ಕರ್ನಾಟಕ

karnataka

ಡ್ರಗ್ಸ್ ವಿಚಾರವನ್ನು ಕೇವಲ ಸಿನಿಮಾ ರಂಗಕ್ಕೆ ಮಾತ್ರ ಸೀಮಿತ ಮಾಡಬಾರದು : ನಟ ಚೇತನ್

By

Published : Sep 24, 2021, 10:08 PM IST

ಪ್ರಧಾನಿ ನರೇಂದ್ರ ಮೋದಿ ವಿಚಾರವಾಗಿ ಮಾತನಾಡಿ, ನಮೋ ಅವರು ಅಮೆರಿಕದ ಸರ್ಕಾರದ ಜೊತೆ ಚರ್ಚೆ ಮಾಡಿದ್ದಾರೆ. ಫೋಟೋ ತೆಗೆಸಿಕೊಂಡಿದ್ದಾರೆ. ಅಮೆರಿಕದವರನ್ನ ಹಾಡಿ ಹೊಗಳಿ ಅಟ್ಟಕ್ಕೇರಿಸಿ ನಮ್ಮನ್ನ ಗುಲಾಮರನ್ನಾಗಿ ಬಿಂಬಿಸುತ್ತಿದ್ದಾರೆ. ನಮೋ, ಪ್ರಪಂಚದಲ್ಲಿ ಅಮೆರಿಕ ಏನೆಲ್ಲ ಅನ್ಯಾಯಗಳನ್ನು ಮಾಡಿಕೊಂಡು ಬಂದಿದೆ ಎಂದು ನಾವು ನೋಡಿದ್ದೇವೆ. ಅಮೆರಿಕದವರು ಅನವಶ್ಯಕ ಯುದ್ಧ ಮಾಡಿ ಜನರನ್ನ ಸಾಯಿಸಿದ್ದಾರೆ..

ನಟ ಚೇತನ್
ನಟ ಚೇತನ್

ಬಾಗಲಕೋಟೆ :ಇಂದು ಬಾದಾಮಿ ನಗರಕ್ಕೆ ಆಗಮಿಸಿದ ಚಿತ್ರ ನಟ ಚೇತನ್ ದಯಾಭಾರತಿ ಅಮ್ಮನವರ ಆದಿಜಾಂಬವ ಆಶ್ರಮಕ್ಕೆ ಭೇಟಿ ನೀಡಿದರು. ಆಶ್ರಮ ಇರುವ ಜಾಗ ತೆರವುಗೊಳಿಸಲು ಮುಂದಾಗಿರುವ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೆಸಿಬಿಯಿಂದ ದೌರ್ಜನ್ಯ ನಡೆಸಲಾಗುತ್ತಿದೆ. ಹೀಗಾಗಿ, ಇದನ್ನು ನಿಲ್ಲಿಸಬೇಕು. ಜಿಲ್ಲಾಡಳಿತ ಆಶ್ರಮಕ್ಕೆ 3 ಗುಂಟೆ ಜಾಗ ನೀಡಬೇಕು. ವೃದ್ಧ, ಅನಾಥ ಮಹಿಳೆಯರ ಸೇವೆ ಮಾಡುತ್ತಿರುವ ದಲಿತ ಮಹಿಳೆಗೆ ಜಿಲ್ಲಾಡಳಿತ ಅನುಕೂಲತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ಈ ಬಗ್ಗೆ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಚೇತನ್​ ತಿಳಿಸಿದರು.

ದಲಿತ ಮಹಿಳೆಗೆ ಅನುಕೂಲ ಕಲ್ಪಿಪಿಸುವಂತೆ ನಟ ಚೇತನ್..

