ಕರ್ನಾಟಕ

karnataka

ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ ಪ್ರಿಯಾಂಕ್​ ಖರ್ಗೆ

By

Published : May 10, 2023, 12:04 PM IST

ಚಿತ್ತಾಪುರ ಮತ ಕ್ಷೇತ್ರದ ಗುಂಡಗುರ್ತಿ ಗ್ರಾಮದಲ್ಲಿ ಪ್ರಿಯಾಂಕ್​ ಖರ್ಗೆ ಮತ್ತು ಅವರ ಪತ್ನಿ ಶೃತಿ ಮತದಾನ ಮಾಡಿದ್ಧಾರೆ.

Priyank Kharge and his wife Shruti cast their votes in kalaburagi
ಬ್ರೈನ್​ ಟ್ಯೂಮರ್​ನಿಂದ ಬಳಲುತ್ತಿರುವ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ ಪ್ರಿಯಾಂಕ್​ ಖರ್ಗೆ

ಕಲಬುರಗಿ:ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್​ ಖರ್ಗೆ ತಮ್ಮ ಪತ್ನಿ ಶೃತಿ ಖರ್ಗೆ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು. ಗುಂಡಗುರ್ತಿ ಗ್ರಾಮದ ಬೂತ್ ನಂಬರ್ 26ರಲ್ಲಿ ಖರ್ಗೆ ದಂಪತಿ ತಮ್ಮ ಮತ ಹಕ್ಕು ಚಲಾಯಿಸಿದರು.

ಹಾಲಿ ಶಾಸಕರಾದ ಪ್ರಿಯಾಂಕ್​ ಖರ್ಗೆ ಅವರ ಪತ್ನಿ ಶೃತಿ ಬ್ರೇನ್ ಟ್ಯೂಮರ್​ನಿಂದ ಬಳಲುತ್ತಿದ್ದಾರೆ. ತೀವ್ರ ಅನಾರೋಗ್ಯದ ನಡುವೆಯೂ ದೆಹಲಿಯಿಂದ ಶೃತಿ ವಿಮಾನದ ಮೂಲಕ ಆಗಮಿಸಿ ಮತದಾನ ಮಾಡಿದ್ದಾರೆ. ಈ ವೇಳೆ ಇಬ್ಬರು ಪುತ್ರರು ಕೂಡ ಜೊತೆಗಿದ್ದರು.

ಅಧಿಕಾರಿ ವಿರುದ್ಧ ಆರೋಪ: ಮತ್ತೊಂದೆಡೆ, ಚಿಮನೂರ ಗ್ರಾಮದಲ್ಲಿ ಅಧಿಕಾರಿಯೊಬ್ಬರು ಬಿಜೆಪಿ ಮತ ಹಾಕುವಂತೆ ಜನರಿಗೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಿಯಾಂಕ್​ ಖರ್ಗೆ ಟ್ವೀಟ್​ ಮಾಡಿದ್ಧಾರೆ. ಇದರಿಂದ ಬೂತ್​ ನಂಬರ್​ 178ರಲ್ಲಿ ಮತದಾನ ಪ್ರಕ್ರಿಯೆ ಸ್ಥಗಿತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ರಾಜಕೀಯ ನಾಯಕರಿಂದ ಮತದಾನ; ಶೆಟ್ಟರ್​ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮಂಗಳ ಅಂಗಡಿ

ಸಂಸದ ಜಾಧವ್​ ಮತದಾನ: ಚಿಂಚೋಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಗಿ ತಾಲೂಕಿನ ಬೇಡೆಸೂರ್ (ಎಂ) ತಾಂಡಾದಲ್ಲಿ ಸಂಸದ ಡಾ.ಉಮೇಶ್ ಜಾಧವ್ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ನಂತರ ಟ್ವೀಟ್​ ಮಾಡಿರುವ ಅವರು, ನಾಡಿನ ಅಭಿವೃದ್ಧಿಗಾಗಿ ನಮ್ಮ ಹಕ್ಕು ಚಲಾಯಿಸಿದ್ದೇವೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕೋಣ ಎಂದು ಹೇಳಿದ್ದಾರೆ. ಚಿಂಚೋಳಿ ಕ್ಷೇತ್ರದಿಂದ ಪುತ್ರ ಡಾ. ಅವಿನಾಶ್ ಜಾಧವ್ ಕಣದಲ್ಲಿದ್ದಾರೆ.

ಇದನ್ನೂ ಓದಿ:'ಪ್ರಜಾಪ್ರಭುತ್ವದ ಗೆಲುವಿಗೆ ಮತ ಹಾಕಿ': ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವೋಟಿಂಗ್

ABOUT THE AUTHOR

...view details