ಕರ್ನಾಟಕ

karnataka

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಸ್ತೆ ಮೇಲೆ ಮಣ್ಣು ಕುಸಿತ.. ಧರೆಗುರುಳುತ್ತಿವೆ ಮರಗಳು

By

Published : Jul 6, 2022, 5:17 PM IST

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ವರುಣಾರ್ಭಟ-ಪೊನ್ನಂಪೇಟೆಯಲ್ಲಿ ಕುಸಿದ ಬಾವಿ - ಕೊಡಗು- ಮಂಗಳೂರು ರಸ್ತೆ ಮೇಲೆ ಕುಸಿದ ಮಣ್ಣು

ರಸ್ತೆ ಮೇಲೆ ಮಣ್ಣು ಕುಸಿತ
ರಸ್ತೆ ಮೇಲೆ ಮಣ್ಣು ಕುಸಿತ

ಕೊಡಗು: ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಅಲ್ಲಲ್ಲಿ ಅನಾಹುತಗಳು ಸೃಷ್ಟಿಯಾಗಿವೆ. ಮಡಿಕೇರಿ-ಮಂಗಳೂರು ರಸ್ತೆ ಮೇಲೆ ಮಣ್ಣು ಮತ್ತೆ ಕುಸಿಯುತ್ತಿದೆ. ಮಡಿಕೇರಿ ಸಮೀಪದ ಕುರ್ತೋಜಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮತ್ತೆ ಮಣ್ಣು ಕುಸಿಯುತ್ತಿದೆ.

ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಅನಾಹುತದ ಬಗ್ಗೆ ಸ್ಥಳೀಯರು ಮಾತನಾಡಿರುವುದು

ನಿನ್ನೆ ಅಷ್ಟೇ ಅದೇ ಜಾಗದಲ್ಲಿ ಎನ್​ಡಿಆರ್​ಎಫ್ ತಂಡ ಭೇಟಿ ನೀಡಿ ಉಬ್ಬಿದ ರಸ್ತೆಯನ್ನು ಜೆಸಿಬಿ ಮೂಲಕ ತೆಗೆಸಿ ರಸ್ತೆ ರಿಪೇರಿ ಮಾಡಲಾಗಿತ್ತು. ರಾತ್ರಿ ಸುರಿದ ಮಳೆಗೆ ಮತ್ತೆ ಇದೇ ಜಾಗದಲ್ಲಿ ಮಣ್ಣು ಕುಸಿಯುತ್ತಿದೆ. ಹೆಚ್ಚು ಮಣ್ಣು ಕುಸಿತವಾದ್ರೆ ರಸ್ತೆ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆಯಿದೆ.

ಮಳೆಯಿಂದ ಅನಾಹುತ ಸೃಷ್ಟಿಯಾಗಿರುವುದು

ಪೊನ್ನಂಪೇಟೆ ತಾಲೂಕಿನ ಕುರ್ಚಿ ಗ್ರಾಮದಲ್ಲಿ ಕುಡಿಯಲು ಉಪಯೋಗಿಸುತ್ತಿದ್ದ ಬಾವಿ ಭೂಮಿ ಒಳಗೆ ಕುಸಿದಿದೆ. ನಿರಂತರ ಮಳೆಗೆ ಭೂಮಿಯಲ್ಲಿ ಶೀತಾಂಶ ಹೆಚ್ಚಾಗಿ ಬಾವಿ ಕುಸಿದಿದೆ. ಅಲ್ಲಲ್ಲಿ ಮರಗಳು ರಸ್ತೆಗಳ ಮೇಲೆ ಮನೆಗಳ‌ ಮೇಲೆ ಬೀಳುತ್ತಿದ್ದು, ಅನಾಹುತ ಸಂಭವಿಸುತ್ತಿದೆ.

ಓದಿ:ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ ಆರ್ಭಟ: ಕಾಫಿನಾಡಿನಲ್ಲಿ ಶಾಲೆಗಳಿಗೆ ರಜೆ

ABOUT THE AUTHOR

...view details