ETV Bharat / technology

ಇನ್ಮುಂದೆ ವೆಬ್​​ಪುಟಗಳನ್ನು ಓದೋದು ಮಾತ್ರವಲ್ಲ ನೇರವಾಗಿ ಆಲಿಸಿ: ಇಲ್ಲಿದೆ ಗೂಗಲ್ ಕ್ರೋಮ್ ವೈಶಿಷ್ಟ್ಯ - Google Chrome new Features

Google Chrome 'Listen to this page' Features: ಗೂಗಲ್ ಕ್ರೋಮ್ ಬ್ರೌಸರ್‌ ಹೊಸ ಮುನ್ನುಡಿ ಬರೆಯಲು ಸನ್ನದ್ಧವಾಗಿದೆ. 'ಈ ಪುಟವನ್ನು ಆಲಿಸಿ' ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದನ್ನು ಬಳಸಿಕೊಂಡು, ಆಂಡ್ರಾಯ್ಡ್ ಬಳಕೆದಾರರು ಪಾಡ್‌ಕಾಸ್ಟ್‌ಗಳಂತಹ ವೆಬ್ ಪುಟಗಳನ್ನು ನೇರವಾಗಿ ಕೇಳಬಹುದು. ಇದರರ್ಥ ವೆಬ್ ಪುಟಗಳನ್ನು ಇನ್ನು ಮುಂದೆ ಓದುವ ಅಗತ್ಯವಿಲ್ಲ. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

google-chrome-is-introducing-listen-to-this-page-for-android
ಇನ್ಮುಂದೆ ವೆಬ್​​ಪುಟಗಳನ್ನು ಓದೋದು ಮಾತ್ರವಲ್ಲ ನೇರವಾಗಿ ಆಲಿಸಿ: ಇಲ್ಲಿದೆ ಗೂಗಲ್ ಕ್ರೋಮ್ ವೈಶಿಷ್ಟ್ಯ (ETV Bharat)
author img

By ETV Bharat Karnataka Team

Published : Jun 18, 2024, 8:45 AM IST

ಪ್ರಸಿದ್ಧ ಹಾಗೂ ಜನಪ್ರಿಯ ಸರ್ಚ್ ಎಂಜಿನ್ ದೈತ್ಯ ಗೂಗಲ್ ತನ್ನ ಕ್ರೋಮ್ ಬ್ರೌಸರ್‌ನಲ್ಲಿ (ಗೂಗಲ್ ಕ್ರೋಮ್) ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಇದು 'ಈ ಪುಟವನ್ನು ಆಲಿಸಿ' ಎಂಬ ವೈಶಿಷ್ಟ್ಯವಾಗಿದೆ. ಇದನ್ನು ವಿಶೇಷವಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಅಂತಾನೆ ತಯಾರಿಸಲಾಗಿದೆ. ವೆಬ್ ಪುಟದಲ್ಲಿನ ಪಠ್ಯವನ್ನು ಆಡಿಯೊವಾಗಿ ಕೇಳಲು ಇದನ್ನು ಬಳಸಬಹುದು. ಅಂದರೆ ಪಠ್ಯಗಳ ರೂಪದಲ್ಲಿ ವಿಷಯವನ್ನು ಅಧ್ಯಯನ ಮಾಡುವ ಅಗತ್ಯವಿಲ್ಲ. ಪ್ರಸ್ತುತ ಈ ವೈಶಿಷ್ಟ್ಯವು ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಇದನ್ನು ಶೀಘ್ರದಲ್ಲೇ ಇತರ ಬಳಕೆದಾರರಿಗೆ ಹೊರತರಲಾಗುವುದು.

