ಕರ್ನಾಟಕ

karnataka

ದಾವಣಗೆರೆಯಲ್ಲಿ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ಹೇಗಿತ್ತು ಗೊತ್ತೇ?

By

Published : Oct 17, 2021, 10:56 AM IST

Updated : Oct 17, 2021, 12:42 PM IST

ಜಿಲ್ಲೆಯ ಕುಂದೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವ ಆರ್.ಅಶೋಕ್ ನಿನ್ನೆ ರಾತ್ರಿಯೇ ಗ್ರಾಮಸ್ಥರ ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಭಜನೆಯಲ್ಲಿ ಭಾಗಿಯಾದರು. ಇಂದು ಸಚಿವರು ತಮ್ಮ ಗ್ರಾಮ ವಾಸ್ತವ್ಯ ಮುಗಿಸಲಿದ್ದಾರೆ.

Minister R Ashok's grama vastavya
ಸಚಿವ ಆರ್. ಆಶೋಕ್ ಅವರ ಗ್ರಾಮ ವಾಸ್ತವ್ಯ

ದಾವಣಗೆರೆ:ರಾಜ್ಯ ಸರ್ಕಾರದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ನಿನ್ನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಹಾಗು ಸುರಹೊನ್ನೆ ಗ್ರಾಮಗಳಿಂದ ಚಾಲನೆ ನೀಡಲಾಗಿದೆ. ಕುಂದೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವ ಆರ್.ಅಶೋಕ್ ನಿನ್ನೆ ರಾತ್ರಿಯೇ ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಕುಂದೂರು ಗ್ರಾಮದ ರಂಗಮಂದಿರದ ಬಳಿ ಮಲಗಿದ್ದ ವೃದ್ಧರನ್ನು ಮಾತನಾಡಿಸಿದ ಸಚಿವ ಅಶೋಕ್, ವೃದ್ಧಾಪ್ಯ ವೇತನ ಸರಿಯಾಗಿ ಬರುತ್ತದೆಯೋ, ಇಲ್ಲವೋ ಎಂದು ವಿಚಾರಿಸಿದರು. ಬಳಿಕ ಗ್ರಾಮದ ಬಹುತೇಕ ಮನೆಗಳಿಗೆ ಭೇಟಿ ನೀಡಿದ ವೇಳೆ ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಹಲವರು ಸಾಥ್ ಕೊಟ್ಟರು.

ದಾವಣಗೆರೆಯಲ್ಲಿ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ

ಕುಂದೂರು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಭಜನೆ ಆಯೋಜಿಸಿದ್ದು, ಅಶೋಕ್ ಹಾಗು ರೇಣುಕಾಚಾರ್ಯ ಭಾಗಿಯಾಗಿದರು. ಈ ಸಂದರ್ಭದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಕುಂದೂರು ಗ್ರಾಮಸ್ಥರ ಜೊತೆ ಕಾಲ‌ ಕಳೆದರು.

ಗುರುಭವನದಲ್ಲಿ ವಿಶ್ರಾಂತಿ ಪಡೆದ ಅಶೋಕ್:

ಗ್ರಾಮದ ಗುರುಭವನದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಸಚಿವ ಹಾಗು ಶಾಸಕರು ಗುರು ಭವನದಲ್ಲಿ ಚಾಪೆ ಹಾಸಿಕೊಂಡು ಮಲಗಿದರು. ಬಳಿಕ ಮುಂಜಾನೆದ್ದು ದಿನ ಪತ್ರಿಕೆ ಓದಿದ ಸಚಿವರು ಗ್ರಾಮದ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು. ಬೆಳಗ್ಗೆ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದರು. ಇಂದು ಗ್ರಾಮ ವಾಸ್ತವ್ಯ ಮುಗಿಸಲಿದ್ದಾರೆ.

ಇದನ್ನೂ ಓದಿ:'ಮದುವೆಯಾಗಲು ವಧು ಹುಡುಕಿಕೊಡಿ..': ತಹಶೀಲ್ದಾರ್ ಮೊರೆಹೋದ ರೈತಾಪಿ ಯುವಕರು!

Last Updated :Oct 17, 2021, 12:42 PM IST

ABOUT THE AUTHOR

...view details