ETV Bharat / state

ವಿದ್ಯಾರ್ಥಿಗಳ ಗಮನಕ್ಕೆ: ಎಸ್ಎಸ್ಎಲ್​ಸಿ ಪರೀಕ್ಷೆ-2ಕ್ಕೆ ಇಂದೇ ಕಡೆಯ ದಿನ - SSLC Exam 2

author img

By ETV Bharat Karnataka Team

Published : May 16, 2024, 12:21 PM IST

Updated : May 16, 2024, 12:42 PM IST

ಎಸ್ಎಸ್ಎಲ್​ಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಇಂದೇ ಕೊನೆಯ ದಿನವಾಗಿದ್ದು, ಸಂಜೆ 5.30 ಗಂಟೆ ಒಳಗೆ ನೋಂದಾಯಿಸಿಕೊಳ್ಳಬೇಕಿದೆ.

sslc exam
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (Pic: ETV Bharat Reporter)

ಬೆಂಗಳೂರು: ಜೂನ್ 7 ರಿಂದ ಆರಂಭಗೊಳ್ಳಲಿರುವ ಎಸ್ಎಸ್ಎಲ್​ಸಿ ಪರೀಕ್ಷೆ-2ಗೆ ಹೆಸರು ನೋಂದಾಯಿಸಿಕೊಳ್ಳಲು ಇಂದೇ ಕಡೆಯ ದಿನವಾಗಿದೆ. ಗುರುವಾರ ಸಂಜೆ 5.30 ಗಂಟೆ ಒಳಗೆ ನಿಗದಿತ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಕೆ ಮಾಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಜೂನ್‌ 7 ರಿಂದ 14ರ ತನಕ ಎಸ್ಎಸ್ಎಲ್​ಸಿ ಪರೀಕ್ಷೆ-2 ನಡೆಯಲಿದೆ. 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ಹೆಸರು ನೋಂದಾಯಿಸಿಕೊಂಡು ಪರೀಕ್ಷೆಗೆ ಗೈರು ಹಾಜರಾದ, ಪರೀಕ್ಷೆ ಬರೆದರೂ ಕೆಲ ವಿಷಯ ನಾಟ್ ಕಂಪ್ಲೀಟ್ ಆದ, ಉತ್ತೀರ್ಣಗೊಂಡರೂ ಅಂಕಗಳ ಹೆಚ್ಚಳ ಮಾಡಿಕೊಳ್ಳಲು ಇಚ್ಛಿಸಿದ ಹಾಗೂ ಹಿಂದಿನ ಸಾಲಿನಲ್ಲಿ ಅನುತ್ತೀರ್ಣಗೊಂಡ ಅಭ್ಯರ್ಥಿಗಳು ಹಾಜರಾಗಬಹುದಾಗಿದೆ. ಇಂದು ಸಂಜೆ 5.30ಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಡೆಡ್ ಲೈನ್ ಆಗಿದೆ. ಹಾಗಾಗಿ, ಪರೀಕ್ಷೆ-2 ತೆಗೆದುಕೊಳ್ಳಲು ಬಯಸಿದವರು ಅಥವಾ ಈ ಬಗ್ಗೆ ಚಿಂತನೆಯಲ್ಲಿರುವವರು ಸಂಜೆಯೊಳಗೆ ಶುಲ್ಕ ಪಾವತಿಸಿ, ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮಂಡಳಿ ಸೂಚಿಸಿದೆ.

ಶಾಲಾ ವಿದ್ಯಾರ್ಥಿಗಳಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಶೇ. 75 ರಷ್ಟು ಹಾಜರಾತಿ ಕಡ್ಡಾಯವಾಗಿದೆ. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಕ್ಕೆ ನೋಂದಾಯಿಸಿಕೊಂಡರೂ ಸಹ ಹಾಜರಾತಿ ಕೊರತೆಯಿಂದಾಗಿ ರಾಜ್ಯಾದ್ಯಂತ ಅಂದಾಜು 26,692 ವಿದ್ಯಾರ್ಥಿಗಳ ನೋಂದಣಿಯನ್ನು ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿ ರದ್ದುಪಡಿಸಿರುವುದರಿಂದ ಈ ವಿದ್ಯಾರ್ಥಿಗಳು 2024ರ ಪರೀಕ್ಷೆ-1ಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಅಂತವರಿಗೆ ಪರೀಕ್ಷೆ-2ಕ್ಕೆ ಅನುಮತಿಸಲಾಗಿದ್ದು, ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.

ಎಸ್ಎಸ್‌ಎಲ್‌ಸಿ ಪರೀಕ್ಷೆ-2 ವೇಳಾಪಟ್ಟಿ:

07-06-2024 : ಪ್ರಥಮ ಭಾಷೆ - ಕನ್ನಡ

08-06-2024: ತೃತೀಯ ಭಾಷೆ - ಹಿಂದಿ

10-06-2024 : ಗಣಿತ, ಸಮಾಜಶಾಸ್ತ್ರ

12-06-2024 : ವಿಜ್ಞಾನ,ರಾಜ್ಯಶಾಸ್ತ್ರ

13-06-2024 : ದ್ವಿತೀಯ ಭಾಷೆ - ಇಂಗ್ಲಿಷ್

14-06-2024: ಸಮಾಜ ವಿಜ್ಞಾನ

ಪ್ರತಿ ವಿಷಯದ ಪರೀಕ್ಷೆಯೂ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ನಡೆಯಲಿದೆ. ಕನ್ನಡ 100 ಅಂಕಗಳಿಗೆ ಪರೀಕ್ಷೆ ಇದ್ದರೆ, ಇತರ ಎಲ್ಲಾ ವಿಷಯಗಳಿಗೂ 80 ಅಂಕಗಳಿಗೆ ಲಿಖಿತ ಪರೀಕ್ಷೆ ಇರಲಿದೆ. ಆಂತರಿಕ ಅಂಕಗಳನ್ನು ಶಾಲಾ ಹಂತದಲ್ಲಿಯೇ ಕನ್ನಡಕ್ಕೆ 25 ಹಾಗೂ ಇತರ ವಿಷಯಗಳಿಗೆ 20 ಅಂಕಗಳಿಗೆ ತಕ್ಕಂತೆ ನೀಡಲಾಗಿದ್ದು, ಅದನ್ನೇ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಎಸ್ಎಸ್ಎಲ್ಸಿ ಪರೀಕ್ಷೆ-2ರ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಕಾರ್ಯಾಗಾರಕ್ಕೆ ಸೂಚನೆ: ಇಂದಿನಿಂದ ಬ್ರಿಡ್ಜ್ ಕೋರ್ಸ್ ಆರಂಭ - SSLC Exam 2

Last Updated : May 16, 2024, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.