ETV Bharat / snippets

ಬೆಂಗಳೂರು: ಜಿಟಿಟಿಸಿ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

author img

By ETV Bharat Karnataka Team

Published : May 23, 2024, 7:30 PM IST

ಜಿಟಿಟಿಸಿ
ಜಿಟಿಟಿಸಿ (ಕೃಪೆ: ಜಿಟಿಟಿಸಿ)

ಬೆಂಗಳೂರು: ಬೆಂಗಳೂರು ನಗರದ ರಾಜಾಜಿನಗರ ಇಂಡಸ್ಟ್ರಿಯಲ್‍ನಲ್ಲಿರುವ ಗವರ್ನಮೆಂಟ್ ಟೂಲ್ ರೂಂ ಮತ್ತು ಟ್ರೈನಿಂಗ್ ಸೆಂಟರ್ (ಜಿಟಿಟಿಸಿ) ನಲ್ಲಿ 2024-25ನೇ ಸಾಲಿನ ಡಿಪ್ಲೋಮಾ ಕೋರ್ಸ್‍ಗಳಾದ ಟೂಲ್ ಅಂಡ್ ಡೈ ಮೇಕಿಂಗ್, ಮೆಕಾಟ್ರಾನಿಕ್ಸ್, ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅರ್ಹ ವಿದ್ಯಾರ್ಥಿಗಳು 10ನೇ ತರಗತಿ ಪಾಸಾಗಿರಬೇಕು. ಮೇ 27 ರೊಳಗೆ ಕೆಇಎ ಜಾಲತಾಣದ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9880889998, 7406279629, 9141629575 ಹಾಗೂ 9141629580 ಗೆ ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 10ನೇ ತರಗತಿ ಪಾಸ್​ ಆಗಿದ್ರೆ ಬಿಇಎಂಎಲ್​ನಲ್ಲಿದೆ ಡ್ರೈವರ್​ ಕೆಲಸ; ಇಲ್ಲಿದೆ ಹುದ್ದೆ ಮಾಹಿತಿ - JOBS IN BEML

ETV Bharat Logo

Copyright © 2024 Ushodaya Enterprises Pvt. Ltd., All Rights Reserved.