಪಲ್ಷನ್​ ಎಂದು ಕರೆಯಲಾಗುವುದು.

ಒಸಿಡಿಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡದ, ಕಳಪೆ ಕೆಲಸ ಉದ್ದೇಶ, ಆಲ್ಕೋಹಾಲ್​ ಜೊತೆ ಸಂಬಂಧವನ್ನು ಹೊಂದಿದ್ದು, ಇದು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಬಿಎಂಜೆಯಲ್ಲಿ ಪ್ರಕಟವಾದ ಅಧ್ಯಯನ ಅನುಸಾರ ಒಸಿಡಿಯೂ ಇತರೆ ವೈದ್ಯಕೀಯ ಸಾವುಗಳಿಗಿಂತ ಹೆಚ್ಚಿನ ಸಾವಿನ ಅಪಾಯ ಹೊಂದಿದೆ. ಇದು ಶ್ವಾಸಕೋಶ ವ್ಯವಸ್ಥೆಯ ರೋಗವೂ ಶೇ 73ರಷ್ಟು ಸಾವಿನ ದರ ಹೊಂದಿದ್ದರೆ, ಮಾನಸಿಕ ಮತ್ತು ನಡುವಳಿಕೆ ಸಮಸ್ಯೆ (ಶೇ 58ರಷ್ಟು, ಎಂಡೋಕ್ರೈನ್​, ನ್ಯೂಟ್ರಿಷಿನಲ್​ ಮತ್ತು ಮೆಟಾಬಾಲಿಕ್​ ಸಮಸ್ಯೆ ಶೇ 47ರಷ್ಟು ಮತ್ತು ನರ ವ್ಯವಸ್ಥೆಯಲ್ಲಿ ಶೇ 21ರಷ್ಟು ಮತ್ತು ಚಯಪಯನದ ವ್ಯವಸ್ಥೆಯನ್ನು ಶೇ 20ರಷ್ಟು ಹೆಚ್ಚಿಸಿದೆ.

ಅಸ್ವಾಭಾವಿಕ ಕಾರಣಗಳಲ್ಲಿ, ಆತ್ಮಹತ್ಯೆಯು ಸಾವು ಹೆಚ್ಚಿನ ಅಪಾಯ ಹೊಂದಿದ್ದು, ಇದು ಸುಮಾರು ಐದು ಪಟ್ಟು ಹೆಚ್ಚಿದೆ. ಬಳಿಕ ಅಪಘಾತದಿಂದ ಶೇ 92 ರಷ್ಟು ಅಪಾಯ ಹೆಚ್ಚಿಸಿದೆ. ಸ್ವೀಡನ್​ನ ಕರೋಲಿನ್ಸ್ಕಾ ಇನ್ಸುಟಿಟ್ಯೂಟ್​​ ಸಂಶೋಧಕರು ಹೇಳುವಂತೆ, ಇದರಲ್ಲಿ ಸ್ವಾಭಾವಿಕ ಸಾವಿನ ಕಾರಣಗಳನ್ನು ತಡೆಯಬಹುದಾಗಿದ್ದು, ಇದಕ್ಕೆ ಕಣ್ಗಾವಲು, ತಡೆಗಟ್ಟುವಿಕೆ ಮತ್ತು ಆರಂಭಿಕ ಹಸ್ತಕ್ಷೇಪದ ತಂತ್ರಗಳನ್ನು ಅಳವಡಿಸಬೇಕು ಎಂದಿದ್ದಾರೆ.

ಎಲ್ಲಾ ರೀತಿಯ ಸಾವಿನ ಕಾರಣಗಳು ಪುರುಷ ಮತ್ತು ಮಹಿಳೆಯರಲ್ಲಿ ಒಂದೇ ರೀತಿ ಇದೆ. ಅದರಲ್ಲಿ ಒಸಿಡಿಯೊಂದಿಗೆ ಅಸ್ವಾಭಾವಿಕ ಸಾವಿನ ಅಪಾಯವೂ ಪುರುಷರಲ್ಲಿ ಹೆಚ್ಚಿದೆ. ಅಧ್ಯಯನದಲ್ಲಿ ಸ್ವೀಡನ್​ನ 61,378 ಒಸಿಡಿ ಹೊಂದಿರುವ ರೋಗಿಗಳ ದತ್ತಾಂಶವನ್ನು ಬಳಕೆ ಮಾಡಿದ್ದಾರೆ. ಇದರಲ್ಲಿ ಒಸಿಡಿ ಪತ್ತೆಯಾದ ಸರಾಸರಿ ವಯಸ್ಸು 27 ವರ್ಷವಾಗಿದ್ದು, ಇವರನ್ನು 8 ವರ್ಷಗಳ ಕಾಲ ಗಮನಿಸಲಾಗಿದೆ.

ಒಸಿಡಿ ಹೊಂದಿರುವ ಶೇ 82ರಷ್ಟು ಜನರು ಯಾವುದೇ ಕಾರಣದಿಂದಲೂ ಸಾವನ್ನಪ್ಪುವ ಅಪಾಯವೂ ಶೇ 82ರಷ್ಟಿದೆ. ಸ್ವಾಭಾವಿಕ ಸಾವಿಗಿಂತ ಅಸ್ವಾಭಾವಿಕ ಸಾವಿನ ಅಪಾಯವೂ ಮೂರು ಪಟ್ಟು ಹೆಚ್ಚಿದೆ. ಈ ಸಂಶೋಧನೆಯು ಅಬ್ಸರ್ವೇಷನ್ ಅಧ್ಯಯನವಾಗಿದ್ದು, ಇದರ ಕಾರಣವನ್ನು ಸ್ಥಾಪಿಸಲಾಗದು ಎಂದು ವೈದ್ಯರು ತಿಳಿಸಿದ್ದಾರೆ. ​(ಐಎಎನ್​ಎಸ್​)

ಇದನ್ನೂ ಓದಿ: ವೈದ್ಯರು ಆ್ಯಂಟಿಬಯೋಟಿಕ್ಸ್​​​ ಶಿಫಾರಸು ಮಾಡುವಾಗ ಕಾರಣ ಬರೆಯುವುದು ಕಡ್ಡಾಯ: ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.