ಕರ್ನಾಟಕ

karnataka

ಬಿಜೆಪಿ ನೋಟು.. ಕಾಂಗ್ರೆಸ್​​ಗೆ ವೋಟು.. ಕೋವಿಡ್​​ ಸಮಯದಲ್ಲಿ ನೀಡುವ ಹಣ ಈಗ ನೀಡ್ತಾರೆ : ಡಿಕೆಶಿ

By

Published : Oct 18, 2021, 10:25 PM IST

Updated : Oct 18, 2021, 10:49 PM IST

dk-shivakumar-hanagal-byelection-campaign
ಡಿಕೆಶಿ

ಉಪಚುನಾವಣೆ ಪ್ರಚಾರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಹಣ ಪಡೆಯಿರಿ. ಆದ್ರೆ, ಕಾಂಗ್ರೆಸ್​​ಗೆ ಮತ ಹಾಕಿರಿ ಎಂದು ಜನರಿಗೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಸಿಕ್ಕ ಹಣವನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿದರು..

ಹಾವೇರಿ :ಹಾನಗಲ್ ಉಪ ಚುನಾವಣೆ ​ ಬಂದಿದೆ. ನಿನ್ನೆ ಗೋಣಿ ಚೀಲ ಬೇರೆ ಬಂದಿದೆ ಅಂತೆ. ಮಸ್ಕಿಯಲ್ಲೂ ಹಿಂಗೆ ಆಯ್ತು, ಬಿ ವೈ ವಿಜಯೇಂದ್ರ ಎರಡೆರಡು ಸಾವಿರ ಹಣ ಹಂಚಿದ್ರು. ಆದ್ರೂ ಅಲ್ಲಿನ ಮತದಾರರು ಕಾಂಗ್ರೆಸ್‌ಗೆ ಮತ ಹಾಕಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಹೇಳಿದರು.

ಬಿಜೆಪಿ ವಿರುದ್ಧ ಡಿ ಕೆ ಶಿವಕುಮಾರ್​ ವಾಗ್ದಾಳಿ ನಡೆಸಿರುವುದು..

ಜಿಲ್ಲೆಯ ಅರಳೇಶ್ವರ ಗ್ರಾಮದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ನೋಟು ತೆಗೆದುಕೊಳ್ಳಿ ಪರವಾಗಿಲ್ಲ. ಆದ್ರೆ, ವೋಟು ಮಾತ್ರ ಕಾಂಗ್ರೆಸ್​ಗೆ ಹಾಕಿ. ಅವರು ಕೊಡುವ ಹಣ ಬೇರೆಯಾರದ್ದೂ ಅಲ್ಲ. ಅದು ನಿಮ್ಮದೇ. ಕೊರೊನಾ ಸಮಯದಲ್ಲಿ ನೀಡಬೇಕಾಗಿತ್ತು, ಇವಾಗ ಅದನ್ನು ನೀಡುತ್ತಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.

ಸಿಕ್ಕ ಹಣ ನೀಡಿದ ಡಿಕೆಶಿ

ಮತ ಪ್ರಚಾರ ನಡೆಸಿ ಡಿ.ಕೆ.ಶಿವಕುಮಾರ್ ಅವರು ಹಿಂತಿರುಗುವ ವೇಳೆ ಕಾರ್ಯಕರ್ತರೊಬ್ಬರಿಗೆ 500 ರೂ. ಸಿಕ್ಕಿದೆ. ಅದನ್ನು ತಂದು ನೀಡಿದರು. ವೇದಿಕೆಯ ಮೇಲೆ ನಿಂತಿದ್ದ ಕೆಪಿಸಿಸಿ ಅಧ್ಯಕ್ಷರು​, ಯಾರದಾದ್ರೂ ಪಿಕ್​ ಪ್ಯಾಕೇಟ್​ ಆಗಿದೆಯಾ ನೋಡಿಕೊಳ್ರಪ್ಪಾ ಅಂತಾ ಮೈಕ್​ನಲ್ಲಿ ಕೂಗಿ ಹೇಳಿದರು. ಆ ಸಂದರ್ಭದಲ್ಲಿ ಹಣ ಕಳೆದುಕೊಂಡ ವ್ಯಕ್ತಿ ಅಲ್ಲಿಗೆ ಬಂದು ಹಣ ಪಡೆದ.

Last Updated :Oct 18, 2021, 10:49 PM IST

ABOUT THE AUTHOR

...view details