ETV Bharat / bharat

ಯುಪಿ - ಬಿಹಾರದಲ್ಲಿ ಅಖಿಲೇಶ್​ - ರಾಹುಲ್​, ತೇಜಸ್ವಿ - ರಾಗಾ ಜೋಡಿ ಮೋಡಿ: ಭಾರಿ ಯಶಸ್ಸು ತಂದು ಕೊಡುತ್ತಂತೆ ಇಂಡಿ ವಿಚಾರಧಾರೆ? - Bonhomie Push INDIA Bloc

author img

By ETV Bharat Karnataka Team

Published : May 30, 2024, 6:51 PM IST

ಉತ್ತರಪ್ರದೇಶ, ಬಿಹಾರದಂತ ರಾಜ್ಯಗಳಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಭಾರಿ ಕಾವು ಪಡೆದುಕೊಂಡಿತ್ತು. ಇಂಡಿಯಾ ಮೈತ್ರಿಕೂಟ ಈ ಬಾರಿ ಸಂವಿಧಾನ ತಿದ್ದುಪಡಿ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ರಾಷ್ಟ್ರೀಯ ಚರ್ಚೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಅದರ ನಾಯಕರುಗಳು ಹೇಳಿದ್ದಾರೆ.

Push INDIA Bloc Prospects in up, Bihar'
ಭಾರಿ ಯಶಸ್ಸು ತಂದು ಕೊಡುತ್ತಂತೆ ಇಂಡಿ ವಿಚಾರಧಾರೆ? (ETV Bharat)

ನವದೆಹಲಿ: ನಿರುದ್ಯೋಗ ಮತ್ತು ಬೆಲೆ ಏರಿಕೆ, ಸಂವಿಧಾನದ ಮೇಲಿನ ಬೆದರಿಕೆ ವಿಷಯಗಳು ಈ ಬಾರಿ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ವಿಷಯಗಳಾಗಿವೆ ಎಂದು ಇಂಡಿ ಒಕ್ಕೂಟದ ನಾಯಕರು ಪ್ರತಿಪಾದಿಸಿದ್ದಾರೆ.

ಸಂವಿಧಾನ ತಿದ್ದುಪಡಿ ವಿಚಾರ ಈ ಬಾರಿ ಸದ್ದು ಮಾಡಿತು: "ಮೊದಲ ಬಾರಿಗೆ, ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಸಂವಿಧಾನಕ್ಕೆ ಬೆದರಿಕೆ ವಿಚಾರವಾಗಿ, ರಾಷ್ಟ್ರೀಯ ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಯಿತು. ಕೇಂದ್ರ ಸರ್ಕಾರದಿಂದ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ, ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿ ವಿವಿಧ ಪ್ರತಿಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳನ್ನು ಉರುಳಿಸುವ ಕೆಲಸಗಳು ಪ್ರಾರಂಭವಾದವು. ದೊಡ್ಡ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು 400 ಸ್ಥಾನಗಳು ಬೇಕು ಎಂದು ಬಿಜೆಪಿ ನಾಯಕರು ಹೇಳಿಕೆ ನೀಡತೊಡಗಿದರು. ಸಾಮಾನ್ಯವಾಗಿ, ಸಂವಿಧಾನವು ಸಾರ್ವಜನಿಕವಾಗಿ ಝೇಂಕರಿಸುವ ಪದವಾಗುವುದಿಲ್ಲ, ಆದರೆ ಈ ಬಾರಿ ಈ ಪದ ಸದ್ದು ಮಾಡಿದೆ. ಇಂಡಿ ಒಕ್ಕೂಟ ಕೇಂದ್ರದ ಹುನ್ನಾರ ಮತ್ತು ಸಂವಿಧಾನ ಬದಲಾವಣೆ ವಿಷಯವನ್ನು ಚುನಾವಣಾ ವಿಷಯವಾಗಿಸುವಲ್ಲಿ ಸಕ್ಸಸ್​ ಆಗಿದೆ, ಪರಿಣಾಮ ಸಾಮಾನ್ಯ ಜನರೂ ಸಹ ಈ ಬಗ್ಗೆ ಅರಿತುಕೊಳ್ಳಲು ಸಹಾಯವಾಯಿತು, ಬಿಜೆಪಿಯ ದುರಹಂಕಾರದ ಬಗ್ಗೆ ಜನರು ಕೋಪಗೊಂಡಿದ್ದಾರೆ ”ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಖಾಯಂ ಆಹ್ವಾನಿತ ಗಿರೀಶ್ ಚೋಡಂಕರ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ನಿರುದ್ಯೋಗ ಸಮಸ್ಯೆ ಬಗ್ಗೆ ಇಂಡಿಯಾ ಒಕ್ಕೂಟ ಜನರ ವಿಷಯವಾಗಿಸಿದೆ; "ಇನ್ನು ಈ ಬಾರಿ ಪ್ರತಿಪಕ್ಷಗಳು ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆ, ಅಗತ್ಯ ವಸ್ತುಗಳ ಹೆಚ್ಚಿನ ಬೆಲೆ ಏರಿಕೆ ಬಗ್ಗೆ ಗಮನ ಸೆಳೆದವು. ಈ ವಿಚಾರಗಳು ರಾಹುಲ್ ಗಾಂಧಿ ಅವರ ರಾಷ್ಟ್ರವ್ಯಾಪಿ ಯಾತ್ರೆಗಳಿಂದ ಹುಟ್ಟಿಕೊಂಡವು ಮತ್ತು ನಂತರ ಇದೇ ವಿಚಾರಗಳನ್ನು ನಮ್ಮ ಪ್ರಣಾಳಿಕೆಯ ಪ್ರಮುಖ ಭಾಗವಾಗಿ ಮಾಡಿಕೊಳ್ಳಲಾಯಿತು. ವಾಸ್ತವವಾಗಿ, ನಾವು ನಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಟೀಕೆಗೆ ಒಳಗಾಯಿತು. ಕಾಂಗ್ರೆಸ್​ ಪ್ರಣಾಳಿಕೆ ಮುಸ್ಲಿಂ ಲೀಗ್‌ನ ಚಹರೆಯನ್ನು ಹೊಂದಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದರು. ಈ ಟೀಕೆಗಳು ಪ್ರಧಾನಿ ಮಂತ್ರಿಯ ಆತಂಕವನ್ನು ತೋರಿಸಿದವು, ಪ್ರಧಾನಿ ನಮ್ಮನ್ನು ಕೆರಳಿಸಲು ಯತ್ನಿಸಿದರು, ಆದರೆ ನಾವು ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳತ್ತ ಗಮನ ಹರಿಸಿದ್ದೇವೆ‘‘ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ ವರಿಷ್ಠ ನೇತಾರ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವಿನ ಬಾಂಧವ್ಯ ಹಾಗೂ ಬಿಹಾರದಲ್ಲಿ ರಾಹುಲ್ ಗಾಂಧಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನಡುವಿನ ಹೊಂದಾಣಿಕೆ ಎರಡೂ ರಾಜ್ಯಗಳಲ್ಲಿ ಇಂಡಿ ಮೈತ್ರಿಕೂಟ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಈ ಹೊಂದಾಣಿಗೆ ಇಂಡಿಯಾ ಕೂಟಕ್ಕೆ ಬೂಸ್ಟ್​ ನೀಡಿದೆ ಎಂದು ಮೈತ್ರಿ ಒಳಗಿನವರು ಹೇಳಿದ್ದಾರೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಪ್ರಸ್ತುತ ಬಿಜೆಪಿಯು 62 ಸ್ಥಾನಗಳನ್ನು ಹೊಂದಿದ್ದರೆ, ಬಿಹಾರದ 40 ಸಂಸದೀಯ ಸ್ಥಾನಗಳಲ್ಲಿ 39 ಸ್ಥಾನಗಳನ್ನು ಹೊಂದಿದೆ.

