ಕರ್ನಾಟಕ

karnataka

ಐಸಿಸ್‌ ಉಗ್ರ ಸಂಘಟನೆಗೆ ಯುವಕರ ಸೇರಿಸಲು ಬೆಂಗಳೂರಲ್ಲಿ ನಡೆದಿತ್ತು ಭರ್ಜರಿ ಸಿದ್ಧತೆ!

By

Published : May 20, 2022, 7:26 AM IST

ರಾಜಧಾನಿ ಬೆಂಗಳೂರಲ್ಲಿ ಐಸಿಸ್​ ಉಗ್ರ ಸಂಘಟನೆಗೆ ಭರ್ಜರಿ ನೇಮಕಾತಿ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಕುರಿತು ಎನ್​ಐಎ ಪೂರಕ ಜಾರ್ಜ್​ಶೀಟ್​ ಸಿದ್ಧಪಡಿಸಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

NIA charge sheet ready over ISIS recruitment in Bangalore, NIA charge sheet submit over ISIS recruitment in Bangalore, ISIS recruitment in Bangalore news, Bengaluru crime news, ಬೆಂಗಳೂರಿನಲ್ಲಿ ಐಸಿಸ್​ ನೇಮಕಾತಿ ಕುರಿತು ಎನ್​ಐಎ ಚಾರ್ಜ್ ಶೀಟ್ ಸಿದ್ಧ, ಬೆಂಗಳೂರಿನಲ್ಲಿ ಐಸಿಸ್​ ನೇಮಕಾತಿ ಕುರಿತು ಎನ್​ಐಎ ಚಾರ್ಜ್ ಶೀಟ್ ಸಲ್ಲಿಕೆ, ಬೆಂಗಳೂರಿನಲ್ಲಿ ಐಸಿಸ್​ ನೇಮಕಾತಿ ಸುದ್ದಿ, ಬೆಂಗಳೂರು ಅಪರಾಧ ಸುದ್ದಿ,
ರಾಜಧಾನಿ ಬೆಂಗಳೂರಲ್ಲಿ ನಡೆದಿತ್ತು ಐಸಿಸ್ ಗೆ ಭರ್ಜರಿ ನೇಮಕಾತಿ

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಐಸಿಸ್ ಉಗ್ರ ಸಂಘಟನೆಗೆ(ಇಸ್ಲಾಮಿಕ್‌ ಸ್ಟೇಟ್‌) ಯುವಕರ ನೇಮಕಾತಿಗಾಗಿ ದೊಡ್ಡ ವೇದಿಕೆಯೇ ಸಿದ್ದವಾಗಿತ್ತು ಎನ್ನುವ ಸ್ಪೋಟಕ ಅಂಶ ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ.

ಎನ್​ಐಎ ಪ್ರಕಟನೆ

ಪ್ರಮುಖವಾಗಿ, ಜೊಹೈಬ್ ಮನ್ನ ಹಾಗೂ ಅಬ್ದುಲ್ ಖಾದೀರ್ ಎಂಬುವವರು ಸುಮಾರು 28 ಅನ್ಯಕೋಮಿನ ಯುವಕರನ್ನು ಇಸ್ಲಾಂಗೆ ಮತಾಂತರ ಮಾಡಿದ್ದರು. ಡಿನ್ನರ್ ಪಾರ್ಟಿಯೊಂದರ ನೆಪದಲ್ಲಿ ಕರೆದು ಯುವಕರಿಗೆ ಉಗ್ರವಾದದ ಭಾಷಣ ಮಾಡಿ ಪ್ರಚೋದಿಸಿ ಐಸಿಸ್ ಸೇರಲು ಪ್ರೇರೇಪಿಸಲಾಗುತ್ತಿತ್ತು ಎನ್ನುವ ಆತಂಕಕಾರಿ ಅಂಶ ಬಯಲಾಗಿದೆ.

ಇದನ್ನೂ ಓದಿ:ಐಸಿಸ್​​ ಸಂಘಟನೆಗೆ ಯುವಕರನ್ನು ಸೆಳೆಯುತ್ತಿದ್ದ ವ್ಯಕ್ತಿ ಹೈದರಾಬಾದ್​ನಲ್ಲಿ ಬಂಧನ

ಸಿರಿಯಾದಲ್ಲಿ ಕುಖ್ಯಾತ ಬಂಡುಕೋರ ಎಂದು ಗುರುತಿಸಿಕೊಂಡಿದ್ದ ಮಹಮ್ಮದ್ ಸಾಜಿದ್ ಬೆಂಗಳೂರಿಗೆ ಆಗಮಿಸಿ ಭಾಷಣ ಮಾಡಿದ್ದ. ಈತ ಮೂರು ದಿನಗಳ ಕಾಲ ನಗರದಲ್ಲೇ ಉಳಿದುಕೊಂಡು ಯುವಕರಿಗೆ ಐಸಿಸ್ ಸೇರಲು ಪ್ರೇರೇಪಿಸಿದ್ದಾನೆೆ. ಅಷ್ಟೇ ಅಲ್ಲ, ಬೆಂಗಳೂರಿನಿಂದ ಮರಳಿ ಹೋಗುವಾಗ ಹಲವು ಯುವಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಆತನನ್ನು ಬೀಳ್ಕೊಟ್ಟಿದ್ದರು ಎಂದು ಎನ್ಐಎ ತನ್ನ ಚಾರ್ಜ್​ಶೀಟ್​ನಲ್ಲಿ ವಿವರವಾಗಿ ತಿಳಿಸಿದೆ.

ABOUT THE AUTHOR

...view details