ETV Bharat / state

ಕಲುಷಿತ ನೀರು ಕಾವೇರಿ ನದಿ ಸೇರುವ ಬಗ್ಗೆ ಮಂಡ್ಯ ಡಿಸಿಯಿಂದ ಮೈಸೂರು ಡಿಸಿಗೆ ಪತ್ರ - Cauvery River

author img

By ETV Bharat Karnataka Team

Published : May 26, 2024, 10:47 AM IST

Updated : May 26, 2024, 11:02 AM IST

ಮೈಸೂರಿನ ಕಲುಷಿತ ನೀರು ಕಾವೇರಿ ನದಿ ಸೇರುತ್ತಿರುವ ಕುರಿತು ಮಂಡ್ಯ ಡಿಸಿ ಮೈಸೂರು ಡಿಸಿಗೆ ಪತ್ರ ಬರೆದಿದ್ದಾರೆ.

ಮಂಡ್ಯ ಡಿಸಿ ಡಾ.ಕುಮಾರ
ಮಂಡ್ಯ ಡಿಸಿ ಡಾ.ಕುಮಾರ (ETV Bharat)

ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ (ETV Bharat)

ಮಂಡ್ಯ: ಮೈಸೂರು ನಗರದ ಕಲುಷಿತ ನೀರು ಕಾವೇರಿ ನದಿಯೊಡಲು ಸೇರುತ್ತಿರುವ ಕುರಿತು ಮೈಸೂರಿನ ಜಿಲ್ಲಾಧಿಕಾರಿ ಹಾಗು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಂಡ್ಯ ಡಿಸಿ ಡಾ.ಕುಮಾರ, "ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಲುಷಿತ ನೀರನ್ನು ಕಾವೇರಿ ನದಿ, ನಾಲೆಗೆ ಬಿಟ್ಟಿರುವ ಬಗ್ಗೆ ದೂರು ಬಂದಿದೆ. ಪಂಪ್‌ಹೌಸ್​​ ಮೂಲಕ ಶ್ರೀರಂಗಪಟ್ಟಣದ ಗಂಜಾಂನ ವಾರ್ಡ್​ಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಸಾರ್ವಜನಿಕರ ದೂರಿನನ್ವಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಮೈಸೂರಿನ ತ್ಯಾಜ್ಯ ನೀರು ಕಾವೇರಿ ನದಿಗೆ ಬರುತ್ತಿದೆ. ಈಗಾಗಲೇ ನಮ್ಮ ಅಧಿಕಾರಿಗಳು ಮೈಸೂರು ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ. ತ್ಯಾಜ್ಯ ನೀರು ಬಳಸಬಾರದು ಎಂದು ಸೂಚನೆ ನೀಡಲಾಗಿದೆ. ತ್ಯಾಜ್ಯ ನೀರು ಬಿಟ್ಟ ಬಳಿಕ ನಮ್ಮ ನೀರನ್ನು ಲಿಫ್ಟ್ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ತ್ಯಾಜ್ಯ ಬಿಡುವ ಸಂದರ್ಭದಲ್ಲಿ ಜಾಕ್ವೆಲ್​ ಬಳಿ ನೀರನ್ನು ಲಿಫ್ಟ್ ಮಾಡುತ್ತಿಲ್ಲ ಇದು ಸೂಕ್ತ ಅಲ್ಲ" ಎಂದು ತಿಳಿಸಿದರು.

ಇದರ ಜೊತೆಗೆ, "ಮಹಾನಗರ ಪಾಲಿಕೆಗೂ ಪತ್ರ ಬರೆಯಲಾಗಿದೆ. ಎರಡೂ ಸ್ಟ್ರೀಮ್​​ನಲ್ಲಿ ತ್ಯಾಜ್ಯ ನೀರು ಬರುತ್ತಿದೆ. ತಡೆಗೋಡೆ ನಿರ್ಮಿಸಲು ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಾವೇರಿ ನದಿಗೆ ನೀರು ಬರದಂತೆ ತಡೆಯಲು ಸೂಚನೆ ಕೊಟ್ಟಿದ್ದೇವೆ. ಒಂದೋ ಸ್ಥಳಾಂತರ ಮಾಡಬೇಕು, ಇಲ್ಲವೇ ತ್ಯಾಜ್ಯ ನೀರಿನ್ನು ಸಂಸ್ಕರಿಸಿ ಮೈಸೂರಿನವರು ಬಿಡಬೇಕು‌. ಎರಡರಲ್ಲಿ ಒಂದನ್ನು ಮಾಡಿದರೆ ಮಾತ್ರ ಇದಕ್ಕೆ ಶಾಶ್ವತ ಪರಿಹಾರವಿದೆ ಎಂದು ಡಿಸಿಗೆ ಪತ್ರ ಕೊಟ್ಟಿದ್ದೇನೆ".

"ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಲು 8.5 ಲಕ್ಷ ರೂ ಬರಿಸಿದ್ದೇವೆ. ತಾತ್ಕಾಲಿಕವಾಗಿ ಇದನ್ನು ತಡೆಗಟ್ಟಬಹುದು. ಆದರೆ ದೊಡ್ಡ ಪ್ರಮಾಣದಲ್ಲಿ ನೀರು ಬಂದರೆ ತಡೆಗೋಡೆ ತಡೆಯಲ್ಲ. ಅಲ್ಲಿರುವ ಇನ್ಟೆಕ್​ವೆಲ್ ಅ​ನ್ನು ಸ್ಥಳಾಂತರ ಮಾಡಬೇಕು. ಗಂಜಾಂ ಪ್ರದೇಶದ 6 ವಾರ್ಡ್​ಗಳಿಗೆ ಮಾತ್ರ ಕುಡಿಯುವ ನೀರಿನ ಪೂರೈಕೆಯಿದೆ. ಇನ್ಟೆಕ್​ವೆಲ್​ ಸ್ಥಳಾಂತರ ಮಾಡಿದರೆ ಮಾತ್ರ ಇದಕ್ಕೆ ಪರಿಹಾರ ಸಿಗುತ್ತದೆ. ನೀರು ಪರೀಕ್ಷಿಸಿ ಬಿಡಲು ಸೂಚನೆ ಕೊಟ್ಟಿದ್ದೇನೆ. ತ್ಯಾಜ್ಯ ನೀರು ಬಿಟ್ಟ ಸಂದರ್ಭದಲ್ಲಿ ಇನ್ಟೆಕ್​ವೆಲ್ ನಿಲ್ಲಿಸಬೇಕು. ಬಳಿಕ ಸ್ಟಾರ್ಟ್ ಮಾಡಲು ಸೂಚನೆ ನೀಡಲಾಗಿದೆ" ಎಂದು ಡಿಸಿ ತಿಳಿಸಿದರು.

ಇದನ್ನೂ ಓದಿ: ಮೈಸೂರು: ಮೇಕೆ ಮೇಯಿಸುತ್ತಿದ್ದ ಮಹಿಳೆ ಹೊತ್ತೊಯ್ದು ಕೊಂದ ಹುಲಿ - Tiger Kills Woman

Last Updated : May 26, 2024, 11:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.