ನಾಯಕರ ನಡುವಣ ಹೊಂದಾಣಿಕೆ ಮೈತ್ರಿಗಳಿಗೆ ಲಾಭ?: “ಖಂಡಿತವಾಗಿಯೂ, ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ನಡುವಿನ ಬಾಂಧವ್ಯ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅಖಿಲೇಶ್ ಅವರ ಪತ್ನಿ ಡಿಂಪಲ್ ಯಾದವ್ ನಡುವಿನ ಸಹಕಾರ ರಾಜ್ಯದಲ್ಲಿ ನಮ್ಮ ಪ್ರಚಾರದ ಪ್ರಮುಖ ಅಂಶವಾಗಿದೆ. ಅವರ ವೈಯಕ್ತಿಕ ಮನವಿಯ ಜೊತೆಗೆ, ನಾವು ಈ ಬಾರಿ ಚುನಾವಣೆಯಲ್ಲಿ ಪ್ರಸ್ತಾಪಿಸಿದ ವಿಷಯಗಳು ಮೈತ್ರಿಯನ್ನು ಬೆಂಬಲಿಸಲು ಮತದಾರರನ್ನು ಸಜ್ಜುಗೊಳಿಸಿವೆ ಎಂದು ಯುಪಿ ಉಸ್ತುವಾರಿ ಎಐಸಿಸಿ ಅವಿನಾಶ್ ಪಾಂಡೆ ಈಟಿವಿ ಭಾರತ್‌ ಜತೆ ಮಾತನಾಡುತ್ತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಹುಲ್-ಅಖಿಲೇಶ್ ಇಬ್ಬರೂ ಪ್ರಧಾನಿ ಕ್ಷೇತ್ರ ವಾರಣಾಸಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಪ್ರಿಯಾಂಕಾ-ಡಿಂಪಲ್ ಜೋಡಿ ವಾರಾಣಸಿಯಲ್ಲಿ ರೋಡ್‌ಶೋ ಮಾಡಿದ್ದು, ಇದು ಹೆಚ್ಚಿನ ಸಂಖ್ಯೆಯ ಯುವಕರು, ಮಹಿಳೆಯರು ಮತ್ತು ರೈತರನ್ನು ಆಕರ್ಷಿಸಿದೆ ಎಂದು ಪಾಂಡೆ ಹೇಳಿದ್ದಾರೆ.

ಬಿಹಾರದ ಕಾಂಗ್ರೆಸ್ ಮುಖ್ಯಸ್ಥ ಅಖಿಲೇಶ್ ಪ್ರಸಾದ್ ಸಿಂಗ್ ಮಾತನಾಡಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಈ ಬಾರಿ ಚುನಾವಣಾ ಪ್ರಚಾರದಲ್ಲಿ ನೀಡಿದ ಹೇಳಿಕೆಯಿಂದ ಇಂಡಿಯಾ ಮೈತ್ರಿಕೂಟ, 40 ರಲ್ಲಿ 30ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದಿದ್ದಾರೆ.

ಇದನ್ನು ಓದಿ: ಕೊನೆಯ ಹಂತದ ಲೋಕಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ಪ್ರಧಾನಿ ಮೋದಿ ಸೇರಿ ಅನೇಕರು ಕಣದಲ್ಲಿ - Final round of voting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.