ETV Bharat / sports

ಮೊದಲ ಆ್ಯಶಸ್​ ಟೆಸ್ಟ್​ಗೆ ಇಂಗ್ಲೆಂಡ್ ತಂಡ ಪ್ರಕಟ : ಸ್ಠೋಕ್ಸ್ ಕಮ್​ಬ್ಯಾಕ್, ಆ್ಯಂಡರ್ಸನ್​ಗೆ ವಿಶ್ರಾಂತಿ

author img

By

Published : Dec 7, 2021, 4:18 PM IST

2019ರ ಆ್ಯಶಸ್​ ವೇಳೆ ಆ್ಯಂಡರ್ಸನ್​ ಮೊದಲ ಪಂದ್ಯದಲ್ಲೇ ಕಣಕಾಲು ಗಾಯಕ್ಕೆ ತುತ್ತಾಗಿ ಸರಣಿಯಿಂದ ಹೊರ ಬಿದ್ದಿದ್ದರು. ಇಡೀ ಸರಣಿಯಲ್ಲಿ ಇಂಗ್ಲೆಂಡ್ ಒಬ್ಬ ಬೌಲರ್​ ಕೊರತೆಯನ್ನು ಅನುಭವಿಸಿತ್ತು. ಹಾಗಾಗಿ, ಈ ಬಾರಿ ಸ್ಟಾರ್​ ಬೌಲರ್​ ಬಗ್ಗೆ ವಿಶೇಷ ಕಾಳಜಿವಹಿಸುತ್ತಿದೆ..

Stokes included in England
ಬೆನ್​ ಸ್ಟೋಕ್ಸ್​ ಕಮ್​ಬ್ಯಾಕ್

ಬ್ರಿಸ್ಬೇನ್ : ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅನಿರ್ಧಿಷ್ಟಾವಧಿಗೆ ವಿಶ್ರಾಂತಿಯಲ್ಲಿದ್ದ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಆ್ಯಶಸ್​ ಸರಣಿ ಮೊದಲ ಪಂದ್ಯಕ್ಕೆ ಇಸಿಬಿ ಘೋಷಿಸಿರುವ 12 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆ್ಯಶಸ್​ ಟೆಸ್ಟ್​ ಸರಣಿ ಡಿಸೆಂಬರ್​ 8ರಿಂದ ಬ್ರಿಸ್ಬೇನ್​ನಲ್ಲಿ ಆರಂಭವಾಗಲಿದೆ.

ಜೂನ್​ನಲ್ಲಿ ಬೆನ್​ ಸ್ಟೋಕ್ಸ್ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್​ಗಳ ಸರಣಿ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಇದೀಗ ಆ್ಯಶಸ್‌ಗೆ ಮರಳಿದ್ದಾರೆ. ಟಾಸ್​ ವೇಳೆ ಆಡುವ 11ರ ಬಳಗದಲ್ಲಿ ಸ್ಟೋಕ್ಸ್​ರನ್ನು ಆಯ್ಕೆ ಮಾಡುವುದನ್ನ ನಾಯಕ ರೂಟ್​ ನಿರ್ಧರಿಸಲಿದ್ದಾರೆ.

ವೇಗಿ ಸಾಲ್ವಾರ್ಟ್​ ಮತ್ತು ಇಂಗ್ಲೆಂಡ್ ಪರ​ ಗರಿಷ್ಠ ವಿಕೆಟ್ ಪಡೆದಿರುವ ಜೇಮ್ಸ್​ ಆ್ಯಂಡರ್ಸನ್​ ಆಡುವ 11ರ ಬಳಗದಲ್ಲಿ ಅವಕಾಶ ಪಡೆದಿಲ್ಲ."ಜಿಮ್ಮಿ ಯಾವುದೇ ಗಾಯಕ್ಕೆ ಒಳಗಾಗಿಲ್ಲ. 6 ವಾರಗಳಲ್ಲಿ 5 ಪಂದ್ಯಗಳನ್ನಾಡಬೇಕಿದೆ. ಹಾಗಾಗಿ, ಕೆಲಸದ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಇಂಗ್ಲೆಂಡ್ ತಂಡದ ವಕ್ತಾರ ಹೇಳಿದ್ದಾರೆ.

2019ರ ಆ್ಯಶಸ್​ ವೇಳೆ ಆ್ಯಂಡರ್ಸನ್​ ಮೊದಲ ಪಂದ್ಯದಲ್ಲೇ ಕಣಕಾಲು ಗಾಯಕ್ಕೆ ತುತ್ತಾಗಿ ಸರಣಿಯಿಂದ ಹೊರ ಬಿದ್ದಿದ್ದರು. ಇಡೀ ಸರಣಿಯಲ್ಲಿ ಇಂಗ್ಲೆಂಡ್ ಒಬ್ಬ ಬೌಲರ್​ ಕೊರತೆಯನ್ನು ಅನುಭವಿಸಿತ್ತು. ಹಾಗಾಗಿ, ಈ ಬಾರಿ ಸ್ಟಾರ್​ ಬೌಲರ್​ ಬಗ್ಗೆ ವಿಶೇಷ ಕಾಳಜಿವಹಿಸುತ್ತಿದೆ.

ಮೊದಲ ಆ್ಯಶಸ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡ : ಜೋ ರೂಟ್ (ನಾಯಕ), ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಹಸೀಬ್ ಹಮೀದ್, ಜ್ಯಾಕ್ ಲೀಚ್, ಡೇವಿಡ್ ಮಲನ್, ಒಲ್ಲಿ ಪೋಪ್, ಒಲ್ಲಿ ರಾಬಿನ್ಸನ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ಇದನ್ನೂ ಓದಿ:ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.