ಕರ್ನಾಟಕ

karnataka

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ವಾರ್ನರ್, ಸೌಥಿ, ಅಬೀದ್ ಅಲಿ

By

Published : Dec 7, 2021, 6:49 PM IST

ಸ್ವತಂತ್ರ ICC ವೋಟಿಂಗ್ ಅಕಾಡೆಮಿ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳು ವಿಜೇತರನ್ನು ನಿರ್ಧರಿಸಲು ಮತ ಚಲಾಯಿಸಬಹುದಾಗಿದೆ. ಅದನ್ನು ಮುಂದಿನ ವಾರ ಐಸಿಸಿ ಪ್ರಕಟಿಸುತ್ತದೆ. ಭಾನುವಾರದವರೆಗೆ ಮತದಾನ ಮಾಡಲು ಅಭಿಮಾನಿಗಳಿಗೆ ಆಹ್ವಾನ ನೀಡಲಾಗಿದೆ..

ICC men's player of month
ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ದುಬೈ :ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್​ ಡೇವಿಡ್ ವಾರ್ನರ್​, ಪಾಕಿಸ್ತಾನದ ಅಬೀದ್ ಅಲಿ ಮತ್ತು ನ್ಯೂಜಿಲ್ಯಾಂಡ್​ ಬೌಲರ್​ ಟಿಮ್ ಸೌಥಿ ಮಂಗಳವಾರ ನವೆಂಬರ್​ನ ಐಸಿಸಿ​ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಎಡಗೈ ಸ್ಪಿನ್ನರ್​ಗಳಾದ ಪಾಕಿಸ್ತಾನದ ಅನಮ್ ಅಮಿನ್ ಮತ್ತು ಬಾಂಗ್ಲಾದೇಶದ ನಹಿದಾ ಅಖ್ತರ್​​ ಜೊತೆಗೆ ವೆಸ್ಟ್​ ಇಂಡೀಸ್ ಆಲ್​ರೌಂಡರ್​ ಹೇಲಿ ಮ್ಯಾಥ್ಯೂಸ್​ ನಾಮಿನೇಟ್ ಆಗಿದ್ದಾರೆ.

ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್​ ಸೇರಿದಂತೆ ನವೆಂಬರ್​ ಮಾಹೆಯಲ್ಲಿ ನಡೆದ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಈ ಆಟಗಾರರ ಹೆಸರನ್ನು ಶಾರ್ಟ್​ಲಿಸ್ಟ್​ ಮಾಡಲಾಗಿದೆ.

ಸ್ವತಂತ್ರ ICC ವೋಟಿಂಗ್ ಅಕಾಡೆಮಿ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳು ವಿಜೇತರನ್ನು ನಿರ್ಧರಿಸಲು ಮತ ಚಲಾಯಿಸಬಹುದಾಗಿದೆ. ಅದನ್ನು ಮುಂದಿನ ವಾರ ಐಸಿಸಿ ಪ್ರಕಟಿಸುತ್ತದೆ. ಭಾನುವಾರದವರೆಗೆ ಮತದಾನ ಮಾಡಲು ಅಭಿಮಾನಿಗಳಿಗೆ ಆಹ್ವಾನ ನೀಡಲಾಗಿದೆ.

ಡೇವಿಡ್​ ವಾರ್ನರ್​ ಟಿ20 ವಿಶ್ವಕಪ್​​ನ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಅವರು ಸೆಮಿಫೈನಲ್​​ನಲ್ಲಿ ಪಾಕಿಸ್ತಾನದ ವಿರುದ್ಧ 49 ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್​ನಲ್ಲಿ 53 ರನ್​ಗಳಿಸಿದ್ದರು. ನವೆಂಬರ್​​ನಲ್ಲಿ ಆಡಿದ 4 ಟಿ20 ಪಂದ್ಯಗಳಿಂದ 209 ರನ್​ಗಳಿಸಿದ್ದರು.

ಪಾಕಿಸ್ತಾನದ ಅಬೀದ್ ಅಲಿ ಬಾಂಗ್ಲಾದೇಶದ ವಿರುದ್ಧ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಭಾಗವಾದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ 133 ಮತ್ತು 91 ರನ್​ಗಳಿಸಿದ್ದರು.

ಸೌಥಿ ಭಾರತದ ವಿರುದ್ಧ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ 8 ವಿಕೆಟ್​ ಪಡೆದಿದ್ದರು. ಜೊತೆಗೆ ಟಿ20 ವಿಶ್ವಕಪ್​ನಲ್ಲಿ 7 ಮತ್ತು ಭಾರತದ ವಿರುದ್ಧದ ಟಿ20 ಸರಣಿಯಲ್ಲಿ 3 ವಿಕೆಟ್ ಪಡೆದಿದ್ದರು.

ಮಹಿಳೆಯರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವ ಬಾಂಗ್ಲಾದೇಶದ ನಹಿದಾ 4 ಏಕದಿನ ಪಂದ್ಯಗಳಿಂದ 13 ವಿಕೆಟ್, ಪಾಕ್​ನ ಅನಮ್​ 13 ಮತ್ತು ವಿಂಡೀಸ್​ನ ಮ್ಯಾಥ್ಯೂಸ್​ 141 ರನ್​​ ಮತ್ತು 9 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ:ಮೊದಲ ಆ್ಯಶಸ್​ ಟೆಸ್ಟ್​ಗೆ ಇಂಗ್ಲೆಂಡ್ ತಂಡ ಪ್ರಕಟ : ಸ್ಠೋಕ್ಸ್ ಕಮ್​ಬ್ಯಾಕ್, ಆ್ಯಂಡರ್ಸನ್​ಗೆ ವಿಶ್ರಾಂತಿ

ABOUT THE AUTHOR

...view details