12 ಭಾಷೆಗಳಲ್ಲಿ ಲಭ್ಯ: Google ತಂದಿರುವ ಈ ವಿಶೇಷ ವೈಶಿಷ್ಟ್ಯವು ಪ್ರಸ್ತುತ 12 ಭಾಷೆಗಳಲ್ಲಿ ಲಭ್ಯವಿದೆ. ಬಳಕೆದಾರರು ಹಿಂದಿ, ಬೆಂಗಾಲಿ, ಇಂಗ್ಲಿಷ್ ಜೊತೆಗೆ ಅರೇಬಿಕ್, ಚೈನೀಸ್, ಫ್ರೆಂಚ್, ಜರ್ಮನ್, ಇಂಡೋನೇಷಿಯನ್, ಜಪಾನೀಸ್, ಪೋರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಆಡಿಯೊವನ್ನು ಕೇಳಬಹುದು. ಸ್ಕ್ರೀನ್ ಲಾಕ್ ಆಗಿದ್ದರೂ ಆಯಾ ಭಾಷೆಗಳಲ್ಲಿ ಆಡಿಯೋ ಕೇಳಲು ಸಾಧ್ಯ ಇರುವಂತೆ ಈ ವೈಶಿಷ್ಟ್ಯವನ್ನು ರೂಪಿಸಲಾಗಿದೆ. ಇದಲ್ಲದೇ, ಒಂದು ವೆಬ್ ಪುಟದಲ್ಲಿ ಆಡಿಯೊವನ್ನು ಕೇಳುವಾಗ, ನಾವು ಇನ್ನೊಂದು ವೆಬ್ ಪುಟವನ್ನು ಪ್ರವೇಶಿಸಬಹುದು. ದೀರ್ಘ ಲೇಖನಗಳನ್ನು ಮತ್ತು ಕಷ್ಟಕರವಾದ ವಾಕ್ಯಗಳನ್ನು ಓದಲು ಈ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿದೆ. ಆದರೆ, ಪ್ರಸ್ತುತ ಈ ವೈಶಿಷ್ಟ್ಯವು ಎಲ್ಲಾ ವೆಬ್ ಪುಟಗಳಿಗೆ ಬೆಂಬಲಿತವಾಗಿಲ್ಲ. ಆದರೆ, ಬೆಂಬಲಿತ ಪುಟಗಳಿಗೆ ಪ್ಲೇಬ್ಯಾಕ್ ಸೌಲಭ್ಯವು ಗೋಚರಿಸುತ್ತದೆ.

ಈ ವೈಶಿಷ್ಟ್ಯವನ್ನು ನೀವು ಬಳಸಲು ಇಚ್ಚಿಸಿದಲ್ಲಿ ಬಯಸಿದ ವೆಬ್ ಪುಟವನ್ನು ತೆರೆಯಿರಿ ಮತ್ತು ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳಿರುವ ಗುರುತಿನ ಮೇಲೆ ಕರ್ಜರ್​ ಇಟ್ಟು ಒತ್ತಿರಿ. ಅಲ್ಲಿ ಕಾಣಿಸುವ 'ಲಿಸ್ಟನ್ ಟು ದಿಸ್ ಪೇಜ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಧ್ವನಿಯು ಪಾಡ್‌ಕ್ಯಾಸ್ಟ್‌ನಂತೆ ತಕ್ಷಣವೇ ಪ್ರಾರಂಭವಾಗುತ್ತದೆ. ಮ್ಯೂಸಿಕ್ ಪ್ಲೇಯರ್‌ನಂತೆ ನೀವು ಅದನ್ನು ವಿರಾಮಗೊಳಿಸಬಹುದು, ರಿವೈಂಡ್ ಮಾಡಬಹುದು ಮತ್ತು ವೇಗವಾಗಿ ಫಾರ್ವರ್ಡ್ ಮಾಡಬಹುದು ಎಂದು ಗೂಗಲ್ ಹೇಳಿಕೊಂಡಿದೆ.

ಇದಲ್ಲದೆ, ನೀವು ವೇಗವಾಗಿ ಕೇಳಲು ಬಯಸಿದರೆ, ಪ್ಲೇಬ್ಯಾಕ್ ವೇಗವನ್ನು ಸಹ ಬದಲಾಯಿಸಬಹುದು. ಇದು ರೂಬಿ, ರಿವರ್, ಫೀಲ್ಡ್ ಮತ್ತು ಮಾಸ್ ಎಂಬ ನಾಲ್ಕು ಧ್ವನಿ ಪ್ರಕಾರಗಳನ್ನು ಹೊಂದಿದೆ. ನೀವು ಇಷ್ಟಪಡುವ ಧ್ವನಿಯನ್ನ ಆಯ್ಕೆ ಮಾಡಬಹುದು ಮತ್ತು ಆರಾಮವಾಗಿ ಆಡಿಯೊವನ್ನು ಆಲಿಸಬಹುದು.

ಇದನ್ನು ಓದಿ: ಗುರಿಯ ಬೆನ್ನಟ್ಟಿ ಹೊಡೆಯುವ ನಾಗಾಸ್ತ್ರ-1 ಡ್ರೋನ್ ತಯಾರಿಸಿದ ಭಾರತ: ಏನಿದರ ವಿಶೇಷತೆ? - India Develops Nagastra Drone

ETV Bharat Logo

Copyright © 2024 Ushodaya Enterprises Pvt. Ltd., All Rights Reserved.