ETV Bharat / state

'ಪ್ರಜಾಪ್ರಭುತ್ವದ ಗೆಲುವಿಗೆ ಮತ ಹಾಕಿ': ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವೋಟಿಂಗ್

author img

By

Published : May 10, 2023, 10:10 AM IST

Updated : May 10, 2023, 10:31 AM IST

ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮತದಾನ ಮಾಡಿದರು.

ಸಿಎಂ ಬೊಮ್ಮಾಯಿ ಮನವಿ
ಸಿಎಂ ಬೊಮ್ಮಾಯಿ ಮನವಿ

ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವೋಟಿಂಗ್

ಹಾವೇರಿ: "ಪ್ರಜಾಪ್ರಭುತ್ವದ ಗೆಲುವಿಗಾಗಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಿ. ನಿಮ್ಮ ಮತ ಬಹಳ ದೊಡ್ಡದು. ನಾವೆಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ಮತದಾನ ಮಾಡಿದ್ದೇವೆ. ನೀವು ಕೂಡ ಮನೆಗಳಿಂದ ಹೊರಬಂದು ನಿಮ್ಮ ಹಕ್ಕು ಚಲಾಯಿಸಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಜನರಲ್ಲಿ ಮನವಿ ಮಾಡಿದರು.

ಶಿಗ್ಗಾಂವಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 102 ರಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

"ರಾಜ್ಯದ ಕ್ಷೇಮಾಭಿವೃದ್ಧಿಗೆ ಜನರ ಮತ ಬೇಕೇ ಬೇಕು. ನಾನೊಬ್ಬ ಶಾಸಕನಾಗಿ, ಸಿಎಂ ಆಗಿ ಮತದಾನ ಮಾಡುವುದರಲ್ಲಿ ಬಹಳ ವ್ಯತ್ಯಾಸವಿಲ್ಲ. ಒಬ್ಬ ನಾಗರಿಕನಾಗಿ ನಾನು ಓಟ್​ ಮಾಡಿದ್ದೀನಿ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ ಎಂಬ ವಿಶ್ವಾಸವಿದೆ".

"ಒಂದು ಕಡೆ ಅಭಿವೃದ್ಧಿ, ಇನ್ನೊಂದು ಕಡೆ ಆಗಿಲ್ಲ ಎಂಬ ಸುಳ್ಳು, ಪೊಳ್ಳು ಆಪಾದನೆಗಳಿವೆ. ಮೈತ್ರಿ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಜನರ ಜವಾಬ್ದಾರಿ ವಹಿಸಲು ಆಗಲ್ಲ. ಈ ಹಿಂದಿನ ಮೈತ್ರಿ ಸರ್ಕಾರದ ಕಾರಣದಿಂದಾಗಿ ಬಿಜೆಪಿ ಮೇಲೆ ಹೆಚ್ಚಿನ ಹೊಣೆ ಬಿತ್ತು. ಕೊರೊನಾ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಆರ್ಥಿಕ ಪ್ರಗತಿ ಮಾಡಿದ್ದೇವೆ. ಹಲವಾರು ಹೊಸ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಸುಳ್ಳು ಆರೋಪಗಳಿಗೆ ಕಿವಿಗೊಡದೇ ಮತ ನೀಡಿ" ಎಂದು ಕೋರಿದರು.

"ಹನುಮಾನ್ ಚಾಲೀಸ್ ನಮ್ಮ ಸಂಪ್ರದಾಯ": "ಸಂಪ್ರದಾಯದಂತೆ ನಾವು ದೇವಸ್ಥಾನಕ್ಕೆ ಭೇಟಿ ನೀಡಿ, ಹನುಮಾನ್​ ಚಾಲೀಸಾ ಪಠಿಸಿದ್ದೇವೆ. ನಾನು ಯಾವುದೇ ಕೆಲಸಕ್ಕೆ ಹೋಗಬೇಕಾದರೂ, ದೇವರ ಆಶೀರ್ವಾದ ಪಡೆಯುತ್ತೇನೆ. ಅದರಂತೆ ಇಂದು ಕೂಡ ದೇವರ ಆಶೀರ್ವಾದ ಪಡೆದಿದ್ದೇನೆ‌. ಕಾಂಗ್ರೆಸ್​ನವರು ಈಗ ಹನುಮಂತನ ದೇವಸ್ಥಾನಕ್ಕೆ ಹೋಗ್ತಾ ಇರೋದು ಗೊತ್ತಾಗ್ತಾ ಇದೆ. ಕಾಂಗ್ರೆಸ್​ನವರು ಯಾವಾಗಲು ಹೇಳಿದ್ದನ್ನು ಮಾಡೋದಿಲ್ಲ. ಮಾಡೋದನ್ನ ಹೇಳೋದೂ ಇಲ್ಲ" ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ತುಮಕೂರು: ಕೊಪ್ಪ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ 300ಕ್ಕೂ ಹೆಚ್ಚು ಜನ

Last Updated : May 10, 2023, 10:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.