ಕರ್ನಾಟಕ

karnataka

777 ಚಾರ್ಲಿ' ಚಿತ್ರಕ್ಕೆ ಸಿನಿ ಪ್ರಿಯರ ಜೈಕಾರ.. KGF2 ಬಳಿಕ ಕನ್ನಡದ ಸೂಪರ್ ಹಿಟ್​ ಚಿತ್ರ ಎಂದ ಪ್ರೇಕ್ಷಕ!

By

Published : Jun 10, 2022, 11:33 AM IST

ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಚಿತ್ರಕ್ಕೆ ಅತ್ಯುತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲರೂ ಜೈಕಾರ ಹಾಕಿದ್ದಾರೆ.

777 Charlie first reviews out
777 Charlie first reviews out

ಬಹುನಿರೀಕ್ಷಿತ 777 ಚಾರ್ಲಿ ಚಿತ್ರಕ್ಕೆ ಸಿನಿ ಪ್ರೇಕ್ಷಕರು ಜೈಕಾರ ಹಾಕಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾವಿರಕ್ಕೂ ಅಧಿಕ ಸ್ಕ್ರೀನ್​​​ಗಳಲ್ಲಿ ಚಾರ್ಲಿ ರಿಲೀಸ್​ ಆಗಿದ್ದು, ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬ ವರದಿಗಳು ಬರುತ್ತಿವೆ.

ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಇಂದು ಬೆಳಗ್ಗೆ ರಿಲೀಸ್​ ಆಗಿದ್ದು, ಕೆಜಿಎಫ್​​ 2 ನಂತರ ಕನ್ನಡದ ಮತ್ತೊಂದು ಸೂಪರ್​ ಹಿಟ್​ ಚಿತ್ರ ಎಂದು ಅನೇಕರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಹಿಸ್ಟರಿಯಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಲಾಗ್ತಿದೆ.

ರಕ್ಷಿತ್​ ಶೆಟ್ಟಿ ನಟನೆಯ 777 ಚಾರ್ಲಿ ಐದು ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್​ ಆಗಿದ್ದು, ಚಿತ್ರದ ಬಗ್ಗೆ ಬಹುತೇಕ ಎಲ್ಲ ವಿಮರ್ಶಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರಕ್ಕೆ ಕಿರಣ್​ರಾಜ್​ ಅವರ ನಿರ್ದೇಶನವಿದ್ದು, ರಕ್ಷಿತ್ ಶೆಟ್ಟಿ ಹಾಗೂ ಗುಪ್ತಾ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್​ ಬಿ ಶೆಟ್ಟಿ, ಬಾಬಿ ಸಿಂಹ, ಶಾರ್ವರಿ, ಗೋಪಾಲಕೃಷ್ಣ ದೇಶಪಾಂಡೆ ನಟನೆ ಮಾಡಿದ್ದಾರೆ.

ಚಿತ್ರದಲ್ಲಿ ಒಂಟಿಯಾಗಿ ಬದುಕು ಸಾಗಿಸುವ ಧರ್ಮ(ರಕ್ಷಿತ್ ಶೆಟ್ಟಿ)ನ ಜೀವನದಲ್ಲಿ ಅನಿರೀಕ್ಷತವಾಗಿ ನಾಯಿಯೊಂದು ಪ್ರವೇಶ ಮಾಡುತ್ತದೆ. ಆ ಬಳಿಕ ಆತನ ಬದುಕಿನಲ್ಲಿ ಏನೆಲ್ಲಾ ತಿರುವು, ಬದಲಾಗುತ್ತದೆ. ಇಬ್ಬರ ನಡುವಿನ ಎಮೋಷನಲ್​ ಜರ್ನಿ ಚಿತ್ರದಲ್ಲಿದೆ. ಸಿನಿಮಾ ನೋಡಿರುವ ಅನೇಕ ಪ್ರಾಣಿ-ಪ್ರಿಯರು ಕಣ್ಣೀರಿಡುತ್ತಾ ಚಿತ್ರಮಂದಿರದಿಂದ ಹೊರಬಂದಿದ್ದು, ಯಾವುದೇ ಕಾರಣಕ್ಕೂ ಚಿತ್ರ ಮಿಸ್ ಮಾಡಿಕೊಳ್ಳಬೇಡಿ ಎಂದಿದ್ದಾರೆ.

ABOUT THE AUTHOR

...view details