ಕರ್ನಾಟಕ

karnataka

ಸಿಎಂ ಇಬ್ರಾಹಿಂ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರಮೋದ್‌ ಮುತಾಲಿಕ್

By

Published : Oct 17, 2021, 3:27 PM IST

ನೇರ ಹಾಗೂ ನಿಷ್ಠುರವಾದ ಮಾತಿಗೆ ಹೆಸರಾಗಿರುವ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂರವರು ಕೆಲ ದಿನಗಳಿಂದ ಕಾಂಗ್ರೆಸ್​ ಹಾಗೂ ಸಿದ್ದರಾಮಯ್ಯನವರ ವಿರುದ್ಧ ಹೇಳಿಕೆ ನೀಡಿದ್ದು, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ..

Muthalik
ಪ್ರಮೋದ್ ಮುತಾಲಿಕ್

ಗದಗ :ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯನವರು ರಾಜಕೀಯ ಕಾರಣಕ್ಕೆ ಮಾಡಿದ್ದಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಯನ್ನು ಗದಗನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ವಿಚಿತ್ರ ವ್ಯಕ್ತಿ. ತಮ್ಮ ಸ್ವಾರ್ಥಕ್ಕಾಗಿ ಏನೇನೋ ಹೇಳುತ್ತಾರೆ. ಟಿಪ್ಪು ಜಯಂತಿ ರಾಜಕೀಯ ಕಾರಣಕ್ಕಾಗಿ ಜಾರಿಗೆ ತಂದರು. ಮುಸ್ಲಿಂ ಮತಬ್ಯಾಂಕ್​ಗಾಗಿ ಕಾಂಗ್ರೆಸ್​ ಏನ್ ಬೇಕಾದರೂ ಮಾಡುತ್ತದೆ. ಇಬ್ರಾಹಿಂ ಹೇಳಿರೋದು ಹೊಸದೇನಲ್ಲ ಎಂದರು.

ಮುಸ್ಲಿಂರಲ್ಲಿ ದರ್ಗಾ, ಸಮಾಧಿ ಪೂಜೆ ಮಾಡುವಂತ ಪದ್ಧತಿ ಇಲ್ಲ. ಟಿಪ್ಪು ಸುಲ್ತಾನ್ ಮೂರ್ತಿಗೆ ಮಾಲೆ ಹಾಕಿ ಜೈಕಾರ ಕೂಗೋ ಪದ್ಧತಿಯೂ ಇಲ್ಲ. ಮಹಮ್ಮದ್ ಪೈಗಂಬರ್ ಅಲ್ಲಾಹುನ ಬಿಟ್ಟರೆ ಬೇರೆ ದೇವರನ್ನು ನಂಬೋದಿಲ್ಲ. ಕಾಂಗ್ರೆಸ್​​ ಮುಸ್ಲಿಂ ತುಷ್ಟೀಕರಣ ಪ್ರಾರಂಭ ಮಾಡಿದ್ದು ಎಂದು ಕಿಡಿಕಾರಿದರು.

ತಾಲಿಬಾನ್​ಗೆ ಆರ್​ಎಸ್​ಎಸ್​​ ಹೋಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆರ್​​​ಎಸ್​ಎಸ್​​ ಅನ್ನು ತಾಲಿಬಾನ್​​​ಗೆ ಹೋಲಿಕೆ ಮಾಡೋದು ಮೂರ್ಖತನ. ತಾಲಿಬಾನ್​ನಲ್ಲಿ ಹಿಂಸೆಯೇ ಪ್ರಧಾನ ಆದ್ಯತೆ ಇದೆ. ಆದರೆ, ಆರ್​ಎಸ್​ಎಸ್​​ 96 ವರ್ಷ ನಿರಂತರವಾಗಿ ಯಾವುದೇ ಅಪರಾಧ ಕೃತ್ಯಗಳಿಲ್ಲದೆ ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಹೋಲಿಕೆ ಮಾಡೋದು ಮೂರ್ಖತನ. ಮುಸ್ಲಿಂ ಮತಕ್ಕಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಪಕ್ಷ, ನಾಯಕರ ವಿರುದ್ಧ ಇಬ್ರಾಹಿಂ ಮಾತನಾಡಿದ್ರೂ ಕಾಂಗ್ರೆಸ್‌ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ ಗೊತ್ತಾ?

ABOUT THE AUTHOR

...view details