ಇದೇ ವೇಳೆ ಡ್ರಗ್ಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಚೇತನ್​, ಹೈ ಆ್ಯಂಡ್ ಡ್ರಗ್ಸ್ ಒಂದು ಸಂಸ್ಥೆ ಇದೆ ಎಂದು ಎಷ್ಟೋ ಮೂಲಗಳಿಂದ ತಿಳಿದು ಬರುತ್ತಿದೆ. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಡ್ರಗ್ಸ್ ತನ್ನ ಬಾಹು ವ್ಯಾಪಿಸಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಯೋಜನೆ ಮಾಡಬೇಕು. ಡ್ರಗ್ಸ್ ಬಗ್ಗೆ ಸರ್ಕಾರ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಇದು ಬರೀ ಸಿನಿಮಾ ರಂಗಕ್ಕೆ ಮಾತ್ರ ಸೀಮಿತ ಮಾಡಬಾರದು ಎಂದರು.

ಸಮಸ್ಯೆ ಬಗೆಹರಿಸುವ ಯಾವುದೇ ಲಕ್ಷಣ ಕಾಣಸ್ತಿಲ್ಲ. ಅದಾನಿ ಪೋರ್ಟ್​ನಲ್ಲಿ 3 ಸಾವಿರ ಕೆಜಿ ಹೆರಾಯಿನ್ ಸಿಕ್ಕಿದೆ. 21 ಸಾವಿರ ಕೋಟಿ ಡ್ರಗ್ಸ್ ಹೊರಗೆ ಬಂದಿದೆ. ಹೆರಾಯಿನ್ ಅದಾನಿ ಪೋರ್ಟ್​ನಲ್ಲಿ ಸಿಕ್ಕಿದೆ ಅಂದ್ರೆ ಅದರ ಬಗ್ಗೆ ನಾವು ಚರ್ಚೆ ಮಾಡಬೇಕು. ಸಿನಿಮಾ ರಂಗದವರನ್ನ ಟಿಆರ್​ಪಿಗೋಸ್ಕರ ಬಲಿಪಶು ಮಾಡೋದು ಸರಿಯಲ್ಲ. ಇದನ್ನ ನಾನು ಒಪ್ಪಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿಚಾರವಾಗಿ ಮಾತನಾಡಿ, ನಮೋ ಅವರು ಅಮೆರಿಕದ ಸರ್ಕಾರದ ಜೊತೆ ಚರ್ಚೆ ಮಾಡಿದ್ದಾರೆ. ಫೋಟೋ ತೆಗೆಸಿಕೊಂಡಿದ್ದಾರೆ. ಅಮೆರಿಕದವರನ್ನ ಹಾಡಿ ಹೊಗಳಿ ಅಟ್ಟಕ್ಕೇರಿಸಿ ನಮ್ಮನ್ನ ಗುಲಾಮರನ್ನಾಗಿ ಬಿಂಬಿಸುತ್ತಿದ್ದಾರೆ. ನಮೋ, ಪ್ರಪಂಚದಲ್ಲಿ ಅಮೆರಿಕ ಏನೆಲ್ಲ ಅನ್ಯಾಯಗಳನ್ನು ಮಾಡಿಕೊಂಡು ಬಂದಿದೆ ಎಂದು ನಾವು ನೋಡಿದ್ದೇವೆ. ಅಮೆರಿಕದವರು ಅನವಶ್ಯಕ ಯುದ್ಧ ಮಾಡಿ ಜನರನ್ನ ಸಾಯಿಸಿದ್ದಾರೆ ಎಂದರು.

ದೇಶದಲ್ಲಿ ಖಾಸಗೀಕರಣ ಮಾಡ್ತಿರೋದೇ ಮೋದಿ. ಇದನ್ನ ಮುಂದುವರೆಸುವ ಮನಸ್ಥಿತಿ ಮೋದಿಯವರಲ್ಲಿ ಹೆಚ್ಚಿದೆ. ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದಾರೆ. ಕೊಡಲಿ ನೋಡೋಣ. ಈಗಾಗಲೇ ಏಳು ವರ್ಷದಲ್ಲಿ 14 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ, ಉದ್ಯೋಗ ಮಾಡುವ 14 ಕೋಟಿ ಜನ ಕೆಲಸ ಕಳೆದುಕೊಂಡಿದ್ದಾರೆ ಎಂದರು.

ABOUT THE AUTHOR

...view details