ಕರ್ನಾಟಕ

karnataka

ಕಾನೂನೇ ಮುಕ್ತ ನಿರ್ಣಯ ತೆಗೆದುಕೊಳ್ಳಲಿದೆ: ಶಿವಾಚಾರ್ಯ ಸ್ವಾಮೀಜಿ

By

Published : Sep 4, 2022, 1:50 PM IST

Updated : Sep 6, 2022, 11:29 AM IST

ತನಿಖೆ ಆಧಾರದ ಮೇಲೆ ನಿರ್ಣಯ ಆಗುತ್ತದೆ ಎಂದು ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vishwaradhya Shivacharya Swamy
ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿ

ರಾಯಚೂರು: ಚಿತ್ರದುರ್ಗಮುರುಘಾ ಶರಣರ ವಿರುದ್ಧ ಪೋಕ್ಸೊ ಪ್ರಕರಣ ವಿಚಾರಕ್ಕೆ ತನಿಖೆ ನಡೆಯುತ್ತಿದೆ. ಹೀಗಾಗಿ ಹೇಳಿಕೆ ನೀಡುವುದಿಲ್ಲ ಎಂದು ಕಾಶಿ ಕಿರಿಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸಾವಿರ ದೇವರ ಕಿಲ್ಲೆ‌ ಬೃಹನ್ಮಮಠದ ಶ್ರೀ ಗುರುಪಾದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳ 971ನೇ ವರ್ಷದ ಪೂರ್ವ ಸಮಾರಾಧನೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸದ್ಭಾವನಾ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ನಾವು ಈಗ ಸದ್ಭಾವನಾ ಯಾತ್ರೆಯಲ್ಲಿದ್ದೇವೆ. ಆ ಬಗ್ಗೆ ಏನೂ ಹೇಳಲ್ಲ. ಭಕ್ತರ ನಿರ್ಣಯ ಅಂತಿಮ. ಮುಂದೆ ಅವರೇನು ನಿರ್ಣಯ ತೆಗೆದುಕೊಳ್ತಾರೋ ಅದರ ಮೇಲೆ ಎಲ್ಲವೂ ಇರುತ್ತೆ. ತನಿಖೆ ಆಧಾರದ ಮೇಲೆ ನಿರ್ಣಯ ಆಗುತ್ತದೆ. ಧರ್ಮ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು. ತನಿಖೆ ಕಾನೂನಾತ್ಮಕವಾಗಿ ನಡೆಯುತ್ತಿದೆ. ಕಾನೂನೇ ಮುಕ್ತ ನಿರ್ಣಯ ತೆಗೆದುಕೊಳ್ಳಲಿದೆ. ಯಾರೂ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.

ಇದನ್ನೂ ಓದಿ:ಮುರುಘಾ ಶ್ರೀಗಳಿಗೆ ಎದೆ ನೋವು: ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು

Last Updated :Sep 6, 2022, 11:29 AM IST

ABOUT THE AUTHOR

...view details